Muhammad Rizwan: ಮೊಹಮ್ಮದ್ ರಿಝ್ವಾನ್ ಈಗ ಸಿಕ್ಸರ್ ಕಿಂಗ್..!
TV9 Web | Updated By: ಝಾಹಿರ್ ಯೂಸುಫ್
Updated on:
Jan 15, 2024 | 11:52 AM
Muhammad Rizwan: ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಒಂದು ಸಿಕ್ಸ್ ಬಾರಿಸುವುದರೊಂದಿಗೆ ಪಾಕಿಸ್ತಾನ್ ಪರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಮೊಹಮ್ಮದ್ ರಿಝ್ವಾನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಮೊಹಮ್ಮದ್ ಹಫೀಝ್ ಹೆಸರಿನಲ್ಲಿತ್ತು.
1 / 5
ನ್ಯೂಝಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ಆರಂಭಿಕ ಆಟಗಾರ ಮೊಹಮ್ಮದ್ ರಿಝ್ವಾನ್ ಕೇವಲ 7 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಏಳು ರನ್ಗಳಲ್ಲಿ ಒಂದು ಸಿಕ್ಸ್ ಕೂಡ ಒಳಗೊಂಡಿತ್ತು. ಈ ಸಿಕ್ಸ್ನೊಂದಿಗೆ ರಿಝ್ವಾನ್ ಪಾಕ್ ಪರ ಹೊಸ ದಾಖಲೆ ಬರೆದಿದ್ದಾರೆ.
2 / 5
ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಒಂದು ಸಿಕ್ಸ್ ಬಾರಿಸುವುದರೊಂದಿಗೆ ಪಾಕಿಸ್ತಾನ್ ಪರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಮೊಹಮ್ಮದ್ ರಿಝ್ವಾನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಮೊಹಮ್ಮದ್ ಹಫೀಝ್ ಹೆಸರಿನಲ್ಲಿತ್ತು.
3 / 5
ಪಾಕಿಸ್ತಾನ್ ಪರ 108 ಇನಿಂಗ್ಸ್ಗಳನ್ನಾಡಿದ್ದ ಮೊಹಮ್ಮದ್ ಹಫೀಝ್ 76 ಸಿಕ್ಸ್ಗಳನ್ನು ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಮೊಹಮ್ಮದ್ ರಿಝ್ವಾನ್ ಹೊಸ ಇತಿಹಾಸ ಬರೆದಿದ್ದಾರೆ.
4 / 5
ಪಾಕ್ ಪರ 75 ಟಿ20 ಇನಿಂಗ್ಸ್ ಆಡಿರುವ ಮೊಹಮ್ಮದ್ ರಿಝ್ವಾನ್ ಇದುವರೆಗೆ 77 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ್ ಪರ ಅತ್ಯಧಿಕ ಸಿಕ್ಸ್ಗಳನ್ನು ಬಾರಿಸಿದ ದಾಖಲೆಯನ್ನು ರಿಝ್ವಾನ್ ತಮ್ಮದಾಗಿಸಿಕೊಂಡಿದ್ದಾರೆ.
5 / 5
ನ್ಯೂಝಿಲೆಂಡ್ಗೆ ಜಯ: ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ನ್ಯೂಝಿಲೆಂಡ್ ತಂಡ ಜಯ ಸಾಧಿಸಿದೆ. ಹ್ಯಾಮಿಲ್ಟನ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 194 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 19.3 ಓವರ್ಗಳಲ್ಲಿ 173 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ನ್ಯೂಝಿಲೆಂಡ್ ತಂಡವು 21 ರನ್ಗಳ ಭರ್ಜರಿ ಜಯ ಸಾಧಿಸಿದೆ.