IPL 2024: ಹಾರ್ದಿಕ್ ಪಾಂಡ್ಯಗಾಗಿ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!

| Updated By: ಝಾಹಿರ್ ಯೂಸುಫ್

Updated on: Dec 25, 2023 | 11:26 AM

IPL 2024 Hardik Pandya: ಹಾರ್ದಿಕ್ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್​ ತಂಡದ ಹೊಸ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.

1 / 7
IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-17 ರಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿಯಲಿರುವುದು ಗೊತ್ತೇ ಇದೆ. ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಪಾಂಡ್ಯರನ್ನು ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಟ್ರೇಡ್ ಮಾಡಿಕೊಂಡಿತ್ತು.

2 / 7
ಆದರೆ ಈ ಟ್ರೇಡ್​ಗಾಗಿ ಮುಂಬೈ ಇಂಡಿಯನ್ಸ್​ ಬರೋಬ್ಬರಿ 100 ಕೋಟಿ ರೂ. ನೀಡಿದೆ ವರದಿಯಾಗಿದೆ. ಅಂದರೆ ಹಾರ್ದಿಕ್ ಪಾಂಡ್ಯರನ್ನು ಮಾರಾಟ ಮಾಡಲು ಗುಜರಾತ್ ಟೈಟಾನ್ಸ್ ಬೃಹತ್ ಮೊತ್ತದ ಡಿಮ್ಯಾಂಡ್ ಇಟ್ಟಿದ್ದರು.

3 / 7
ಗುಜರಾತ್ ಟೈಟಾನ್ಸ್​ ಫ್ರಾಂಚೈಸಿ ಮುಂದಿಟ್ಟ ವರ್ಗಾವಣೆ ಶುಲ್ಕವನ್ನು ಒಪ್ಪಿಕೊಂಡ ಮುಂಬೈ ಇಂಡಿಯನ್ಸ್, ಅಂತಿಮವಾಗಿ 100 ಕೋಟಿ ರೂ. ಪಾವತಿಸಿ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಿಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಂದರೆ ಇಲ್ಲಿ ಪಾಂಡ್ಯ ಖರೀದಿಗಾಗಿ ಮುಂಬೈ ಇಂಡಿಯನ್ಸ್ ಬರೋಬ್ಬರಿ ನೂರು ಕೋಟಿ ರೂ. ಖರ್ಚು ಮಾಡಿದೆ.

4 / 7
ಐಪಿಎಲ್ ಟ್ರೇಡಿಂಗ್ ನಿಯಮಗಳ ಪ್ರಕಾರ, ಒಬ್ಬ ಆಟಗಾರನನ್ನು ಟ್ರೇಡ್ ಮಾಡಿಕೊಳ್ಳಬೇಕಿದ್ದರೆ ಎರಡೂ ಫ್ರಾಂಚೈಸಿಗಳು ಒಮ್ಮತಕ್ಕೆ ಬರಬೇಕು. ಅಲ್ಲದೆ ಆಟಗಾರನ ಮಾರಾಟ ಮಾಡುವ ಫ್ರಾಂಚೈಸಿಯು ಹೇಳುವ ಮೊತ್ತವನ್ನು ಖರೀದಿಸುವ ಫ್ರಾಂಚೈಸಿ ನೀಡಬೇಕಾಗುತ್ತದೆ. ಹೀಗೆ ಎರಡು ಫ್ರಾಂಚೈಸಿಗಳ ನಡುವೆ ಡೀಲ್ ಕುದುರಿದರೆ ಮಾತ್ರ ಟ್ರೇಡಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

5 / 7
ಅದರಂತೆ ಹಾರ್ದಿಕ್ ಪಾಂಡ್ಯರ ಖರೀದಿಗೆ ಮುಂದಾಗಿದ್ದ ಮುಂಬೈ ಇಂಡಿಯನ್ಸ್​ಗೆ ಗುಜರಾತ್ ಟೈಟಾನ್ಸ್​ ಬೃಹತ್ ಮೊತ್ತದ ಬೇಡಿಕೆಯಿಟ್ಟರು. ಅಂತಿಮವಾಗಿ 100 ಕೋಟಿ ರೂ.ಗಳ ಡೀಲ್​ನೊಂದಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪಾಂಡ್ಯರನ್ನು ಖರೀದಿಸಿದೆ ಎಂದು ವರದಿಯಾಗಿದೆ.

6 / 7
ಇತ್ತ ಬೃಹತ್ ಮೊತ್ತ ಪಾವತಿಸಿ ಖರೀದಿಸಿದ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್​ ತಂಡದ ಹೊಸ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.

7 / 7
ಮುಂಬೈ ಇಂಡಿಯನ್ಸ್ ತಂಡ​: ಹಾರ್ದಿಕ್ ಪಾಂಡ್ಯ (ನಾಯಕ) ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್. ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆಂಡಾರ್ಫ್ ,ರೊಮಾರಿಯೋ ಶೆಫರ್ಡ್, ರೊಮಾರಿಯೋ ಶೆಫರ್ಡ್. ಜೆರಾಲ್ಡ್ ಕೋಟ್ಝಿ , ದಿಲ್ಶನ್ ಮಧುಶಂಕ , ಶ್ರೇಯಸ್ ಗೋಪಾಲ್ , ನುವಾನ್ ತುಷಾರ , ನಮನ್ ಧೀರ್ , ಅನ್ಶುಲ್ ಕಾಂಬೋಜ್ , ಮೊಹಮ್ಮದ್ ನಬಿ, ಶಿವಾಲಿಕ್ ಶರ್ಮಾ.