4 ಓವರ್​ಗಳಲ್ಲಿ 93 ರನ್​ಗಳು… 7 ರನ್​ಗಳಿಂದ ಬೌಲರ್​ಗೆ ಶತಕ ಮಿಸ್..!

|

Updated on: Oct 24, 2024 | 7:53 AM

Zimbabwe vs Gambia: ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗ್ಯಾಂಬಿಯಾ ವಿರುದ್ಧ ಝಿಂಬಾಬ್ವೆ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ 344 ರನ್ ಕಲೆಹಾಕಿದರೆ, ಗ್ಯಾಂಬಿಯಾ ತಂಡವು ಕೇವಲ 54 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಝಿಂಬಾಬ್ವೆ ಪಡೆಯು 290 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

1 / 5
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್​ಗಳನ್ನು ಎಸೆದ ಕಳಪೆ ದಾಖಲೆಯೊಂದು ಮೂಸಾ ಜೋಬರ್ತೆ ಹೆಸರಿಗೆ ಸೇರ್ಪಡೆಯಾಗಿದೆ. ಅದು ಸಹ 24 ಎಸೆತಗಳಲ್ಲಿ 93 ರನ್​ಗಳನ್ನು ನೀಡುವ ಮೂಲಕ ಎಂದರೆ ನಂಬಲೇಬೇಕು. ಅಂದರೆ ಇಲ್ಲಿ ಬೌಲರ್​ಗೆ ಶತಕ ತಪ್ಪಿದ್ದು ಕೇವಲ 7 ರನ್​ಗಳಿಂದ..!

2 / 5
ಹೌದು, ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಗ್ಯಾಂಬಿಯಾ ಬೌಲರ್​ ಮೂಸಾ ಜೋಬರ್ತೆ 4 ಓವರ್​ಗಳಲ್ಲಿ ಬರೋಬ್ಬರಿ 93 ರನ್​ಗಳನ್ನು ನೀಡಿದ್ದಾರೆ. ಈ ಮೂಲಕ ಟಿ20 ಪಂದ್ಯವೊಂದರಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ.

3 / 5
ಇದಕ್ಕೂ ಮುನ್ನ ಈ ಅನಗತ್ಯ ದಾಖಲೆ ಶ್ರೀಲಂಕಾದ ಕಸುನ್ ರಜಿತ ಹೆಸರಿನಲ್ಲಿತ್ತು. 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಸುನ್ 4 ಓವರ್​ಗಳಲ್ಲಿ ಬರೋಬ್ಬರಿ 75 ರನ್​ಗಳನ್ನು ನೀಡಿದ್ದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಂತ ದುಬಾರಿ ಸ್ಪೆಲ್​ ಎಸೆದ ಬೌಲರ್ ಎನಿಸಿಕೊಂಡಿದ್ದರು.

4 / 5
ಇದೀಗ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೂಸಾ ಜೋಬರ್ತೆ 4 ಓವರ್​ಗಳಲ್ಲಿ 93 ರನ್ ಚಚ್ಚಿಸಿಕೊಂಡಿದ್ದಾರೆ. ಅಂದರೆ ಪ್ರತಿ ಓವರ್​ಗೆ ಅವರು 23.25 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ದುಬಾರಿ ಓವರ್​ಗಳನ್ನು ಎಸೆದ ಅನಗತ್ಯ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

5 / 5
ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಅತ್ಯಂತ ದುಬಾರಿ ಓವರ್​ಗಳನ್ನು ಎಸೆದ ಕೆಟ್ಟ ದಾಖಲೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಹೆಸರಿನಲ್ಲಿದೆ. 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪ್ರಸಿದ್ಧ್ 4 ಓವರ್​ಗಳಲ್ಲಿ 68 ರನ್ ಚಚ್ಚಿಸಿಕೊಳ್ಳುವ ಈ ಕಳಪೆ ದಾಖಲೆ ನಿರ್ಮಿಸಿದ್ದಾರೆ.