KAR vs NAM: ನಮೀಬಿಯಾ ವಿರುದ್ಧ ಕನ್ನಡಿಗನ ಸಿಡಿಲಬ್ಬರದ ಶತಕ..!

| Updated By: ಝಾಹಿರ್ ಯೂಸುಫ್

Updated on: Jun 07, 2023 | 6:47 PM

Namibia vs Karnataka: ವಿಶೇಷ ಎಂದರೆ ಇದು ನಮೀಬಿಯಾ ವಿರುದ್ಧ ಎಲ್​ಆರ್​ ಚೇತನ್ ಅವರ 2ನೇ ಶತಕ. ಇದಕ್ಕೂ ಮುನ್ನ 2ನೇ ಏಕದಿನ ಪಂದ್ಯದಲ್ಲಿ ಕರುನಾಡ ಕುವರ 147 ಎಸೆತಗಳಲ್ಲಿ 169 ಬಾರಿಸಿ ಮಿಂಚಿದ್ದರು.

1 / 7
Namibia vs Karnataka: ವಿಂಡ್​ಹೋಕ್​ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ನಮೀಬಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕರ್ನಾಟಕದ ಯುವ ದಾಂಡಿಗ ಎಲ್​ಆರ್​ ಚೇತನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರವಿಕುಮಾರ್ ಸಮರ್ಥ್ ಫೀಲ್ಡಿಂಗ್ ಆಯ್ದುಕೊಂಡಿದ್ದರು.

2 / 7
ಅದರಂತೆ ಮೊದಲು ಬ್ಯಾಟ್ ಮಾಡಿದ ನಮೀಬಿಯಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಶಾನ್ ಫೌಷೆಯನ್ನು ಹಾಗೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೈಕೆಲ್ ವ್ಯಾನ್​ ಲಿಂಗನ್​ರನ್ನು 6ನೇ ಓವರ್​ನಲ್ಲಿ ವಿಜಯಕುಮಾರ್ ವೈಶಾಕ್ ಔಟ್ ಮಾಡಿ ಕರ್ನಾಟಕಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು.

3 / 7
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಝೇನ್ ಗ್ರೀನ್ 72 ಎಸೆತಗಳಲ್ಲಿ 3 ಫೋರ್ ಹಾಗೂ 2 ಸಿಕ್ಸ್​ನೊಂದಿಗೆ ಅಜೇಯ 65 ರನ್ ಬಾರಿಸಿದರು. ಇನ್ನು ಗ್ರೀನ್​ಗೆ ಸಾಥ್ ನೀಡಿದ ಬೆರ್ನಾಡ್ 6 ಭರ್ಜರಿ ಸಿಕ್ಸ್​ನೊಂದಿಗೆ 49 ಎಸೆತಗಳಲ್ಲಿ 59 ರನ್ ಸಿಡಿಸಿದರು. ಇದಾಗ್ಯೂ ಕೆಲ ಕ್ರಮಾಂಕದಲ್ಲಿ ಕುಸಿತ ಕಂಡ ನಮೀಬಿಯಾ ತಂಡವು 45.1 ಓವರ್​ಗಳಲ್ಲಿ 226 ರನ್​ಗಳಿಸಿ ಸರ್ವಪತನ ಕಂಡಿತು.

4 / 7
ಕರ್ನಾಟಕ ಪರ ಶುಭಾಂಗ್ ಹೆಗ್ಡೆ 10 ಓವರ್​ಗಳಲ್ಲಿ 44 ರನ್ ನೀಡಿ 3 ವಿಕೆಟ್ ಪಡೆದರೆ, ವಿಜಯಕುಮಾರ್ ವೈಶಾಕ್ 2 ವಿಕೆಟ್ ಕಬಳಿಸಿದರು. ಇನ್ನು ನಿಕಿನ್ ಜೋಸ್ ಹಾಗೂ ರಿಷಿ ಬೋಪಣ್ಣ ತಲಾ 1 ವಿಕೆಟ್ ಪಡೆದರು.

5 / 7
ಈ ಮೊತ್ತವನ್ನು ಬೆನ್ನತ್ತಿದ ಕರ್ನಾಟಕ ತಂಡಕ್ಕೆ ಎಲ್​ಆರ್ ಚೇತನ್ ಸಿಡಿಲಬ್ಬರದ ಆರಂಭ ಒದಗಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಯುವ ದಾಂಡಿಗ ನಮೀಬಿಯಾ ಬೌಲರ್​ಗಳ ಬೆಂಡೆತ್ತಿದರು.

6 / 7
ಪರಿಣಾಮ 25 ಓವರ್​ ವೇಳೆಗೆ ಕರ್ನಾಟಕ ತಂಡದ ಮೊತ್ತ 150 ರ ಗಡಿ ತಲುಪಿತು. ಇತ್ತ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಚೇತನ್ 15 ಫೋರ್ ಹಾಗೂ 1 ಭರ್ಜರಿ ಸಿಕ್ಸ್ ಸಿಡಿಸಿದರು. ಈ ಮೂಲಕ ಕೇವಲ 92 ಎಸೆತಗಳಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದರು.

7 / 7
ವಿಶೇಷ ಎಂದರೆ ಇದು ನಮೀಬಿಯಾ ವಿರುದ್ಧ ಎಲ್​ಆರ್​ ಚೇತನ್ ಅವರ 2ನೇ ಶತಕ. ಇದಕ್ಕೂ ಮುನ್ನ 2ನೇ ಏಕದಿನ ಪಂದ್ಯದಲ್ಲಿ ಕರುನಾಡ ಕುವರ  147 ಎಸೆತಗಳಲ್ಲಿ 169 ಬಾರಿಸಿ ಮಿಂಚಿದ್ದರು.