Namibia vs Karnataka: ಕರ್ನಾಟಕ ವಿರುದ್ಧ ನಮೀಬಿಯಾಗೆ ರೋಚಕ ಜಯ..!
TV9 Web | Updated By: ಝಾಹಿರ್ ಯೂಸುಫ್
Updated on:
Jun 04, 2023 | 10:07 PM
Namibia vs Karnataka: ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಪರ ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ (5) ಬೇಗನೆ ವಿಕೆಟ್ ಒಪ್ಪಿಸಿದರು
1 / 8
Namibia vs Karnataka: ವಿಂಡ್ಹೋಕ್ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆತಿಥೇಯ ನಮೀಬಿಯಾ ತಂಡವು ರೋಚಕ ಜಯ ಸಾಧಿಸಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು.
2 / 8
ಅದರಂತೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಪರ ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ (5) ಬೇಗನೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಎಲ್ಆರ್ ಚೇತನ್ ಹಾಗೂ ನಿಕಿನ್ ಜೋಸ್ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೆಗಲೇರಿಸಿಕೊಂಡರು. ಪರಿಣಾಮ ಕರ್ನಾಟಕ ತಂಡವು ಆರಂಭಿಕ ಆಘಾತದಿಂದ ಪಾರಾಯಿತು.
3 / 8
ಇನ್ನು ತಂಡದ ಮೊತ್ತದ 100ರ ಗಡಿದಾಟುತ್ತಿದ್ದಂತೆ ಬಿರುಸಿನ ಆಟಕ್ಕೆ ಒತ್ತು ನೀಡಿದ ಚೇತನ್-ನಿಕಿನ್ ಜೋಡಿ ರನ್ಗಳಿಕೆ ವೇಗವನ್ನು ಹೆಚ್ಚಿಸಿದರು. ಅದರಲ್ಲೂ ಅರ್ಧಶತಕದ ಬಳಿಕ ಭರ್ಜರಿಯಾಗಿ ಬ್ಯಾಟ್ ಬೀಸಿದ ಎಲ್ಆರ್ ಚೇತನ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಅದರಂತೆ ಒಟ್ಟು 8 ಭರ್ಜರಿ ಸಿಕ್ಸ್ ಹಾಗೂ 13 ಫೋರ್ ಒಳಗೊಂಡಂತೆ 147 ಎಸೆತಗಳಲ್ಲಿ 169 ರನ್ ಬಾರಿಸಿದ ಚೇತನ್ ಜಾನ್ ಫೈಲಿಂಕ್ಗೆ ವಿಕೆಟ್ ಒಪ್ಪಿಸಿದರು.
4 / 8
ಇನ್ನು ಚೇತನ್ಗೆ ಉತ್ತಮ ಸಾಥ್ ನೀಡಿದ ನಿಕಿನ್ ಜೋಸ್ ಕೂಡ ಅದ್ಭುತ ಇನಿಂಗ್ಸ್ ಆಡಿದರು. ನಮೀಬಿಯಾದ ಅನುಭವಿ ಬೌಲರ್ಗಳನ್ನು ದಿಟ್ಟತನದಿಂದಲೇ ಎದುರಿಸಿದ ನಿಕಿನ್ 109 ಎಸೆತಗಳಲ್ಲಿ 103 ರನ್ ಬಾರಿಸಿ ಮಿಂಚಿದರು. ಪರಿಣಾಮ ನಿಗದಿತ 50 ಓವರ್ಗಳಲ್ಲಿ ಕರ್ನಾಟಕ ತಂಡವು 4 ವಿಕೆಟ್ ನಷ್ಟಕ್ಕೆ 360 ರನ್ ಕಲೆಹಾಕಿತು.
5 / 8
361 ರನ್ಗಳ ಬೃಹತ್ ಗುರಿ ಪಡೆದ ನಮೀಬಿಯಾ ತಂಡವು ಸ್ಪೋಟಕ ಆರಂಭ ಪಡೆಯಿತು. ಆರಂಭಿಕರಾದ ಸ್ಟೀಫನ್ ಬಾರ್ಡ್ (57) ಹಾಗೂ ನಿಕೋಲಸ್ ಡಾವಿನ್ (70) ಮೊದಲ ವಿಕೆಟ್ಗೆ 119 ರನ್ಗಳ ಜೊತೆಯಾಟವಾಡಿದರು.
6 / 8
ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೈಕೆಲ್ ವ್ಯಾನ್ ಲಿಂಗನ್ ಕರ್ನಾಟಕದ ಬೌಲರ್ಗಳ ಬೆಂಡೆತ್ತಿದರು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಲಿಂಗನ್ 85 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಸ್ಪೋಟಕ ಸೆಂಚುರಿ ಸಿಡಿಸಿದರು. ಪರಿಣಾಮ 44 ಓವರ್ಗಳಾಗುವಷ್ಟರಲ್ಲಿ ನಮೀಬಿಯಾ ತಂಡದ ಸ್ಕೋರ್ 300 ರ ಗಡಿದಾಟಿತು.
7 / 8
ಮತ್ತೊಂದೆಡೆ ಮೈಕೆಲ್ ವ್ಯಾನ್ ಲಿಂಗನ್ಗೆ ಸಾಥ್ ನೀಡಿದ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಅಕ್ಷರಶಃ ಅಬ್ಬರಿಸಿದ್ದರು. ಕೇವಲ 67 ಎಸೆತಗಳನ್ನು ಎದುರಿಸಿದ ಎರಾಸ್ಮಸ್ 2 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ 91 ರನ್ ಬಾರಿಸಿ ವಿಜಯಕುಮಾರ್ ವೈಶಾಕ್ಗೆ ವಿಕೆಟ್ ಒಪ್ಪಿಸಿದರು.
8 / 8
ಅಷ್ಟರಲ್ಲಾಗಲೇ ನಮೀಬಿಯಾ ತಂಡವು ಗೆಲುವಿನತ್ತ ಮುಖ ಮಾಡಿತ್ತು. ಇದಾಗ್ಯೂ ಕೊನೆಯ ಓವರ್ನಲ್ಲಿ 7 ರನ್ಗಳ ಗುರಿ ಪಡೆದಿದ್ದ ಆತಿಥೇಯರನ್ನು ನಿಯಂತ್ರಿಸುವಲ್ಲಿ ಆದಿತ್ಯ ಗೋಯಲ್ ಯಶಸ್ವಿಯಾಗಿದ್ದರು. ಆದರೆ 5ನೇ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ಜಾನ್ ಫ್ರೈಲಿಂಗ್ ನಮೀಬಿಯಾ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಸದ್ಯ 5 ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಬಲ ಹೊಂದಿದ್ದು, ಇನ್ನೂ 3 ಪಂದ್ಯಗಳು ಬಾಕಿಯಿವೆ.