Nathan Lyon: ಬರೋಬ್ಬರಿ 500 ವಿಕೆಟ್: ದಾಖಲೆ ಬರೆದ ನಾಥನ್ ಲಿಯಾನ್
TV9 Web | Updated By: ಝಾಹಿರ್ ಯೂಸುಫ್
Updated on:
Dec 17, 2023 | 2:27 PM
Nathan Lyon Records: ಆಸ್ಟ್ರೇಲಿಯಾದ ಲೆಜೆಂಡ್ ಸ್ಪಿನ್ನರ್ ಶೇನ್ ವಾರ್ನ್ (708) ಹಾಗೂ ಗ್ಲೆನ್ ಮೆಕ್ಗ್ರಾಥ್ (563) ಈ ಸಾಧನೆ ಮಾಡಿದ್ದರು. ಇದೀಗ 123 ಟೆಸ್ಟ್ ಪಂದ್ಯಗಳ ಮೂಲಕ ಒಟ್ಟು 501 ವಿಕೆಟ್ ಕಬಳಿಸಿ ವಿಶೇಷ ಸಾಧಕರ ಪಟ್ಟಿಗೆ ಲಿಯಾನ್ ಸೇರ್ಪಡೆಯಾಗಿದ್ದಾರೆ.
1 / 8
ಪರ್ತ್ನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ಗಳನ್ನು ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 3ನೇ ಬೌಲರ್ ಎನಿಸಿಕೊಂಡಿದ್ದಾರೆ.
2 / 8
ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಲೆಜೆಂಡ್ ಸ್ಪಿನ್ನರ್ ಶೇನ್ ವಾರ್ನ್ (708) ಹಾಗೂ ಗ್ಲೆನ್ ಮೆಕ್ಗ್ರಾಥ್ (563) ಈ ಸಾಧನೆ ಮಾಡಿದ್ದರು. ಇದೀಗ 123 ಟೆಸ್ಟ್ ಪಂದ್ಯಗಳ ಮೂಲಕ ಒಟ್ಟು 501 ವಿಕೆಟ್ ಕಬಳಿಸಿ ವಿಶೇಷ ಸಾಧಕರ ಪಟ್ಟಿಗೆ ಲಿಯಾನ್ ಸೇರ್ಪಡೆಯಾಗಿದ್ದಾರೆ.
3 / 8
ಹಾಗೆಯೇ ಟೆಸ್ಟ್ ಕ್ರಿಕೆಟ್ನಲ್ಲಿ 500+ ವಿಕೆಟ್ ಕಬಳಿಸಿರುವುದು ಕೇವಲ 8 ಬೌಲರ್ಗಳು ಮಾತ್ರ. ಈ ಪಟ್ಟಿಯಲ್ಲಿ ಕಾಣಿಸಿಕೊಂಡ 4ನೇ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ನಾಥನ್ ಲಿಯಾನ್ ಪಾತ್ರರಾಗಿದ್ದಾರೆ.
4 / 8
ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮಾಜಿ ಸ್ಪಿನ್ನರ್ 133 ಪಂದ್ಯಗಳಿಂದ ಒಟ್ಟು 800 ವಿಕೆಟ್ ಉರುಳಿಸಿ ವಿಶ್ವ ದಾಖಲೆ ಬರೆದಿಟ್ಟಿದ್ದಾರೆ.
5 / 8
ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ಗಳ ಪಟ್ಟಿಯಲ್ಲಿ ಶೇನ್ ವಾರ್ನ್ (708), ದ್ವಿತೀಯ ಸ್ಥಾನದಲ್ಲಿದ್ದು, ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ (690) ಮೂರನೇ ಸ್ಥಾನದಲ್ಲಿದ್ದಾರೆ.
6 / 8
ಹಾಗೆಯೇ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ 500+ ವಿಕೆಟ್ ಪಡೆದಿರುವುದು ಅನಿಲ್ ಕುಂಬ್ಳೆ ಮಾತ್ರ. 132 ಪಂದ್ಯಗಳಿಂದ ಒಟ್ಟು 619 ವಿಕೆಟ್ ಕಬಳಿಸಿ ಕುಂಬ್ಳೆ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
7 / 8
ಇನ್ನು ಸ್ಟುವರ್ಟ್ ಬ್ರಾಡ್ (604) 5ನೇ ಸ್ಥಾನದಲ್ಲಿದ್ದರೆ, ಗ್ಲೆನ್ ಮೆಕ್ಗ್ರಾಥ್ (563) ಹಾಗೂ ವೆಸ್ಟ್ ಇಂಡೀಸ್ನ ಕರ್ಟ್ನಿ ವಾಲ್ಷ್ (519) ಕ್ರಮವಾಗಿ 6ನೇ ಮತ್ತು 7ನೇ ಸ್ಥಾನದಲ್ಲಿದ್ದಾರೆ.
8 / 8
ಇದೀಗ 501 ವಿಕೆಟ್ಗಳೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ 8ನೇ ಬೌಲರ್ ಎಂಬ ದಾಖಲೆಯನ್ನು ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ತಮ್ಮದಾಗಿಸಿಕೊಂಡಿದ್ದಾರೆ.