IND vs AUS: ‘ತಂಡಕ್ಕೂ ಅವರಿಗೂ ಏನು ಸಂಬಂಧ’; ಪಂಟರ್ಗೆ ಮಾತಿನ ಪಂಚ್ ಕೊಟ್ಟ ಗಂಭೀರ್
IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಸಿದ್ಧತೆ ನಡೆಯುತ್ತಿರುವಾಗ, ಗೌತಮ್ ಗಂಭೀರ್ ರಿಕಿ ಪಾಂಟಿಂಗ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಪಾಂಟಿಂಗ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಫಾರ್ಮ್ ಬಗ್ಗೆ ಪ್ರಶ್ನಿಸಿದ್ದರು. ಆದರೆ ಗಂಭೀರ್ ಅವರನ್ನು ಬೆಂಬಲಿಸಿ, ಅವರ ಅನುಭವ ಮತ್ತು ಕೊಡುಗೆಯನ್ನು ಎತ್ತಿ ಹಿಡಿದಿದ್ದಾರೆ. ಭಾರತ ತಂಡದಲ್ಲಿ ಹಸಿವು ಮತ್ತು ಗೆಲುವಿನ ಬಯಕೆ ಇದೆ ಎಂದು ಗಂಭೀರ್ ಭರವಸೆ ನೀಡಿದ್ದಾರೆ.
1 / 6
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಭಾರತ ತಂಡ ಈಗಾಗಲೇ ಎರಡು ಭಾಗಗಳಾಗಿ ಆಸ್ಟ್ರೇಲಿಯಾಕ್ಕೆ ಹಾರಿದೆ. ಆದಾಗ್ಯೂ, ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು, ಗೌತಮ್ ಗಂಭೀರ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಅಲ್ಲಿ ಅವರು ಟೀಮ್ ಇಂಡಿಯಾದ ಯೋಜನೆಗೆ ಸಂಬಂಧಿಸಿದಂತೆ ಅನೇಕ ಮಾಹಿತಿಯನ್ನು ಹಂಚಿಕೊಂಡರು.
2 / 6
ಈ ವೇಳೆ ಗಂಭೀರ್, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು. ‘ಪಾಂಟಿಂಗ್‌ಗೂ ಭಾರತೀಯ ಕ್ರಿಕೆಟ್‌ಗೂ ಏನು ಸಂಬಂಧ?. ಅವರು ಆಸ್ಟ್ರೇಲಿಯನ್ ಕ್ರಿಕೆಟ್ ಬಗ್ಗೆ ಯೋಚಿಸಬೇಕು ಎಂದು ನಾನು ಭಾವಿಸುತ್ತೇನೆ. ವಿರಾಟ್ ಮತ್ತು ರೋಹಿತ್ ಬಗ್ಗೆ ಅವರು ಚಿಂತಿಸುವ ಅಗತ್ಯವಿಲ್ಲವೆಂದು ಗಂಭೀರ್ ಖಾರವಾಗಿ ಮಾತನಾಡಿದ್ದಾರೆ.
3 / 6
ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ರಿಕಿ ಪಾಂಟಿಂಗ್ ಭಾರತೀಯ ಆಟಗಾರರ ಮೇಲೆ ಪ್ರಶ್ನೆಗಳನ್ನು ಎತ್ತಿದ್ದರು. ಅದರಲ್ಲೂ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಟೀಕೆಗೆ ಗುರಿಯಾಗಿತ್ತು. ಕೊಹ್ಲಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದ ಪಾಂಟಿಂಗ್, ‘ಕೊಹ್ಲಿಯನ್ನು ಹೊರತುಪಡಿಸಿ ಯಾವುದೇ ಆಟಗಾರ ಐದು ವರ್ಷಗಳಲ್ಲಿ ಕೇವಲ ಎರಡು ಶತಕಗಳನ್ನು ಬಾರಿಸಿದ್ದರೆ ಅವರು ತಂಡದಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದ್ದರು.
4 / 6
ಈ ವಿಷಯದ ಬಗ್ಗೆ ಗಂಭೀರ್ ಅವರನ್ನು ಪ್ರಶ್ನಿಸಿದಾಗ, ಅವರು ಪಾಂಟಿಂಗ್‌ಗೆ ಬಹಿರಂಗವಾಗಿಯೇ ಕ್ಲಾಸ್ ತೆಗೆದುಕೊಂಡರು. ಪಾಂಟಿಂಗ್‌ಗೂ ಭಾರತೀಯ ಕ್ರಿಕೆಟ್‌ಗೂ ಏನು ಸಂಬಂಧ? ಅವರು ಆಸ್ಟ್ರೇಲಿಯಾದ ಆಟಗಾರರ ಬಗ್ಗೆ ಯೋಚಿಸಬೇಕು. ಕೊಹ್ಲಿ ಮತ್ತು ರೋಹಿತ್‌ಗೆ ತಂಡಕ್ಕೆ ಉತ್ತಮ ಪ್ರದರ್ಶನ ನೀಡುವ ಹಸಿವು ಇದೆ.
5 / 6
ಅವರು ಭಾರತೀಯ ಕ್ರಿಕೆಟ್‌ಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಭವಿಷ್ಯದಲ್ಲಿಯೂ ಅದನ್ನೇ ಮಾಡುತ್ತಾರೆ. ಅವರು ಈಗಲೂ ಸಾಕಷ್ಟು ಶ್ರಮಿಸುತ್ತಿದ್ದಾರೆ.ಅಲ್ಲದೆ ಭಾರತೀಯ ಕ್ರಿಕೆಟ್‌ಗಾಗಿ ಬಹಳಷ್ಟು ಸಾಧಿಸಲು ಬಯಸುತ್ತಾರೆ. ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ, ರನ್, ವಿಕೆಟ್ ಅಥವಾ ಗೆಲುವಿನ ಹಸಿವು ಕಾಣಬೇಕು ಎನ್ನುವುದು ನನಗೆ ಮುಖ್ಯವಾಗಿದೆ ಮತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಎಲ್ಲರಿಗೂ ಅದೇ ಮುಖ್ಯವಾಗಿದೆ. ಭಾರತ ತಂಡದಲ್ಲಿ ಸಾಕಷ್ಟು ಹಸಿವು ಇದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
6 / 6
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಧ್ರುವ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ಆರ್ ಜಡೇಜಾ ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್.
Published On - 6:46 pm, Mon, 11 November 24