ಚೆನ್ನೈನಲ್ಲಿ ಧೋನಿಯ ಕೊನೆಯ ಐಪಿಎಲ್ ಪಂದ್ಯ; ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್

Dhoni's IPL Future: ಚೆನ್ನೈ ಸೂಪರ್ ಕಿಂಗ್ಸ್‌ನ ಸಿಇಒ ಕಾಶಿ ವಿಶ್ವನಾಥ್ ಅವರು ಮಹೇಂದ್ರ ಸಿಂಗ್ ಧೋನಿ ಅವರ ಐಪಿಎಲ್ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಧೋನಿ ಮುಂದಿನ ವರ್ಷಗಳಲ್ಲಿ ಆಡುತ್ತಾರೋ, ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಧೋನಿ ತಮ್ಮ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸಿಎಸ್‌ಕೆ ಧೋನಿ ಆಡಲು ಬಯಸುವವರೆಗೆ ಅವರಿಗೆ ಬಾಗಿಲು ತೆರೆದಿಡುತ್ತದೆ ಎಂದು ಕಾಶಿ ವಿಶ್ವನಾಥ್ ಹೇಳಿದ್ದಾರೆ.

ಪೃಥ್ವಿಶಂಕರ
|

Updated on: Nov 11, 2024 | 9:59 PM

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ವರ್ಷಗಳೇ ಕಳೆದಿವೆ. ಆದಾಗ್ಯೂ ಐಪಿಎಲ್​ನಲ್ಲಿ ಆಡುವ ಮೂಲಕ ಧೋನಿ, ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ. ಆದರೆ ಕಳೆದ ಎರಡು ಆವೃತ್ತಿಗಳಿಂದ ಧೋನಿ, ಐಪಿಎಲ್​ಗೂ ಗುಡ್​ಬೈ ಹೇಳುವ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಧೋನಿಯಾಗಲಿ, ಸಿಎಸ್​ಕೆ ಫ್ರಾಂಚೈಸಿಯಾಗಲಿ ಇದುವರೆಗೆ ಏನನ್ನೂ ಹೇಳಿರಲಿಲ್ಲ. ಇದೀಗ ಸಿಎಸ್​ಕೆ ಸಿಇಒ ಕಾಶಿ ವಿಶ್ವನಾಥ್ ಈ ಬಗ್ಗೆ ಮೌನ ಮುರಿದಿದ್ದಾರೆ.

1 / 5
ಮಹೇಂದ್ರ ಸಿಂಗ್ ಧೋನಿ ಅವರ ಐಪಿಎಲ್ ಭವಿಷ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥ್, ಧೋನಿ ಮತ್ತಷ್ಟು ಆಡುತ್ತಾರೋ ಅಥವಾ ಐಪಿಎಲ್ 2025 ಅವರ ಕೊನೆಯ ಸೀಸನ್ ಆಗಲಿದೆಯೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಧೋನಿ ತಮ್ಮ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ

2 / 5
ಮಹಿ ಭಾಯಿ ಅವರು ಯಾವುದೇ ವಿಚಾರವನ್ನು ಹೆಚ್ಚಾಗಿ ಯಾರ ಬಳಿಯೂ ಹಂಚಿಕೊಳ್ಳುವುದಿಲ್ಲ. ಹೆಚ್ಚಿಗೆ ಅವರು ತಮ್ಮಲ್ಲಿಯೇ ಎಲ್ಲಾ ವಿಚಾರವನ್ನು ಇಂಟುಕೊಂಡಿರುತ್ತಾರೆ. ಆದರೆ ತಾವು ನಿರ್ಧಾರ ತೆಗೆದುಕೊಂಡ ಆ ಕ್ಷಣವೇ ಅದನ್ನು ಹೊರಹಾಕುತ್ತಾರೆ. ಸಿಎಸ್‌ಕೆ ಮೇಲಿನ ಅವರ ಉತ್ಸಾಹ ಮತ್ತು ಅವರ ಅಭಿಮಾನಿಗಳಿಗಾಗಿ, ಧೋನಿ ಅವರು ತಮ್ಮ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡುವುದಾಗಿ ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ.

3 / 5
ಅವರು ಸಾಧ್ಯವಾದಷ್ಟು ಆಡಬೇಕೆಂದು ನಾವು ಬಯಸುತ್ತೇವೆ. ಧೋನಿ ಎಲ್ಲಿಯವರೆಗೆ ಆಡಲು ಬಯಸುತ್ತಾರೋ ಅಲ್ಲಿಯವರೆಗೆ ಅವರಿಗೆ ಸಿಎಸ್‌ಕೆ ಬಾಗಿಲು ತೆರೆದಿರುತ್ತದೆ. ನಾನು ಅವರನ್ನು ತಿಳಿದಿರುವ ಮತ್ತು ಅವರ ಬದ್ಧತೆಯನ್ನು ನೋಡಿ, ಅವರು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.

4 / 5
ಇನ್ನು ಸಿಎಸ್​ಕೆ ಫ್ರಾಂಚೈಸಿ ಮೆಗಾ ಹರಾಜಿಗೂ ಮುನ್ನ ಧೋನಿಯನ್ನು ಹೊರತುಪಡಿಸಿ ನಾಯಕ ರುತುರಾಜ್ ಗಾಯಕ್ವಾಡ್ (18 ಕೋಟಿ ರೂ.), ಮತಿಶಾ ಪತಿರಾನ (13 ಕೋಟಿ ರೂ.), ಶಿವಂ ದುಬೆ (ರೂ. 12 ಕೋಟಿ) ಮತ್ತು ರವೀಂದ್ರ ಜಡೇಜಾ (ರೂ. 18 ಕೋಟಿ) ಅವರನ್ನು ಉಳಿಸಿಕೊಂಡಿತ್ತು. ಐವರನ್ನು ಉಳಿಸಿಕೊಂಡಿರುವ ಸಿಎಸ್​ಕೆ ತನ್ನ ಪರ್ಸ್‌ನಿಂದ 65 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದು, 55 ಕೋಟಿ ರೂ. ಇಟ್ಟುಕೊಂಡು ಮೆಗಾ ಹರಾಜಿಗೆ ಪ್ರವೇಶಿಸಲಿದೆ.

5 / 5
Follow us
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ

ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್

ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ

ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!

ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ

ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ

ಎಂಟನೇ ತರಗತಿವರೆಗೆ ಓದಿರುವ ಮಗ ಗ್ಯಾರೇಜಲ್ಲಿ ಕೆಲಸ ಮಾಡುತ್ತಾನೆ: ತಾಯಿ

ಸಂಡೂರಿನ ಸಿದ್ದಾಪುರದಲ್ಲಿ ಪ್ರಜಾಪ್ರಭುತ್ವದ ಹಬ್ಬ, ಊರಹಬ್ಬ ಒಟ್ಟಿಗೆ ಬಂದಿವೆ

ಪಾರ್ಟನ್ ಚೈತ್ರಾ ವಿರುದ್ಧ ಉರಿದು ಬಿದ್ದ ತ್ರಿವಿಕ್ರಮ್, ಮಾಡಿದ್ದಾರೂ ಏನು?

ಸರ್ಕಾರಿ ಕಾರಿನ ಮೇಲೆ ಹತ್ತಿ ಯುವತಿಯ ಅಶ್ಲೀಲ ನೃತ್ಯ; ವಿಡಿಯೋ ವೈರಲ್