Updated on: Jan 15, 2023 | 9:33 PM
ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 317 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ಗಳ ಅಂತರದಿಂದ ಗೆದ್ದ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ.
ಇದಕ್ಕೂ ಮುನ್ನ ಈ ವಿಶ್ವ ದಾಖಲೆ ನ್ಯೂಜಿಲೆಂಡ್ ತಂಡದ ಹೆಸರಿನಲ್ಲಿತ್ತು. 2008 ರಲ್ಲಿ ನ್ಯೂಜಿಲೆಂಡ್ ತಂಡವು ಐರ್ಲೆಂಡ್ ವಿರುದ್ಧ 290 ರನ್ಗಳಿಂದ ಭರ್ಜರಿ ಜಯ ಸಾಧಿಸಿ ವಿಶ್ವ ದಾಖಲೆ ನಿರ್ಮಿಸಿತ್ತು. ಇದಾದ ಬಳಿಕ 2015 ರಲ್ಲಿ ಆಸ್ಟ್ರೇಲಿಯಾ ತಂಡವು ಅಫ್ಘಾನಿಸ್ತಾನ್ ವಿರುದ್ಧ 275 ರನ್ಗಳ ಅಮೋಘ ಗೆಲುವು ದಾಖಲಿಸಿತ್ತು.
ಇದಾದ ಬಳಿಕ 2015 ರಲ್ಲಿ ಆಸ್ಟ್ರೇಲಿಯಾ ತಂಡವು ಅಫ್ಘಾನಿಸ್ತಾನ್ ವಿರುದ್ಧ 275 ರನ್ಗಳ ಅಮೋಘ ಗೆಲುವು ದಾಖಲಿಸಿತ್ತು.
ಇನ್ನು 2010 ರಲ್ಲಿ ಜಿಂಬಾಬ್ವೆ ವಿರುದ್ಧ 272 ರನ್ಗಳ ಜಯ ಸಾಧಿಸಿರುವ ಸೌತ್ ಆಫ್ರಿಕಾ ತಂಡ ಕೂಡ ಭಾರೀ ಅಂತರದ ಗೆಲುವಿನ ದಾಖಲೆ ಪಟ್ಟಿಯಲ್ಲಿದೆ.
ಇನ್ನು 2007 ರಲ್ಲಿ ಟೀಮ್ ಇಂಡಿಯಾ ಬರ್ಮುಡಾ ತಂಡವನ್ನು 257 ರನ್ಗಳಿಂದ ಸೋಲಿಸಿದ್ದು ಇದುವರೆಗಿನ ಶ್ರೇಷ್ಠ ಏಕದಿನ ಗೆಲುವಾಗಿತ್ತು.
ಇದೀಗ ಶ್ರೀಲಂಕಾ ವಿರುದ್ಧ 317 ರನ್ಗಳ ಅಮೋಘ ಗೆಲುವು ದಾಖಲಿಸಿ, ಟೀಮ್ ಇಂಡಿಯಾ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ 300 ಕ್ಕೂ ಅಧಿಕ ರನ್ಗಳ ಅಂತರದಿಂದ ಗೆದ್ದ ಮೊದಲ ತಂಡವೆಂಬ ಐತಿಹಾಸಿಕ ದಾಖಲೆ ಬರೆದಿದೆ.
Published On - 9:23 pm, Sun, 15 January 23