T20 World Cup 2024: 1987 ರ ನಂತರ ಇದೇ ಮೊದಲು; ಗುಂಪು ಹಂತದಲ್ಲೇ ಪಯಣ ಮುಗಿಸಿದ ಕಿವೀಸ್..!
T20 World Cup 2024: ಟೂರ್ನಿಯಲ್ಲಿ ಕಿವೀಸ್ ಪಡೆ ಇನ್ನೂ 2 ಪಂದ್ಯಗಳನ್ನು ಆಡಬೇಕಿದೆ. ಆದರೆ ಸೂಪರ್-8 ತಲುಪುವ ತಂಡದ ಎಲ್ಲಾ ಮಾರ್ಗಗಳು ಮುಚ್ಚಿವೆ. ನ್ಯೂಜಿಲೆಂಡ್ ತಂಡದಲ್ಲಿ ಹಲವು ಅನುಭವಿ ಆಟಗಾರರಿದ್ದರೂ, ಇಡೀ ತಂಡ ನಿರಾಶಾದಾಯಕ ಪ್ರದರ್ಶನ ನೀಡಿತು. ಹೀಗಾಗಿಯೇ ಪಂದ್ಯಾವಳಿಯ ಮೊದಲ ಹಂತದಿಂದಲೇ ತಂಡ ಹೊರಗುಳಿಯಬೇಕಾಯಿತು.
1 / 7
ಮಾಜಿ ಚಾಂಪಿಯನ್ ಶ್ರೀಲಂಕಾ ತಂಡ 2024 ರ ಟಿ20 ವಿಶ್ವಕಪ್‌ನಿಂದ ಈಗಾಗಲೇ ಹೊರಬಿದ್ದಿದೆ. ಇದೀಗ ಗ್ರೂಪ್ ಹಂತದಲ್ಲೇ ಹೊರಬಿದ್ದ ತಂಡಗಳ ಪಟ್ಟಿಗೆ ಬಲಿಷ್ಠ ನ್ಯೂಜಿಲೆಂಡ್ ಹೆಸರು ಕೂಡ ಸೇರ್ಪಡೆಯಾಗಿದೆ. ಈ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ ಕೇವಲ 2 ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಸೋಲು ಕಂಡಿದೆ. ಈ ಸೋಲು ತಂಡಕ್ಕೆ ಗ್ರೂಪ್ ಹಂತದಿಂದ ಹೊರಬರುವ ದಾರಿ ತೋರಿಸಿದೆ.
2 / 7
ಟೂರ್ನಿಯಲ್ಲಿ ಕಿವೀಸ್ ಪಡೆ ಇನ್ನೂ 2 ಪಂದ್ಯಗಳನ್ನು ಆಡಬೇಕಿದೆ. ಆದರೆ ಸೂಪರ್-8 ತಲುಪುವ ತಂಡದ ಎಲ್ಲಾ ಮಾರ್ಗಗಳು ಮುಚ್ಚಿವೆ. ನ್ಯೂಜಿಲೆಂಡ್ ತಂಡದಲ್ಲಿ ಹಲವು ಅನುಭವಿ ಆಟಗಾರರಿದ್ದರೂ, ಇಡೀ ತಂಡ ನಿರಾಶಾದಾಯಕ ಪ್ರದರ್ಶನ ನೀಡಿತು. ಹೀಗಾಗಿಯೇ ಪಂದ್ಯಾವಳಿಯ ಮೊದಲ ಹಂತದಿಂದಲೇ ತಂಡ ಹೊರಗುಳಿಯಬೇಕಾಯಿತು.
3 / 7
ಟಿ20 ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ, 5 ತಂಡಗಳು ಸೂಪರ್-8 ರಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಎಲ್ಲರೂ ಅಂದುಕೊಂಡಂತೆ ನಡೆದಿದ್ದರೆ, ಈ ಐದು ತಂಡಗಳಲ್ಲಿ ನ್ಯೂಜಿಲೆಂಡ್ ಕೂಡ ಒಂದಾಗಿರಬೇಕಿತ್ತು. ಆದರೆ ಕಿವೀಸ್ ಪಡೆ ನೀಡಿದ ಕಳಪೆ ಪ್ರದರ್ಶನ ತಂಡವನ್ನು 1987 ರ ನಂತರ ಇದೇ ಮೊದಲು ಬಾರಿಗೆ ಲೀಗ್ ಹಂತದಿಂದ ಹೊರಗುಳಿಯುವಂತೆ ಮಾಡಿದೆ.
4 / 7
ಇಲ್ಲಿಯವರೆಗೆ, ಭಾರತವನ್ನು ಹೊರತುಪಡಿಸಿ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ತಂಡಗಳು ಮುಂದಿನ ಸುತ್ತಿಗೆ ತಮ್ಮ ಸ್ಥಾನವನ್ನು ಖಚಿತಪಡಿಸಿವೆ. ಆದರೆ ನ್ಯೂಜಿಲೆಂಡ್‌ನಂತಹ ಬಲಿಷ್ಠ ತಂಡ ಸೂಪರ್-8 ರೇಸ್‌ನಿಂದ ಹೊರಗುಳಿದಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಕಿವೀಸ್ ತಂಡ ಇದೇ ಮೊದಲ ಬಾರಿಗೆ ಗುಂಪು ಹಂತದಿಂದ ಹೊರಗುಳಿದಿದೆ.
5 / 7
ಹಾಗೆಯೇ 1987 ರ ನಂತರ ನ್ಯೂಜಿಲೆಂಡ್ ತಂಡವು ಇದೇ ಮೊದಲ ಬಾರಿಗೆ ಐಸಿಸಿ ವೈಟ್ ಬಾಲ್ ಪಂದ್ಯಾವಳಿಯಲ್ಲಿ ಗುಂಪು ಹಂತದಿಂದಲೇ ನಿರ್ಗಮಿಸಿದ ಬೇಡದ ದಾಖಲೆ ಬರೆದಿದೆ. ಇದಕ್ಕೂ ಮೊದಲು, 1987 ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಗುಂಪು ಹಂತದಿಂದಲೇ ಹೊರಬಿದ್ದಿತ್ತು.
6 / 7
ಸಿ ಗುಂಪಿನಲ್ಲಿರುವ ನ್ಯೂಜಿಲೆಂಡ್ ತಂಡ ಆಡಿರುವ 2 ಪಂದ್ಯಗಳಲ್ಲಿ ಎರಡೂ ಪಂದ್ಯಗಳನ್ನು ಸೋತಿದೆ. ನ್ಯೂಜಿಲೆಂಡ್ ತನ್ನ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಆಡಿತು. ಈ ಪಂದ್ಯದಲ್ಲಿ, ಇಡೀ ತಂಡ 15.2 ಓವರ್‌ಗಳಲ್ಲಿ 75 ರನ್‌ಗಳಿಗೆ ಆಲ್ ಔಟಾಗಿ 84 ರನ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿತ್ತು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ 149 ರನ್ ಗುರಿ ಬೆನ್ನಟ್ಟಿದ ಕಿವೀಸ್ 9 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಶಕ್ತವಾಯಿತು.
7 / 7
ನ್ಯೂಜಿಲೆಂಡ್ ಹೊರತಾಗಿ, ಸಿ ಗುಂಪಿನಲ್ಲಿ ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ಪಪುವಾ ನ್ಯೂಗಿನಿಯಾ ಮತ್ತು ಉಗಾಂಡಾ ತಂಡಗಳು ಸೇರಿವೆ. ಇಂತಹ ಪರಿಸ್ಥಿತಿಯಲ್ಲಿ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ಈ ಗುಂಪಿನಿಂದ ಸೂಪರ್-8ಗೆ ಅರ್ಹತೆ ಪಡೆದಿವೆ. ಇದರರ್ಥ ಉಳಿದ ಎಲ್ಲಾ ತಂಡಗಳು ತಮ್ಮ ಉಳಿದ ಗುಂಪು ಹಂತದ ಪಂದ್ಯಗಳನ್ನು ಆಡಿದ ನಂತರ ಈ ಪಂದ್ಯಾವಳಿಯಿಂದ ಹೊರಗುಳಿಯುತ್ತವೆ.