Tim Southee: 24 ಎಸೆತಗಳಲ್ಲಿ ಹೊಸ ಇತಿಹಾಸ ನಿರ್ನಿಸಿದ ಟಿಮ್ ಸೌಥಿ

T20 World Cup 2024: ಟಿ20 ವಿಶ್ವಕಪ್​ನಿಂದ ನ್ಯೂಝಿಲೆಂಡ್ ತಂಡ ಹೊರಬಿದ್ದಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಸೋತಿದ್ದ ನ್ಯೂಝಿಲೆಂಡ್ 2ನೇ ಮ್ಯಾಚ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪರಾಜಯಗೊಂಡಿತ್ತು. ಅತ್ತ ಮೂರು ಪಂದ್ಯಗಳಲ್ಲೂ ಜಯ ಸಾಧಿಸುವ ಮೂಲಕ ಅಫ್ಘಾನಿಸ್ತಾನ್ ಮತ್ತು ವೆಸ್ಟ್ ಇಂಡೀಸ್ ತಂಡಗಳು 6 ಅಂಕಗಳೊಂದಿಗೆ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ.

ಝಾಹಿರ್ ಯೂಸುಫ್
|

Updated on:Jun 15, 2024 | 12:09 PM

T20 World Cup 2024: ಟಿ20 ವಿಶ್ವಕಪ್​ನ 32ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವೇಗಿ ಟಿಮ್ ಸೌಥಿ (Tim Southee) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ 4 ಓವರ್​ಗಳ ಮೂಲಕ ಎಂಬುದು ವಿಶೇಷ. ಉಗಾಂಡ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು.

1 / 6
ಅದರಂತೆ ಮೊದಲು ಬ್ಯಾಟ್ ಮಾಡಿದ ಉಗಾಂಡ ತಂಡವು ಬಲಗೈ ವೇಗಿ ಟಿಮ್ ಸೌಥಿ ಎಸೆತಗಳನ್ನು ಗುರುತಿಸುವಲ್ಲಿ ತಡಕಾಡಿದರು. ಅತ್ತ ಬ್ಯಾಟರ್​ಗಳು ಪರದಾಡುತ್ತಿದ್ದರೆ, ಇತ್ತ ಸೌಥಿ ಕರಾರುವಾಕ್ ದಾಳಿ ಸಂಘಟಿಸಿದರು. ಪರಿಣಾಮ ಉಗಾಂಡ ತಂಡವು 18.4 ಓವರ್​ಗಳಲ್ಲಿ ಕೇವಲ 40 ರನ್​ಗಳಿಗೆ ಆಲೌಟ್ ಆಯಿತು.

2 / 6
ಈ ವೇಳೆ 4 ಓವರ್​ಗಳನ್ನು ಎಸೆದಿದ್ದ ಟಿಮ್ ಸೌಥಿ ನೀಡಿದ್ದು ಕೇವಲ 4 ರನ್​ಗಳು ಮಾತ್ರ ಎಂದರೆ ನಂಬಲೇಬೇಕು. ಅಲ್ಲದೆ ಒಂದು ಮೇಡನ್​ನೊಂದಿಗೆ 3 ವಿಕೆಟ್​ಗಳನ್ನು ಕೂಡ ಕಬಳಿಸಿದರು. ಇದರೊಂದಿಗೆ ಟಿ20 ವಿಶ್ವಕಪ್​ನಲ್ಲಿ 4 ಓವರ್​ಗಳಲ್ಲಿ​ ಅತೀ ಕಡಿಮೆ ರನ್ ನೀಡಿದ ಬೌಲರ್​ ಎಂಬ ವಿಶ್ವ ದಾಖಲೆ ಟಿಮ್ ಸೌಥಿ ಪಾಲಾಯಿತು.

3 / 6
ಇದಕ್ಕೂ ಮುನ್ನ ಈ ದಾಖಲೆ ಉಗಾಂಡ ತಂಡದ ಹಿರಿಯ ಸ್ಪಿನ್ನರ್ ಫ್ರಾಂಕ್ ನ್ಸುಬುಗಾ ಹೆಸರಿನಲ್ಲಿತ್ತು. ಟಿ20 ವಿಶ್ವಕಪ್ 2024ರಲ್ಲಿ ಪಪುವಾ ನ್ಯೂ ಗಿನಿಯಾ ವಿರುದ್ಧದ ಪಂದ್ಯದಲ್ಲಿ ನ್ಸುಬುಗಾ 4 ಓವರ್​ಗಳಲ್ಲಿ 4 ರನ್ ನೀಡಿ 2 ವಿಕೆಟ್ ಕಬಳಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು.

4 / 6
ಇದೀಗ ಉಗಾಂಡ ವಿರುದ್ಧ 4 ಓವರ್​ಗಳಲ್ಲಿ ಕೇವಲ 4 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಟಿಮ್ ಸೌಥಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ 4 ಓವರ್​ಗಳಲ್ಲಿ ಅತೀ ಕಡಿಮೆ ರನ್ ನೀಡಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

5 / 6
ಇನ್ನು ಈ ಪಂದ್ಯದಲ್ಲಿ ಉಗಾಂಡ ತಂಡ ನೀಡಿದ 41 ರನ್​ಗಳ ಟಾರ್ಗೆಟ್ ಅನ್ನು ನ್ಯೂಝಿಲೆಂಡ್ ತಂಡವು 5.2 ಓವರ್​ಗಳಲ್ಲಿ ಚೇಸ್ ಮಾಡಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಹೊರತಾಗಿಯೂ ನ್ಯೂಝಿಲೆಂಡ್ ತಂಡಕ್ಕೆ ಸೂಪರ್-8 ಹಂತಕ್ಕೇರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಗ್ರೂಪ್-ಸಿ ಯಿಂದ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ್ ತಂಡಗಳು ಈಗಾಗಲೇ ದ್ವಿತೀಯ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.

6 / 6

Published On - 12:09 pm, Sat, 15 June 24

Follow us
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು

ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ

ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ

ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ

ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ

Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ

ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!

ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ