ODI Double Century List: ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ

| Updated By: ಝಾಹಿರ್ ಯೂಸುಫ್

Updated on: Jan 18, 2023 | 10:07 PM

ODI Double Century Full List: ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ 10ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಹಾಗೆಯೇ ಟೀಮ್ ಇಂಡಿಯಾ ಪರ ಈ ಸಾಧನೆ ಮಾಡಿದ 5ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು.

1 / 13
ನ್ಯೂಜಿಲೆಂಡ್​ ವಿರುದ್ಧ ಟೀಮ್ ಇಂಡಿಯಾದ ಯುವ ಆರಂಭಿಕ ಶುಭ್​ಮನ್ ಗಿಲ್ ​ಸಿಡಿಲಬ್ಬರದ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ 10ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ.

2 / 13
ವಿಶೇಷ ಎಂದರೆ ಏಕದಿನ ಕ್ರಿಕೆಟ್​ನಲ್ಲಿ ಮೊದಲ ಡಬಲ್ ಸೆಂಚುರಿ ಮೂಡಿಬಂದಿದ್ದು ಮಹಿಳಾ ಆಟಗಾರ್ತಿಯಿಂದ. ಅಂದರೆ ಸಚಿನ್ ತೆಂಡೂಲ್ಕರ್​ಗಿಂತಲೂ ಮೊದಲೇ ಆಸ್ಟ್ರೇಲಿಯಾ ಆಟಗಾರ್ತಿ ಏಕದಿನ ಕ್ರಿಕೆಟ್​ನಲ್ಲಿ ಡಬಲ್ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

3 / 13
ಹಾಗಿದ್ರೆ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ಬ್ಯಾಟರ್​ಗಳು ಯಾರೆಲ್ಲಾ ನೋಡೋಣ....

4 / 13
1- ಮೆಲಿಂಡಾ ಕ್ಲಾರ್ಕ್ (ಆಸ್ಟ್ರೇಲಿಯಾ): 1997 ರಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಮೆಲಿಂಡಾ ಕ್ಲಾರ್ಕ್​ ಅವರು ಡೆನ್ಮಾರ್ಕ್​ ವಿರುದ್ಧ ದ್ವಿಶತಕ ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್ ಇತಿಹಾಸದ ಮೊದಲ ಡಬಲ್ ಸೆಂಚುರಿಯಾಗಿತ್ತು. ಅಂದು ಅಜೇಯ 229 ರನ್​ ಬಾರಿಸುವ ಮೂಲಕ ಮೆಲಿಂಡಾ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದರು.

5 / 13
2- ಸಚಿನ್ ತೆಂಡೂಲ್ಕರ್ (ಭಾರತ): 2010 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಅಜೇಯ 200 ರನ್ ಬಾರಿಸುವ ಮೂಲಕ ಸಚಿನ್ ಪುರುಷರ ಏಕದಿನ ಕ್ರಿಕೆಟ್​ನಲ್ಲಿ ಮೊದಲ ದ್ವಿಶತಕ ಬಾರಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡರು. ಅಲ್ಲದೆ ಈ ಸಾಧನೆಗೈದ ಎರಡನೇಯ ಪ್ಲೇಯರ್ ಎಂಬ ದಾಖಲೆ ಬರೆದರು.

6 / 13
3- ವೀರೇಂದ್ರ ಸೆಹ್ವಾಗ್ (ಭಾರತ): 2011 ರಲ್ಲಿ ಸೆಹ್ವಾಗ್ ವೆಸ್ಟ್ ಇಂಡೀಸ್ ವಿರುದ್ಧ 219 ರನ್​ ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದರು.

7 / 13
4- ರೋಹಿತ್ ಶರ್ಮಾ (ಭಾರತ): 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್ ಬಾರಿಸಿದ ರೋಹಿತ್ ಶರ್ಮಾ, 2017 ರಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 208 ರನ್​ಗಳಿಸಿ ಮಿಂಚಿದ್ದರು. ಇದಾದ ಬಳಿಕ 2014 ರಲ್ಲಿ ಶ್ರೀಲಂಕಾ ವಿರುದ್ಧ 264 ರನ್​ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದರು. ಅಂದರೆ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ವೈಯುಕ್ತಿಕ ಸ್ಕೋರ್​ಗಳಿಸಿದ ಹಾಗೂ ಅತ್ಯಧಿಕ ದ್ವಿಶತಕ ಸಿಡಿಸಿದ ದಾಖಲೆ ಹಿಟ್​ಮ್ಯಾನ್ ಹೆಸರಿನಲ್ಲಿದೆ.

8 / 13
5- ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): 2015 ರಲ್ಲಿ ಗೇಲ್ ಜಿಂಬಾಬ್ವೆ ವಿರುದ್ಧ 215 ರನ್​ ಬಾರಿಸುವ ಮೂಲಕ ದ್ವಿಶತಕದ ಸರದಾರರ ಪಟ್ಟಿಗೆ ಎಂಟ್ರಿ ಕೊಟ್ಟಿದ್ದರು.

9 / 13
6- ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): 2015 ರಲ್ಲೇ ನ್ಯೂಜಿಲೆಂಡ್​ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 237 ರನ್​ ಬಾರಿಸಿ ಹೊಸ ದಾಖಲೆ ಬರೆದಿದ್ದರು.

10 / 13
7- ಫಖರ್ ಝಮಾನ್ (ಪಾಕಿಸ್ತಾನ್): 2018 ರಲ್ಲಿ ಪಾಕ್ ತಂಡದ ಆರಂಭಿಕ ಆಟಗಾರ ಫಖರ್ ಝಮಾನ್ ಜಿಂಬಾಬ್ವೆ ವಿರುದ್ಧ ಅಜೇಯ 210 ರನ್​ ಬಾರಿಸಿ ಡಬಲ್ ಸೆಂಚುರಿ ಸಿಡಿಸಿದ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದರು.

11 / 13
8- ಅಮೆಲಿಯಾ ಕೆರ್ (ನ್ಯೂಜಿಲೆಂಡ್): 2018 ರಲ್ಲಿ ಕಿವೀಸ್​ ತಂಡದ ಅಮೆಲಿಯಾ ಐರ್ಲೆಂಡ್ ವಿರುದ್ಧ ಅಜೇಯ 232 ರನ್​ ಬಾರಿಸಿ ದ್ವಿಶತಕ ಸಿಡಿಸಿದ 2ನೇ ಮಹಿಳಾ ಆಟಗಾರ್ತಿ ಎನಿಸಿಕೊಂಡರು. ಅಲ್ಲದೆ ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ಗಳಿಸಿದ ಪ್ಲೇಯರ್ ಎಂಬ ದಾಖಲೆಯನ್ನು ನಿರ್ಮಿಸಿದರು.

12 / 13
9- ಇಶಾನ್ ಕಿಶನ್ (ಭಾರತ): ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಇಶಾನ್ ಕಿಶನ್ ಬಾಂಗ್ಲಾದೇಶ್ ವಿರುದ್ಧ 126 ಎಸೆತಗಳಲ್ಲಿ ದ್ವಿಶತಕ ಪೂರೈಸಿದ್ದರು. ಮೂಲಕ ಅತೀ ವೇಗವಾಗಿ ಡಬಲ್ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

13 / 13
10- ಶುಭ್​ಮನ್ ಗಿಲ್ (ಭಾರತ): ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 149 ಎಸೆತಗಳನ್ನು ಎದುರಿಸಿದ ಶುಭ್​ಮನ್ ಗಿಲ್ 9 ಭರ್ಜರಿ ಸಿಕ್ಸ್ ಹಾಗೂ 19 ಫೋರ್​ನೊಂದಿಗೆ 208 ರನ್​ ಬಾರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ 10ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಹಾಗೆಯೇ ಟೀಮ್ ಇಂಡಿಯಾ ಪರ ಈ ಸಾಧನೆ ಮಾಡಿದ 5ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು.