ODI World Cup Qualifier: ಕಶ್ಯಪ್ ಶತಕ ವ್ಯರ್ಥ; ಜಿಂಬಾಬ್ವೆ ವಿರುದ್ಧ ಒಮಾನ್​ಗೆ ವೀರೋಚಿತ ಸೋಲು

|

Updated on: Jun 30, 2023 | 8:00 AM

ODI World Cup Qualifier: ವಿಶ್ವಕಪ್ ಕ್ವಾಲಿಫೈಯರ್ 2023 ರ ಸೂಪರ್ ಸಿಕ್ಸ್ ಸುತ್ತಿನ ಮೊದಲ ಪಂದ್ಯದಲ್ಲಿ ಒಮಾನ್ ವಿರುದ್ಧ 14 ರನ್‌ಗಳ ರೋಚಕ ಗೆಲುವು ದಾಖಲಿಸಿದ ಜಿಂಬಾಬ್ವೆ ವಿಶ್ವಕಪ್​ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಸನಿಹದಲ್ಲಿದೆ.

1 / 7
ಜೂನ್ 29 ರಿಂದ ಆರಂಭವಾಗಿರುವ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ 2023 ರ ಸೂಪರ್ ಸಿಕ್ಸ್ ಸುತ್ತಿನ ಮೊದಲ ಪಂದ್ಯದಲ್ಲಿ ಒಮಾನ್ ವಿರುದ್ಧ 14 ರನ್‌ಗಳ ರೋಚಕ ಗೆಲುವು ದಾಖಲಿಸಿದ ಜಿಂಬಾಬ್ವೆ ವಿಶ್ವಕಪ್​ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಸನಿಹದಲ್ಲಿದೆ.

2 / 7
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಅನುಭವಿ ಆಲ್‌ರೌಂಡರ್ ಸೀನ್ ವಿಲಿಯಮ್ಸ್ ಅವರ ಶತಕದ ಆಧಾರದ ಮೇಲೆ ಒಮಾನ್ ಗೆಲುವಿಗೆ 333 ರನ್​ಗಳ ಸವಾಲನ್ನು ನೀಡಿತ್ತು. ಆದರೆ ಈ ಸವಾಲು ಬೆನ್ನತ್ತಿದ ಒಮಾನ್, ಕಶ್ಯಪ್ ಪ್ರಜಾಪತಿ ಅವರ ಶತಕದ ನಡುವೆಯೂ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 318 ರನ್ ಗಳಿಸಲಷ್ಟೇ ಶಕ್ತವಾಯಿತು.

3 / 7
ಒಮಾನ್ ಪರ ಕಶ್ಯಪ್ ಪ್ರಜಾಪತಿ 103 ರನ್‌ಗಳ ಅತ್ಯಧಿಕ ಶತಕ ದಾಖಲಿಸಿದರು. ಜತೀಂದರ್ ಸಿಂಗ್ ಮತ್ತು ಕಲೀಮುಲ್ಲಾ ಅವರನ್ನು ಹೊರತುಪಡಿಸಿ ಉಳಿದ ಬ್ಯಾಟರ್​ಗಳು ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ ಅಂತಿಮವಾಗಿ ಒಮಾನ್ 14 ರನ್​ಗಳ ಅಂತರದಲ್ಲಿ ಸೋಲನುಭವಿಸಿತು.

4 / 7
ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರಬಾನಿ ಮತ್ತು ತೆಂಡೈ ಚಟಾರಾ ತಲಾ 3 ವಿಕೆಟ್ ಪಡೆದರು. ರಿಚರ್ಡ್ ನಗರ್ವಾ 2 ವಿಕೆಟ್ ಪಡೆದರೆ, ಸಿಂಕದರ್ ರಝಾ 1 ವಿಕೆಟ್ ಪಡೆದರು.

5 / 7
ಇನ್ನು ಒಮಾನ್ ತಂಡ ಗೆಲುವಿನ ನಗೆ ಬೀರಲು ಸಾಧ್ಯವಾಗದಿದ್ದರೂ ತಂಡದ ಪರ ಶತಕ ಸಿಡಿಸಿದ ಕಶ್ಯಪ್ ಪ್ರಜಾಪತಿ ದಾಖಲೆಯನ್ನು ನಿರ್ಮಿಸಿದರು. ಇದು ಪ್ರಜಾಪತಿ ಅವರ ಏಕದಿನ ವೃತ್ತಿಜೀವನದ ಎರಡನೇ ಶತಕ ವಾಗಿದ್ದು, ಟೆಸ್ಟ್ ಆಡುವ ತಂಡದ ವಿರುದ್ಧ ತಮ್ಮ ಮೊದಲ ಶತಕ ಬಾರಿಸುವ ಮೂಲಕ ಒಮಾನ್‌ ಪರ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು .

6 / 7
ಜಿಂಬಾಬ್ವೆ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಶ್ಯಪ್ ಪ್ರಜಾಪತಿ 93 ಎಸೆತಗಳಲ್ಲಿ ಶತಕ ದಾಖಲಿಸಿದರು. ಇದಕ್ಕೂ ಮುನ್ನ ಅವರು ಐರ್ಲೆಂಡ್ ವಿರುದ್ಧ 72 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು.

7 / 7
26 ಸೆಪ್ಟೆಂಬರ್ 2021 ರಂದು ಪಾಪುವ ನ್ಯೂ ಗಿನಿಯಾ ವಿರುದ್ಧ ತನ್ನ ಮೊದಲ ಏಕದಿನ ಪಂದ್ಯವನ್ನಾಡಿದ್ದ ಕಶ್ಯಪ್, ಒಮಾನ್ ಪರ ಇದುವರೆಗೆ 28 ​​ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಏತನ್ಮಧ್ಯೆ, ಅವರು 27 ಇನ್ನಿಂಗ್ಸ್‌ಗಳಲ್ಲಿ 30 ರ ಸರಾಸರಿಯಲ್ಲಿ 790 ರನ್ ಬಾರಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಸೇರಿವೆ.