
ಯಾವ ಕ್ರಿಕೆಟ್ ಆಟಗಾರನೂ ಕೂಡ ಶೂನ್ಯಕ್ಕೆ ಔಟಾಗುವುದನ್ನು ಇಷ್ಟ ಪಡುವುದಿಲ್ಲ. ಅದರಲ್ಲೂ ಆ ಪಂದ್ಯ ತನ್ನ ವೃತ್ತಿಜೀವನದ ಕೊನೆಯ ಪಂದ್ಯವಾಗಿದ್ದರಂತೂ ಅದನ್ನು ಇನ್ನೂ ವಿಶೇಷ ಮಾಡಲು ಆಟಗಾರರು ಕಷ್ಟ ಪಡುತ್ತಾರೆ. ಆದರೆ ಕ್ರಿಕೆಟ್ ಜಗತ್ತಿನ ದಂತಕಥೆ ತನ್ನ ಕೊನೆಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ವಾಸ್ತವಾವಗಿ ಆಗಸ್ಟ್ 14 ರಂದು, ಅಂದರೆ, ಈ ದಿನ, ಕ್ರಿಕೆಟ್ ದಿಗ್ಗಜ ಸರ್ ಡಾನ್ ಬ್ರಾಡ್ಮನ್ ಕೊನೆಯ ಟೆಸ್ಟ್ ಆಡಿದ್ದರು. ವಿದಾಯದ ಟೆಸ್ಟ್‌ನಲ್ಲಿ ಡಾನ್ ಸ್ಮರಣೀಯ ಇನ್ನಿಂಗ್ಸ್ ಆಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅಭಿಮಾನಿಗಳ ನಿರೀಕ್ಷೆ ಕೆಲವೇ ಕೆಲವು ನಿಮಿಷಗಳಲ್ಲಿ ಹುಸಿಯಾಗಿತ್ತು.

ಯಾವುದೇ ಕ್ರಿಕೆಟಿಗರು ಶತಕ ಬಾರಿಸಿದಾಗ ಮೈದಾನದಲ್ಲಿದ್ದ ಅಭಿಮಾನಿಗಳು ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಾರೆ. ಆದರೆ ಒಬ್ಬ ಬ್ಯಾಟರ್ ಶೂನ್ಯಕ್ಕೆ ಔಟಾದರೆ, ಅಭಿಮಾನಿಗಳು ತಮ್ಮ ಕೋಪವನ್ನು ಅಲ್ಲಿಯೇ ವ್ಯಕ್ತಪಡಿಸುತ್ತಾರೆ. ಆದರೆ ಇದ್ಯಾವುದೂ ಸರ್ ಡಾನ್ ಬ್ರಾಡ್ಮನ್ ವಿಷಯದಲ್ಲಿ ನಡೆಯಲಿಲ್ಲ. ಬ್ರಾಡ್ಮನ್ ಶೂನ್ಯಕ್ಕೆ ಔಟಾಗುತ್ತಿದಂತೆ ಅಭಿಮಾನಿಗಳೆಲ್ಲ ಅರೆಕ್ಷಣ ಮೌನವಾಗಿಬಿಟ್ಟಿದ್ದರು.


