Independence Day: 75ನೇ ಸ್ವಾತಂತ್ರ್ಯ ದಿನವನ್ನು ಟೀಂ ಇಂಡಿಯಾ ಕ್ರಿಕೆಟಿಗರು ಆಚರಿಸಿದ್ದು ಹೀಗೆ; ಫೋಟೋ ನೋಡಿ

Independence Day: ಸಚಿನ್​ರಿಂದ ಹಿಡಿದು ಸೈನಾ ನೆಹ್ವಾಲ್​ವರೆಗೆ ಭಾರತದ ಕ್ರೀಡಾಳುಗಳು ಆಗಸ್ಟ್ 15 ರ ಸ್ವತಂತ್ರ ದಿನವನ್ನು ವಿಭಿನ್ನ ಶೈಲಿಯಲ್ಲಿ ಆಚರಿಸಿದ್ದು ಹೀಗೆ.

TV9 Web
| Updated By: ಪೃಥ್ವಿಶಂಕರ

Updated on:Aug 15, 2022 | 2:45 PM

ಇಂದು ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿವೆ. ಇಡೀ ದೇಶವೇ ಈ ಸಂಭ್ರಮದಲ್ಲಿ ಮುಳುಗಿದೆ. ಭಾರತೀಯ ಆಟಗಾರರು ಕೂಡ ಈ ದಿನವನ್ನು ತಮ್ಮದೇ ಶೈಲಿಯಲ್ಲಿ ಆಚರಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯರಿಂದ ಹಿಡಿದು ಸೈನಾ ನೆಹ್ವಾಲ್​ವರೆಗೆ ಭಾರತದ ಕ್ರೀಡಾಳುಗಳು ಆಗಸ್ಟ್ 15 ರ ಸ್ವತಂತ್ರ ದಿನವನ್ನು ವಿಭಿನ್ನ ಶೈಲಿಯಲ್ಲಿ ಆಚರಿಸಿದ್ದು ಹೀಗೆ.

1 / 16
ಅನೇಕ ಭಾರತೀಯ ಕ್ರೀಡಾಪಟುಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೊಫೈಲ್ ಫೋಟೋಗಳನ್ನು ಬದಲಾಯಿಸುವ ಮೂಲಕ 75 ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ. ಅದರಲ್ಲೂ ವರ್ಷಕ್ಕೆ 1-2 ಬಾರಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಎಂಎಸ್ ಧೋನಿ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪ್ರೊಫೈಲ್ ಫೋಟೋ ಬದಲಿಸಿ ತ್ರಿವರ್ಣ ಧ್ವಜ ಹಾಕಿದ್ದಾರೆ.

2 / 16
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕೆಲವು ದಿನಗಳ ಹಿಂದೆ ತ್ರಿವಣ ಧ್ವಜವನ್ನು ತಮ್ಮ ಪ್ರೊಫೈಲ್ ಚಿತ್ರವನ್ನಾಗಿ ಬದಲಾಯಿಸಿದರು. ಇಂದು ತಮ್ಮ ಮನೆಯ ಮೇಲೂ ರಾಷ್ಟ್ರ ಧ್ವಜಾರೋಹಣ ಮಾಡಿ ಜನತೆಗೆ ಶುಭಾಷಯ ಕೋರಿದರು.

3 / 16
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಭಾಗಿಯಾಗಿ, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಪ್ರೊಫೈಲ್ ಚಿತ್ರದಲ್ಲಿ ತ್ರಿವರ್ಣ ಧ್ವಜವನ್ನು ಹಾಕಿಕೊಂಡಿದ್ದಾರೆ.

4 / 16
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ತಮ್ಮ ಪ್ರೊಫೈಲ್ ಫೋಟೋವನ್ನು ಬದಲಿಸಿ ತ್ರಿವರ್ಣ ಧ್ವಜವನ್ನು ಹಾಕಿಕೊಂಡಿದ್ದಾರೆ.

5 / 16
ಸಾಂಪ್ರದಾಯಿಕ ಬಟ್ಟೆ ತೊಟ್ಟು, ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದಿರುವ ಫೋಟೋವನ್ನು ಹಾರ್ದಿಕ್ ಪಾಂಡ್ಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ದೇಶದ ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

6 / 16
ಕೈಯಲ್ಲಿ ಭಾರತದ ಭೂಪಟವನ್ನು ಹಿಡಿದಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪುನಿಯಾ  ದೇಶವಾಸಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ.

7 / 16
ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಪ್ರಸ್ತುತ ಮನೆಯಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದು, ತಮ್ಮ ಮನೆಯ ಬಾಲ್ಕನಿಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಸ್ವತಂತ್ರ ದಿನದ ಶುಭಾಷಯ ಕೋರಿದ್ದಾರೆ.

8 / 16
ತಮ್ಮ ಮನೆಯ ಬಾಲ್ಕನಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರುವ ಫೋಟೋವನ್ನು ಹಂಚಿಕೊಂಡಿರುವ ಮೊಹಮ್ಮದ್ ಶಮಿ, ಇಂದು ಈ ಮಹಾನ್ ದೇಶದ ಭಾಗವಾಗಿರುವುದಕ್ಕೆ ಹೆಮ್ಮೆ ಪಡುವ ದಿನವಾಗಿದೆ. ಈ ಸ್ವಾತಂತ್ರ್ಯದ ಮನೋಭಾವವು ನಿಮ್ಮನ್ನು ಜೀವನದಲ್ಲಿ ಯಶಸ್ಸಿನತ್ತ ಕೊಂಡೊಯ್ಯಲಿ ಎಂದು ಬರೆದುಕೊಂಡಿದ್ದಾರೆ.

9 / 16
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ತಾವು ಗೆದ್ದಿರುವ ಪದಕದೊಂದಿಗೆ ತಮ್ಮ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ.

10 / 16
ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಂ ಇಂಡಿಯಾ ಉಪನಾಯಕ ಶಿಖರ್ ಧವನ್ ಸ್ವಾತಂತ್ರೋತ್ಸವಕ್ಕೆ ಎಲ್ಲರಿಗೂ ಶುಭಕೋರಿದ್ದು,  ಇದು ನನ್ನ ಹೃದಯಕ್ಕೆ ಬಹಳ ಹತ್ತಿರವಾದ ದಿನವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ರಾಜಿ ಮಾಡಿಕೊಂಡ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಜನರಿಗೆ ಧನ್ಯವಾದಗಳು. ಅವರಿಂದಲೇ ಇಂದು ನಮ್ಮ ದೇಶ ಸ್ವತಂತ್ರವಾಗಿದೆ. ದೇಶವನ್ನು ಹೀಗೆ ಅಭಿವೃದ್ದಿಯತ್ತ ಕೊಂಡೊಯ್ಯಿರಿ ಎಂದು ಬರೆದು ಶುಭ ಹಾರೈಸಿದ್ದಾರೆ.

11 / 16
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ ಸೆಹ್ವಾಗ್, ನಮ್ಮ ಗುರುತು ಹಿಂದೂಸ್ತಾನಿ ಮಾತ್ರ ಎಂದು ತಮ್ಮ ಟ್ವೀಟ್​ನಲ್ಲಿ ಹೇಳಿಕೊಂಡಿದ್ದಾರೆ.

12 / 16
ಭಾರತದ ಕ್ರಿಕೆಟಿಗ ಧವನ್ ಕುಲಕರ್ಣಿ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

13 / 16
ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ ಜೆರ್ಸಿಯಲ್ಲಿ ತಂಡದೊಂದಿಗಿರುವ ತಮ್ಮ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ.

14 / 16
ಚೇತೇಶ್ವರ ಪೂಜಾರ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸ್ವತಂತ್ರ ದಿನವನ್ನು ಸ್ಮರಿಸಿದ್ದಾರೆ.

15 / 16
ಅಜಿಂಕ್ಯ ರಹಾನೆ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡಿದ್ದು ಹೀಗೆ.

16 / 16

Published On - 2:44 pm, Mon, 15 August 22

Follow us