ಬೆಟ್ಟದಷ್ಟು ನಿರೀಕ್ಷೆಯನ್ನು ಎರಡೇ ಎಸೆತಗಳಲ್ಲಿ ಸುಳ್ಳು ಮಾಡಿದ್ರು ಬ್ರಾಡ್ಮನ್! ಇದು 74 ವರ್ಷಗಳ ಹಿಂದಿನ ಕತೆ

Don Bradman: ಬ್ರಾಡ್ಮನ್ 52 ಟೆಸ್ಟ್‌ಗಳಲ್ಲಿ 99.94 ಸರಾಸರಿಯಲ್ಲಿ 6 ಸಾವಿರದ 996 ರನ್ ಗಳಿಸಿದ್ದಾರೆ. ಕೊನೆಯ ಟೆಸ್ಟ್​ನಲ್ಲಿ 4 ರನ್ಗಳಿಸಿದ್ದರೆ ಬ್ರಾಡ್ಮನ್ ತಮ್ಮ ಟೆಸ್ಟ್ ವೃತ್ತಿಜೀವನದ ಏಳು ಸಾವಿರ ರನ್‌ಗಳ ಮೈಲಿಗಲ್ಲನ್ನು ಮುಟ್ಟುತ್ತಿದ್ದರು.

Aug 14, 2022 | 6:57 PM
TV9kannada Web Team

| Edited By: pruthvi Shankar

Aug 14, 2022 | 6:57 PM

ಯಾವ ಕ್ರಿಕೆಟ್ ಆಟಗಾರನೂ ಕೂಡ ಶೂನ್ಯಕ್ಕೆ ಔಟಾಗುವುದನ್ನು ಇಷ್ಟ ಪಡುವುದಿಲ್ಲ. ಅದರಲ್ಲೂ ಆ ಪಂದ್ಯ ತನ್ನ ವೃತ್ತಿಜೀವನದ ಕೊನೆಯ ಪಂದ್ಯವಾಗಿದ್ದರಂತೂ ಅದನ್ನು ಇನ್ನೂ ವಿಶೇಷ ಮಾಡಲು ಆಟಗಾರರು ಕಷ್ಟ ಪಡುತ್ತಾರೆ. ಆದರೆ ಕ್ರಿಕೆಟ್ ಜಗತ್ತಿನ ದಂತಕಥೆ ತನ್ನ ಕೊನೆಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ವಾಸ್ತವಾವಗಿ ಆಗಸ್ಟ್ 14 ರಂದು, ಅಂದರೆ, ಈ ದಿನ, ಕ್ರಿಕೆಟ್ ದಿಗ್ಗಜ ಸರ್ ಡಾನ್ ಬ್ರಾಡ್ಮನ್ ಕೊನೆಯ ಟೆಸ್ಟ್ ಆಡಿದ್ದರು. ವಿದಾಯದ ಟೆಸ್ಟ್‌ನಲ್ಲಿ ಡಾನ್ ಸ್ಮರಣೀಯ ಇನ್ನಿಂಗ್ಸ್‌ ಆಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅಭಿಮಾನಿಗಳ ನಿರೀಕ್ಷೆ ಕೆಲವೇ ಕೆಲವು ನಿಮಿಷಗಳಲ್ಲಿ ಹುಸಿಯಾಗಿತ್ತು.

1 / 5
ಯಾವುದೇ ಕ್ರಿಕೆಟಿಗರು ಶತಕ ಬಾರಿಸಿದಾಗ ಮೈದಾನದಲ್ಲಿದ್ದ ಅಭಿಮಾನಿಗಳು ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಾರೆ. ಆದರೆ ಒಬ್ಬ ಬ್ಯಾಟರ್ ಶೂನ್ಯಕ್ಕೆ ಔಟಾದರೆ, ಅಭಿಮಾನಿಗಳು ತಮ್ಮ ಕೋಪವನ್ನು ಅಲ್ಲಿಯೇ ವ್ಯಕ್ತಪಡಿಸುತ್ತಾರೆ. ಆದರೆ ಇದ್ಯಾವುದೂ ಸರ್ ಡಾನ್ ಬ್ರಾಡ್ಮನ್ ವಿಷಯದಲ್ಲಿ ನಡೆಯಲಿಲ್ಲ. ಬ್ರಾಡ್ಮನ್ ಶೂನ್ಯಕ್ಕೆ ಔಟಾಗುತ್ತಿದಂತೆ ಅಭಿಮಾನಿಗಳೆಲ್ಲ ಅರೆಕ್ಷಣ ಮೌನವಾಗಿಬಿಟ್ಟಿದ್ದರು.

2 / 5
ಬೆಟ್ಟದಷ್ಟು ನಿರೀಕ್ಷೆಯನ್ನು ಎರಡೇ ಎಸೆತಗಳಲ್ಲಿ ಸುಳ್ಳು ಮಾಡಿದ್ರು ಬ್ರಾಡ್ಮನ್! ಇದು 74 ವರ್ಷಗಳ ಹಿಂದಿನ ಕತೆ

ಓವಲ್‌ನಲ್ಲಿ ನಡೆದ 1948 ರ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧದ ವಿದಾಯ ಟೆಸ್ಟ್‌ನಲ್ಲಿ ಅಭಿಮಾನಿಗಳು ಬ್ರಾಡ್‌ಮನ್ ಅವರ ಬ್ಯಾಟ್‌ನಿಂದ ಮತ್ತೊಂದು 'ಶತಕ'ಕ್ಕಾಗಿ ಕಾಯುತ್ತಿದ್ದರು. ಜೊತೆಗೆ ಬ್ರಾಡ್‌ಮನ್ ಇನ್ನ ಕೇವಲ 4 ರನ್‌ ಗಳಿಸಿದ್ದರೆ ಟೆಸ್ಟ್​ ಕ್ರಿಕೆಟ್​ನಲ್ಲಿ 100 ರ ಸರಾಸರಿಯಲ್ಲಿ ರನ್ ಗಳಿಸಿದ ಸಾಧನೆ ಮಾಡುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ

3 / 5
ಬೆಟ್ಟದಷ್ಟು ನಿರೀಕ್ಷೆಯನ್ನು ಎರಡೇ ಎಸೆತಗಳಲ್ಲಿ ಸುಳ್ಳು ಮಾಡಿದ್ರು ಬ್ರಾಡ್ಮನ್! ಇದು 74 ವರ್ಷಗಳ ಹಿಂದಿನ ಕತೆ

ಕೊನೆಯ ಟೆಸ್ಟ್ ಆಡುವವರೆಗೆ ಬ್ರಾಡ್ಮನ್ ಅವರ ಬ್ಯಾಟ್ 99.94 ರ ಸರಾಸರಿಯಲ್ಲಿ ರನ್ ಗಳಿಸಿತ್ತು. ಆದರೆ ಕೊನೆಯ ಟೆಸ್ಟ್​ನಲ್ಲಿ ಎರಿಕ್ ಹಾಲಿಸ್ 2 ಎಸೆತಗಳನ್ನು ಎದುರಿಸಿದ ಬ್ರಾಡ್ಮನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆಸ್ಟ್ರೇಲಿಯ ಈ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ ಜಯ ಸಾಧಿಸಿತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ರಾಡ್‌ಮನ್‌ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಹೀಗಾಗಿ ಅವರ ಶತಕದ ಸರಾಸರಿಯ ದಾಖಲೆ ಕನಸಾಗಿಯೇ ಉಳಿಯಿತು.

4 / 5
ಬೆಟ್ಟದಷ್ಟು ನಿರೀಕ್ಷೆಯನ್ನು ಎರಡೇ ಎಸೆತಗಳಲ್ಲಿ ಸುಳ್ಳು ಮಾಡಿದ್ರು ಬ್ರಾಡ್ಮನ್! ಇದು 74 ವರ್ಷಗಳ ಹಿಂದಿನ ಕತೆ

ಬ್ರಾಡ್ಮನ್ 52 ಟೆಸ್ಟ್‌ಗಳಲ್ಲಿ 99.94 ಸರಾಸರಿಯಲ್ಲಿ 6 ಸಾವಿರದ 996 ರನ್ ಗಳಿಸಿದ್ದಾರೆ. ಕೊನೆಯ ಟೆಸ್ಟ್​ನಲ್ಲಿ 4 ರನ್ಗಳಿಸಿದ್ದರೆ ಬ್ರಾಡ್ಮನ್ ತಮ್ಮ ಟೆಸ್ಟ್ ವೃತ್ತಿಜೀವನದ ಏಳು ಸಾವಿರ ರನ್‌ಗಳ ಮೈಲಿಗಲ್ಲನ್ನು ಮುಟ್ಟುತ್ತಿದ್ದರು. ಆದರೆ ಅದು ಕೂಡ ಸಾಧ್ಯವಾಗಲಿಲ್ಲ. ಅವರು ಟೆಸ್ಟ್​ನಲ್ಲಿ 29 ಶತಕ, 13 ಅರ್ಧಶತಕ ಮತ್ತು 12 ದ್ವಿಶತಕಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ.

5 / 5

Follow us on

Most Read Stories

Click on your DTH Provider to Add TV9 Kannada