12 ವರ್ಷ ಕಳೆದರೂ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ 10 ಆಟಗಾರರ ಪಟ್ಟಿ ಇಲ್ಲಿದೆ

| Updated By: ಝಾಹಿರ್ ಯೂಸುಫ್

Updated on: Oct 01, 2023 | 11:07 PM

ODI World Cup: 2011 ರ ವಿಶ್ವಕಪ್​ನಲ್ಲಿ ಕಣಕ್ಕಿಳಿದ 10 ಆಟಗಾರರು ಈ ಬಾರಿಯ ವಿಶ್ವಕಪ್​ ತಂಡದಲ್ಲೂ ಕಾಣಿಸಿಕೊಂಡಿದ್ದಾರೆ. ಹೀಗೆ ಕಳೆದೊಂದು ದಶಕದಿಂದ ತಂಡದ ಪ್ರಮುಖ ಅಂಗವಾಗಿ, ಈ ಬಾರಿಯ ವರ್ಲ್ಡ್​ಕಪ್​ ಟೀಮ್​ನಲ್ಲಿ ಸ್ಥಾನ ಪಡೆದ ಆಟಗಾರರ ಕಿರುಪರಿಚಯ ಇಲ್ಲಿದೆ.

1 / 13
ಭಾರತದಲ್ಲಿ ಏಕದಿನ ವಿಶ್ವಕಪ್ ನಡೆದು ಬರೋಬ್ಬರಿ 12 ವರ್ಷಗಳೇ ಕಳೆದಿವೆ. ಇದಾಗ್ಯೂ ಅಂದು ವರ್ಲ್ಡ್​ಕಪ್ ಆಡಿದ್ದ 10 ಆಟಗಾರರು ಈ ಬಾರಿ ಕೂಡ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

2 / 13
ಅಂದರೆ 2011 ರ ವಿಶ್ವಕಪ್​ನಲ್ಲಿ ಕಣಕ್ಕಿಳಿದ 10 ಆಟಗಾರರು ಈ ಬಾರಿಯ ವಿಶ್ವಕಪ್​ ತಂಡದಲ್ಲೂ ಕಾಣಿಸಿಕೊಂಡಿದ್ದಾರೆ. ಹೀಗೆ ಕಳೆದೊಂದು ದಶಕದಿಂದ ತಂಡದ ಪ್ರಮುಖ ಅಂಗವಾಗಿ, ಈ ಬಾರಿಯ ವರ್ಲ್ಡ್​ಕಪ್​ ಟೀಮ್​ನಲ್ಲಿ ಸ್ಥಾನ ಪಡೆದ ಆಟಗಾರರ ಕಿರುಪರಿಚಯ ಇಲ್ಲಿದೆ...

3 / 13
1- ಸ್ಟೀವ್ ಸ್ಮಿತ್: 2011 ರ ಆಸ್ಟ್ರೇಲಿಯಾ ತಂಡದಲ್ಲಿ ಸ್ಟೀವ್ ಸ್ಮಿತ್ ಸ್ಪಿನ್ ಆಲ್​ರೌಂಡರ್ ಆಗಿ ಕಾಣಿಸಿಕೊಂಡಿದ್ದರು. ಈ ಬಾರಿ ಅದೇ ಸ್ಮಿತ್ ಪ್ರಮುಖ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

4 / 13
2- ಆದಿಲ್ ರಶೀದ್: 2011 ರ ಏಕದಿನ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡದ ಯುವ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದ ಆದಿಲ್ ರಶೀದ್ ಈ ಬಾರಿ ಕೂಡ ಆಂಗ್ಲ ಪಡೆಯಲ್ಲಿ ಸ್ಥಾನ ಪಡೆದಿದ್ದಾರೆ.

5 / 13
3- ವೆಸ್ಲಿ ಬ್ಯಾರೆಸಿ: 2011 ರಲ್ಲಿ ನೆದರ್​ಲೆಂಡ್ಸ್ ತಂಡದಲ್ಲಿ ಬ್ಯಾಟ್ಸ್​ಮನ್ ಆಗಿ ಸ್ಥಾನ ಪಡೆದಿದ್ದ ವೆಸ್ಲಿ ಬ್ಯಾರೆಸಿ, ಇದೀಗ ತಮ್ಮ 39ನೇ ವಯಸ್ಸಿನಲ್ಲಿ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಆಯ್ಕೆಯಾಗಿದ್ದಾರೆ.

6 / 13
4- ಶಕೀಬ್ ಅಲ್ ಹಸನ್: 2011 ರ ಏಕದಿನ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ್ ತಂಡವನ್ನು ಮುನ್ನಡೆಸಿದ್ದ ಯುವ ನಾಯಕ ಶಕೀಬ್ ಅಲ್ ಹಸನ್ ಈ ಬಾರಿ ಕೂಡ ಬಾಂಗ್ಲಾ ಪಡೆಯ ನೇತೃತ್ವವಹಿಸಿರುವುದು ವಿಶೇಷ.

7 / 13
5- ಕೇನ್ ವಿಲಿಯಮ್ಸನ್: 2011 ರ ವಿಶ್ವಕಪ್​ನಲ್ಲಿ ಕೇನ್ ವಿಲಿಯಮ್ಸನ್ ನ್ಯೂಝಿಲೆಂಡ್ ತಂಡದ ಭರವಸೆಯಾಗಿ ಯುವ ಆಟಗಾರನಾಗಿ ಆಯ್ಕೆಯಾಗಿದ್ದರು. ಇದೀಗ 2023ರ ವಿಶ್ವಕಪ್​ನಲ್ಲಿ ಕಿವೀಸ್ ಪಡೆಯನ್ನು ವಿಲಿಯಮ್ಸನ್ ಮುನ್ನಡೆಸುತ್ತಿದ್ದಾರೆ.

8 / 13
6- ರವಿಚಂದ್ರನ್ ಅಶ್ವಿನ್: 2011 ರ ವಿಶ್ವಕಪ್​ನಲ್ಲಿ ನಾಯಕ ಧೋನಿಯ ಸ್ಪಿನ್ ಅಸ್ತ್ರವಾಗಿ ಬಳಕೆಯಾಗಿದ್ದ ರವಿಚಂದ್ರನ್ ಅಶ್ವಿನ್, ದಶಕಗಳ ಬಳಿಕ ಅನುಭವಿ ಆಟಗಾರನಾಗಿ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

9 / 13
7- ಮುಶ್ಫಿಕುರ್ ರಹೀಮ್: 2011 ರಲ್ಲಿ ಬಾಂಗ್ಲಾದೇಶ್ ತಂಡದ 2ನೇ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಮುಶ್ಪಿಕುರ್ ರಹೀಮ್ ಕಾಣಿಸಿಕೊಂಡಿದ್ದರು. ಇದೀಗ 2023 ರಲ್ಲಿ ತಂಡದ ಮುಖ್ಯ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.

10 / 13
8- ಟಿಮ್ ಸೌಥಿ: 2011 ರ ವಿಶ್ವಕಪ್​ನಲ್ಲಿ ನ್ಯೂಝಿಲೆಂಡ್ ತಂಡದ ಯುವ ವೇಗಿಯಾಗಿ ಟಿಮ್ ಸೌಥಿ ಆಯ್ಕೆಯಾಗಿದ್ದರು. ಇದೀಗ ಕಿವೀಸ್ ಬಳಗದ ಪ್ರಮುಖ ವೇಗಿಯಾಗಿ ಸೌಥಿ ಕಾಣಿಸಿಕೊಂಡಿದ್ದಾರೆ.

11 / 13
9- ಮಹಮದುಲ್ಲಾ: 2011 ರಲ್ಲಿ ಬಾಂಗ್ಲಾದೇಶ್ ತಂಡದ ಮಧ್ಯಮ ಕ್ರಮಾಂಕದ ಯುವ ಬ್ಯಾಟರ್ ಆಗಿದ್ದ ಮಹಮದುಲ್ಲಾ ಈ ಬಾರಿ ಅನುಭವಿ ಆಟಗಾರನ ಸ್ಥಾನದಲ್ಲಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

12 / 13
10- ವಿರಾಟ್ ಕೊಹ್ಲಿ: 2011 ರ ಏಕದಿನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್​ ಆಗಿ ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದರು. ಇದೀಗ 2023 ರಲ್ಲಿ ಭಾರತ ತಂಡದ ಪ್ರಮುಖ ಬ್ಯಾಟ್ಸ್​ಮನ್ ಕಾಣಿಸಿಕೊಳ್ಳಲಿದ್ದಾರೆ.

13 / 13
ವಿಶೇಷ ಎಂದರೆ 2011ರ ವಿಶ್ವಕಪ್​ ಫೈನಲ್ ಆಡಿದ್ದ ಆಟಗಾರರಲ್ಲಿ ಪ್ರಸ್ತುತ ವರ್ಲ್ಡ್​ಕಪ್ ತಂಡದಲ್ಲಿರುವುದು ವಿರಾಟ್ ಕೊಹ್ಲಿ ಮಾತ್ರ. ಅಂದು ಅಶ್ವಿನ್ ಭಾರತ ತಂಡದಲ್ಲಿದ್ದರೂ ಫೈನಲ್​ನಲ್ಲಿ ಕಣಕ್ಕಿಳಿದಿರಲಿಲ್ಲ. ಹಾಗಾಗಿ ಈ ಬಾರಿ ಭಾರತ ವಿಶ್ವಕಪ್ ಗೆದ್ದರೆ ಕಿಂಗ್ ಕೊಹ್ಲಿ ಹೆಸರಿಗೆ ವಿಶೇಷ ದಾಖಲೆ ಸೇರ್ಪಡೆಯಾಗಲಿದೆ.