ಯುವರಾಜ್ ಸಿಂಗ್ ಚಾಂಪಿಯನ್​ ದಾಖಲೆಯನ್ನು ಸರಿಗಟ್ಟಿದ ಆಸ್ಟ್ರೇಲಿಯಾ ಆಟಗಾರರು

| Updated By: ಝಾಹಿರ್ ಯೂಸುಫ್

Updated on: Nov 15, 2021 | 5:47 PM

T20 World Cup: ಟಿ20 ವಿಶ್ವಕಪ್​ ಫೈನಲ್​ನ ಗೆಲುವಿನ ರೂವಾರಿಗಳಾದ ಜೋಶ್ ಹ್ಯಾಝಲ್​ವುಡ್​ ಹಾಗೂ ಮಿಚೆಲ್ ಮಾರ್ಷ್​ ಮೂರು ವಿಶ್ವಕಪ್​ ಗೆದ್ದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

1 / 6
ದುಬೈನಲ್ಲಿ ನಡೆದ ಟಿ20 ವಿಶ್ವಕಪ್​​ ಫೈನಲ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಇಬ್ಬರು ಆಟಗಾರರು ಕೂಡ ಮೂರು ವಿಶ್ವಕಪ್ ಗೆದ್ದ ಅಪರೂಪದ ದಾಖಲೆ ಬರೆದುಕೊಂಡಿದ್ದಾರೆ.

2 / 6

ಹೌದು, ಟಿ20 ವಿಶ್ವಕಪ್​ ಫೈನಲ್​ನ ಗೆಲುವಿನ ರೂವಾರಿಗಳಾದ ಜೋಶ್ ಹ್ಯಾಝಲ್​ವುಡ್​ ಹಾಗೂ ಮಿಚೆಲ್ ಮಾರ್ಷ್​ ಮೂರು ವಿಶ್ವಕಪ್​ ಗೆದ್ದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಂದರೆ ಅಂಡರ್ 19, ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್​ ಗೆದ್ದ ಸಾಧನೆಯನ್ನು ಈ ಇಬ್ಬರು ಆಟಗಾರರು ಮಾಡಿದ್ದಾರೆ.

3 / 6
 2015ರಲ್ಲಿ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಗೆದ್ದಾಗ ಮಾರ್ಷ್ ಹಾಗೂ ಹ್ಯಾಝಲ್​ವುಡ್​ ಆಸ್ಟ್ರೇಲಿಯಾ ತಂಡದಲ್ಲಿದ್ದರು. ಅದಕ್ಕೂ ಮುನ್ನ 2010 ಅಂಡರ್​ 19 ವಿಶ್ವಕಪ್​ ಗೆದ್ದ ಆಸೀಸ್​ ತಂಡದಲ್ಲಿ ಈ ಇಬ್ಬರು ಆಟಗಾರರು ಕಾಣಿಸಿಕೊಂಡಿದ್ದರು. ಇದೀಗ 2021ರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಮೂರು ವಿಶ್ವಕಪ್ ಗೆದ್ದ ಆಟಗಾರರು ಎನಿಸಿಕೊಂಡಿದ್ದಾರೆ.

4 / 6
ಈ ಹಿಂದೆ ಇಂತಹದೊಂದು ಸಾಧನೆ ಮಾಡಿದ್ದು ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್ ಎಂಬುದು ವಿಶೇಷ. ಯುವಿ 2000ರ ಅಂಡರ್ 19 ವಿಶ್ವಕಪ್, 2007 ರ ಟಿ20 ವಿಶ್ವಕಪ್ ಹಾಗೂ 2011 ರ ಏಕದಿನ ವಿಶ್ವಕಪ್ ಗೆದ್ದ ವಿಶ್ವದ ಏಕೈಕ ಆಟಗಾರನಾಗಿ ಗುರುತಿಸಿಕೊಂಡಿದ್ದರು.

5 / 6
ಇದೀಗ ಯುವರಾಜ್ ಸಿಂಗ್ ವಿಶ್ವ ದಾಖಲೆಯನ್ನು ಜೋಶ್ ಹ್ಯಾಝಲ್​ವುಡ್​ ಹಾಗೂ ಮಿಚೆಲ್ ಮಾರ್ಷ್​ ಸರಿಗಟ್ಟಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

6 / 6
ಜೋಶ್ ಹ್ಯಾಝಲ್​ವುಡ್​ ಹಾಗೂ ಮಿಚೆಲ್ ಮಾರ್ಷ್

ಜೋಶ್ ಹ್ಯಾಝಲ್​ವುಡ್​ ಹಾಗೂ ಮಿಚೆಲ್ ಮಾರ್ಷ್

Published On - 4:41 pm, Mon, 15 November 21