T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?
t20 world cup 2021 prize money: ಇನ್ನು ಪ್ರತಿ ಪಂದ್ಯದ ಗೆಲುವಿಗೆ 40 ಸಾವಿರ ಡಾಲರ್ ನೀಡಲಾಗಿದೆ. ಅಂದರೆ ಪ್ರತಿ ಪಂದ್ಯ ಗೆದ್ದಾಗಲೂ ಗೆದ್ದ ತಂಡಕ್ಕೆ ಸುಮಾರು 30 ಲಕ್ಷ ರೂ ಲಭಿಸಿದೆ.
ಚುಟುಕು ಕ್ರಿಕೆಟ್ ಕದನ ಟಿ20 ವಿಶ್ವಕಪ್ ಮುಕ್ತಾಯಗೊಂಡಿದೆ. ಅಕ್ಟೋಬರ್ 17 ರಿಂದ ಓಮಾನ್ನಲ್ಲಿ ಆರಂಭವಾದ ಟೂರ್ನಿಯು ನವೆಂಬರ್ 14 ರಂದು ದುಬೈನಲ್ಲಿ ನಡೆದ ನ್ಯೂಜಿಲೆಂಡ್-ಆಸ್ಟ್ರೇಲಿಯಾ ನಡುವಣ ಫೈನಲ್ನೊಂದಿಗೆ ಅಂತ್ಯಗೊಂಡಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾ ಭರ್ಜರಿ ಪ್ರಶಸ್ತಿ ಮೊತ್ತ ಲಭಿಸಿದೆ. ಅಷ್ಟೇ ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಭಾಗವಹಿಸಿದ ಪ್ರತಿಯೊಂದು ತಂಡಕ್ಕೂ ಇಂತಿಷ್ಟು ಮೊತ್ತ ನೀಡಲಾಗಿದೆ. ಅದರಂತೆ ಯಾರಿಗೆ ಎಷ್ಟು ಮೊತ್ತ ಸಿಕ್ಕಿದೆ ಎಂಬುದನ್ನು ನೋಡೋಣ.
1 / 7
ಈ ಬಾರಿಯ ಟೂರ್ನಿಗಾಗಿ ಒಟ್ಟು 5.6 ಮಿಲಿಯನ್ ಡಾಲರ್ ಹಣವನ್ನು ವಿನಿಯೋಗಿಸಲಾಗಿದೆ. ಅಂದರೆ ಸುಮಾರು 42 ಕೋಟಿ ರೂ. ಈ ಮೊತ್ತವನ್ನು ಟೂರ್ನಿಯಲ್ಲಿ ಪಾಲ್ಗೊಂಡ 16 ತಂಡಗಳಿಗೆ ವಿವಿಧ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗಿದೆ. ಅರ್ಹತಾ ಸುತ್ತಿನಿಂದ ಫೈನಲ್ ಪಂದ್ಯವಾಡಿದ ತಂಡಗಳಿಗೆ ಇಂತಿಷ್ಟು ಮೊತ್ತ ಸಿಗಲಿದೆ.
2 / 7
Winners: ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾ ತಂಡಕ್ಕೆ ಒಟ್ಟು 1.6 ಮಿಲಿಯನ್ ಡಾಲರ್ ಪ್ರಶಸ್ತಿ ಮೊತ್ತ ನೀಡಲಾಗಿದೆ. ಅಂದರೆ ಸುಮಾರು 12 ಕೋಟಿ ರೂ.
3 / 7
Runner Up: ಇನ್ನು ಫೈನಲ್ನಲ್ಲಿ ಸೋತು ರನ್ನರ್ ಅಪ್ ಆದ ನ್ಯೂಜಿಲೆಂಡ್ ತಂಡಕ್ಕೆ 8 ಲಕ್ಷ ಡಾಲರ್ ನೀಡಲಾಗಿದೆ. ಸುಮಾರು 6 ಕೋಟಿ ರೂ.
4 / 7
Semi Finalists: ಇನ್ನು ಸೆಮಿಫೈನಲ್ ಪ್ರವೇಶಿಸಿದ ಎರಡು ತಂಡಗಳಿಗೆ ತಲಾ 4 ಲಕ್ಷ ಡಾಲರ್ ನೀಡಲಾಗಿದೆ. ಅದರಂತೆ ಸೆಮಿಫೈನಲ್ ಆಡಿದ ಪಾಕಿಸ್ತಾನ್ ಹಾಗೂ ಇಂಗ್ಲೆಂಡ್ ತಂಡಗಳಿಗೆ ಸುಮಾರು 3 ಕೋಟಿ ರೂ. ಸಿಕ್ಕಿದೆ.
5 / 7
Super 12 Teams: ಅದೇ ರೀತಿ ಸೂಪರ್-12 ಹಂತದಲ್ಲಿ ಆಡಿ ಹೊರಬಿದ್ದ 8 ತಂಡಗಳಿಗೆ 70 ಸಾವಿರ ಡಾಲರ್ ನೀಡಲಾಗಿದೆ. ಅಂದರೆ ಪ್ರತಿ ತಂಡಕ್ಕೆ ಸುಮಾರು 52 ಲಕ್ಷ ರೂ. ಸಿಗಲಿದೆ.