T20 World Cup: ಟಿ20 ವಿಶ್ವಕಪ್ ಗೆದ್ದಿರುವ 5 ತಂಡಗಳಾವುವು ಗೊತ್ತಾ?

T20 World Cup 2021 Final: 2014ರ ವಿಶ್ವಕಪ್​ನಲ್ಲಿ ಎರಡನೇ ಬಾರಿ ಫೈನಲ್​ ಪ್ರವೇಶಿಸಿದ್ದ ಟೀಮ್ ಇಂಡಿಯಾ ಅಂತಿಮ ಹಣಾಹಣಿಯಲ್ಲಿ ಲಂಕಾ ವಿರುದ್ದ ಸೋತು ರನ್ನರ್ ಅಪ್ ಪ್ರಶಸ್ತಿ ಪಡೆಯಿತು.

TV9 Web
| Updated By: ಝಾಹಿರ್ ಯೂಸುಫ್

Updated on: Nov 14, 2021 | 2:45 PM

 ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಏಳನೇ ಆವೃತ್ತಿಗೆ ತೆರೆಬಿದ್ದಿದೆ. ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ದ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿ ಚೊಚ್ಚಲ ಬಾರಿ ಟಿ20 ವಿಶ್ವಕಪ್​ ಮುಡಿಗೇರಿಸಿಕೊಂಡಿದೆ. ಇದರೊಂದಿಗೆ 6ನೇ ತಂಡವೊಂದು ಟಿ20 ವಿಶ್ವಕಪ್ ಗೆದ್ದಂತಾಗಿದೆ.

1 / 15
ಇದಕ್ಕೂ ಮುನ್ನ 8 ಬಾರಿ ಟಿ20 ವಿಶ್ವಕಪ್​ ನಡೆದಿದೆ. ಈವರೆಗೆ ನಡೆದ ಚುಟುಕು ಕದನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡವೆಂದರೆ ವೆಸ್ಟ್​ ಇಂಡೀಸ್ ಮತ್ತು ಇಂಗ್ಲೆಂಡ್. ಏಕೆಂದರೆ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಲಾ  2 ಬಾರಿ ಟಿ20 ವಿಶ್ವಕಪ್​ ಅನ್ನು ಮುಡಿಗೇರಿಸಿಕೊಂಡಿದೆ. ಹಾಗಿದ್ರೆ ಯಾವ ವರ್ಷ ಯಾವ ತಂಡ ಟಿ20 ವಿಶ್ವಕಪ್ ಗೆದ್ದುಕೊಂಡಿತು ಎಂಬುದನ್ನು ನೋಡೋಣ.

2 / 15
2007ರ ವಿನ್ನರ್: ಚೊಚ್ಚಲ ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಮ್ ಇಂಡಿಯಾ ಎಂಬುದು ವಿಶೇಷ.

3 / 15
2007ರ ರನ್ನರ್: ದಕ್ಷಿಣ ಆಫ್ರಿಕಾದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಭಾರತದ ವಿರುದ್ದ ಸೋಲುವ ಮೂಲಕ ಪಾಕಿಸ್ತಾನ್​ ಚೊಚ್ಚಲ ವಿಶ್ವಕಪ್​ನಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

4 / 15
2009ರ ವಿನ್ನರ್: ಇಂಗ್ಲೆಂಡ್​ನಲ್ಲಿ ನಡೆದ  2ನೇ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

5 / 15
2009ರ ರನ್ನರ್​: ಪಾಕ್ ವಿರುದ್ದ ಸೋಲು ಕಾಣುವ ಮೂಲಕ ಶ್ರೀಲಂಕಾ ತಂಡವು ರನ್ನರ್ ಅಪ್ ಪ್ರಶಸ್ತಿ ಪಡೆಯಿತು.

6 / 15
2010ರ ವಿನ್ನರ್: ವೆಸ್ಟ್​ ಇಂಡೀಸ್​ನಲ್ಲಿ ನಡೆದ 3ನೇ ಟಿ20 ವಿಶ್ವಕಪ್​ನಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡವು ಮೊದಲ ಬಾರಿಗೆ ವಿಶ್ವಕಪ್ ಕಿರೀಟ ತನ್ನದಾಗಿಸಿಕೊಂಡಿತು.

7 / 15
2010ರ ರನ್ನರ್: ಟಿ20 ವಿಶ್ವಕಪ್​ನಲ್ಲಿ ಮೊದಲ ಬಾರಿ ಫೈನಲ್​ ಪ್ರವೇಶಿಸಿದ್ದ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ದ ಸೋತು ರನ್ನರ್ ಅಪ್​ಗೆ ತೃಪ್ತಿಪಟ್ಟುಕೊಂಡಿತು.

8 / 15
2012 ರ ವಿನ್ನರ್: ಶ್ರೀಲಂಕಾದಲ್ಲಿ ನಡೆದ 4ನೇ ಟಿ20 ವಿಶ್ವಕಪ್​ನಲ್ಲಿ ವೆಸ್ಟ್​ ಇಂಡೀಸ್​ ಮೊದಲ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

9 / 15
2012ರ ರನ್ನರ್: ಟಿ20 ವಿಶ್ವಕಪ್​ಗೆ ಆತಿಥ್ಯವಹಿಸಿದ್ದ ಶ್ರೀಲಂಕಾ ತಂಡವು ವೆಸ್ಟ್ ಇಂಡೀಸ್ ವಿರುದ್ದ ಫೈನಲ್​ನಲ್ಲಿ ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

10 / 15
2014ರ ವಿನ್ನರ್: ಬಾಂಗ್ಲಾದೇಶದಲ್ಲಿ ನಡೆದ 5ನೇ ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಶ್ರೀಲಂಕಾ ಚೊಚ್ಚಲ ಬಾರಿ  ಟಿ20 ವಿಶ್ವಕಪ್​ ಕಿರೀಟ ಅಲಂಕರಿಸಿತು.

11 / 15
2014ರ ರನ್ನರ್: ಈ ವಿಶ್ವಕಪ್​ನಲ್ಲಿ ಎರಡನೇ ಬಾರಿ ಫೈನಲ್​ ಪ್ರವೇಶಿಸಿದ್ದ ಟೀಮ್ ಇಂಡಿಯಾ ಅಂತಿಮ ಹಣಾಹಣಿಯಲ್ಲಿ ಲಂಕಾ ವಿರುದ್ದ ಸೋತು ರನ್ನರ್ ಅಪ್ ಪ್ರಶಸ್ತಿ ಪಡೆಯಿತು.

12 / 15
2016ರ ವಿನ್ನರ್: ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ವೆಸ್ಟ್ ಇಂಡೀಸ್​ ತಂಡವು 2ನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

13 / 15
2016ರ ರನ್ನರ್: ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಇಂಗ್ಲೆಂಡ್​ ಸೋಲು ಕಾಣುವ ಮೂಲಕ 2ನೇ ಬಾರಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿಕೊಂಡಿತು.

14 / 15
ದುಬೈನಲ್ಲಿ ಇಂದು (ನವೆಂಬರ್ 14) ನಡೆಯಲಿರುವ 7ನೇ ಆವೃತ್ತಿ ಟಿ20 ವಿಶ್ವಕಪ್​ನ ಫೈನಲ್​ನಲ್ಲಿ ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮುಖಾಮುಖಿಯಾಗಲಿದ್ದು, ಈ ಬಾರಿ ಯಾರು ಚಾಂಪಿಯನ್​ ಪಟ್ಟ ಅಲಂಕರಿಸಲಿದ್ದಾರೆ ಕಾದು ನೋಡಬೇಕಿದೆ.

15 / 15
Follow us