PAK vs ENG: ರೋಹಿತ್ ದಾಖಲೆ ಉಡೀಸ್; ಕೊಹ್ಲಿ ಹಿಂದೆ ಬಿದ್ದ ಪಾಕ್ ನಾಯಕ ಬಾಬರ್ ಆಝಂ
PAK vs ENG: 32 ರನ್ಗಳ ಈ ಇನ್ನಿಂಗ್ಸ್ ಆಧಾರದ ಮೇಲೆ ಬಾಬರ್, ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್(3987 ರನ್) ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (3974 ರನ್) ಅವರನ್ನು ಹಿಂದಿಕ್ಕಿದ್ದಾರೆ. ಅಲ್ಲದೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
1 / 6
ಮುಂಬರುವ ಟಿ20 ವಿಶ್ವಕಪ್ 2024 ರ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನ ಕ್ರಿಕೆಟ್ ತಂಡವು 4 ಪಂದ್ಯಗಳ ಟಿ20 ಸರಣಿಯನ್ನು ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಈ ಸರಣಿಯ ಎರಡನೇ ಪಂದ್ಯದಲ್ಲಿ, ಪಾಕಿಸ್ತಾನಿ ತಂಡದ ನಾಯಕ ಬಾಬರ್ ಆಝಂ 26 ಎಸೆತಗಳಲ್ಲಿ 32 ರನ್ ಕಲೆಹಾಕಿದರು. ಈ ಮೂಲಕ ಟಿ20 ಮಾದರಿಯಲ್ಲಿ ಅಪರೂಪದ ದಾಖಲೆ ಕೂಡ ಸೃಷ್ಟಿಸಿದರು.
2 / 6
32 ರನ್ಗಳ ಈ ಇನ್ನಿಂಗ್ಸ್ ಆಧಾರದ ಮೇಲೆ ಬಾಬರ್, ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್(3987 ರನ್) ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (3974 ರನ್) ಅವರನ್ನು ಹಿಂದಿಕ್ಕಿದ್ದಾರೆ. ಅಲ್ಲದೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
3 / 6
ಉಳಿದಂತೆ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (4037 ರನ್) ಆಕ್ರಮಿಸಿಕೊಂಡಿದ್ದಾರೆ. ಆದರೆ ಈ ದಾಖಲೆಯನ್ನೂ ಬಾಬರ್ ಆಝಂ ಮುರಿಯುವ ಸಮೀಪದಲ್ಲಿದ್ದಾರೆ.
4 / 6
ಟಿ20 ವಿಶ್ವಕಪ್ಗೂ ಮೊದಲು, ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧದ ಈ ಟಿ20 ಸರಣಿಯಲ್ಲಿ ಇನ್ನೂ 2 ಪಂದ್ಯಗಳನ್ನು ಆಡಬೇಕಾಗಿದೆ. ಇದರಲ್ಲಿ ಬಾಬರ್ ಆಝಂ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ.
5 / 6
ಬಾಬರ್ ಆಝಂ ಇದುವರೆಗೆ 118 ಟಿ20 ಪಂದ್ಯಗಳಲ್ಲಿ 41.10 ಸರಾಸರಿಯಲ್ಲಿ 3987 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಮತ್ತು 36 ಅರ್ಧ ಶತಕಗಳು ಸೇರಿವೆ.
6 / 6
ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಇದುವರೆಗೆ 117 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, 51.75ರ ಸರಾಸರಿಯಲ್ಲಿ 4037 ರನ್ ಗಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೊಹ್ಲಿ ದಾಖಲೆ ಮುರಿಯಲು ಬಾಬರ್ ಇನ್ನೂ 51 ರನ್ ಗಳಿಸಬೇಕಿದ್ದು, ಇದಕ್ಕಾಗಿ ಇಂಗ್ಲೆಂಡ್ ವಿರುದ್ಧದ ಈ ಟಿ20 ಸರಣಿಯ ಉಳಿದ 2 ಪಂದ್ಯಗಳಲ್ಲಿ ಬಾಬರ್ಗೆ ಅವಕಾಶ ಸಿಗಲಿದೆ.