Harry Brook: ಒಂದೇ ಓವರ್​ನಲ್ಲಿ 6 ಫೋರ್​: ಬ್ರೂಕ್ ಸ್ಪೋಟಕ ಶತಕ..!

| Updated By: ಝಾಹಿರ್ ಯೂಸುಫ್

Updated on: Dec 01, 2022 | 5:53 PM

PAK vs ENG: ಇಂಗ್ಲೆಂಡ್ ತಂಡವು ಮೊದಲ ದಿನದಾಟದಲ್ಲಿ 4 ವಿಕೆಟ್ ಕಳೆದುಕೊಂಡು 506 ರನ್​ ಕಲೆಹಾಕಿದೆ. ಕ್ರೀಸ್​ನಲ್ಲಿ ಹ್ಯಾರಿ ಬ್ರೂಕ್ (101) ಹಾಗೂ ನಾಯಕ ಬೆನ್​ ಸ್ಟೋಕ್ಸ್ (34) ಅಜೇಯರಾಗಿ ಉಳಿದಿದ್ದಾರೆ.

1 / 6
ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಸ್ಪೋಟಕ ಇನಿಂಗ್ಸ್ ಆಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡದ ಪರ ಆರಂಭಿಕರಾದ ಝ್ಯಾಕ್​ ಕ್ರಾವ್ಲೆ 111 ಎಸೆತಗಳಲ್ಲಿ 122 ಹಾಗೂ ಬೆನ್ ಡಕೆಟ್ 110 ಎಸೆತಗಳಲ್ಲಿ 107 ರನ್​ಗಳ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು.

2 / 6
ಇದಾದ ಬಳಿಕ ಬಂದ ಒಲಿ ಪೋಪ್ ಕೂಡ 104 ಎಸೆತಗಳಲ್ಲಿ 108 ರನ್​ ಬಾರಿಸಿದರು. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್ 23 ರನ್​ಗಳಿಸಿ ಝಾಹಿದ್ ಮೆಹಮೂದ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು.

3 / 6
ಈ ಹಂತದಲ್ಲಿ ಕಣಕ್ಕಿಳಿದ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕಣಕ್ಕಿಳಿಯುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬ್ರೂಕ್ ಸೌದ್ ಶಕೀಲ್ ಎಸೆದ 68ನೇ ಓವರ್​ನ 6 ಎಸೆತಗಳಲ್ಲೂ ಭರ್ಜರಿ ಬೌಂಡರಿ ಬಾರಿಸಿದರು. ಈ ಮೂಲಕ ಒಂದೇ ಓವರ್​ನಲ್ಲಿ 6 ಫೋರ್ ಬಾರಿಸಿದ ವಿಶೇಷ ಸಾಧಕರ ಪಟ್ಟಿಗೆ ಹ್ಯಾರಿ ಬ್ರೂಕ್ ಸೇರ್ಪಡೆಯಾದರು.

4 / 6
ಶಕೀಲ್ ಎಸೆದ ಮೊದಲ ಎಸೆತವನ್ನು ಔಟ್ ಸೈಡ್​ ಆಫ್​ನತ್ತ ಫೋರ್ ಬಾರಿಸಿದ ಬ್ರೂಕ್, 2ನೇ ಎಸೆತವನ್ನು ಎಕ್ಸ್​ಟ್ರಾ ಕವರ್​ನತ್ತ ಬಾರಿಸಿ ಬೌಂಡರಿಗಿಟ್ಟಿಸಿಕೊಂಡರು. ಇನ್ನು 3ನೇ ಎಸೆತವನ್ನು ಆಕರ್ಷಕ ಆಫ್​ ಸೈಡ್ ಶಾಟ್ ಮೂಲಕ ಬೌಂಡರಿಗೆ ತಲುಪಿಸಿದರು.

5 / 6
ಹಾಗೆಯೇ 4ನೇ ಎಸೆತವನ್ನು ಆಫ್​ ಸೈಡ್​ನತ್ತ ಪುಲ್ ಮಾಡುವ ಮೂಲಕ ಫೋರ್​ಗಳಿಸಿದರೆ, 5ನೇ ಎಸೆತವನ್ನು ಎಕ್ಸ್​ಟ್ರಾ ಕವರ್​ನತ್ತ ಬಾರಿಸಿದರು. ಇನ್ನು ಅಂತಿಮ ಎಸೆತವನ್ನು ಮಿಡ್​ ವಿಕೆಟ್​ನತ್ತ ಬಾರಿಸುವ ಮೂಲಕ ಸೌದ್ ಶಕೀಲ್ ಓವರ್​ನಲ್ಲಿ 24 ರನ್ ಕಲೆಹಾಕಿದರು.

6 / 6
ಅಷ್ಟೇ ಅಲ್ಲದೆ ಕೇವಲ 80 ಎಸೆತಗಳಲ್ಲಿ 14 ಫೋರ್, 2 ಸಿಕ್ಸ್​ನೊಂದಿಗೆ ಚೊಚ್ಚಲ ಶತಕ ಪೂರೈಸುವ ಮೂಲಕ ಬ್ಯಾಟ್ ಮೇಲೆಕ್ಕೆತ್ತಿದ್ದರು. ಸದ್ಯ ಇಂಗ್ಲೆಂಡ್ ತಂಡವು ಮೊದಲ ದಿನದಾಟದಲ್ಲಿ 4 ವಿಕೆಟ್ ಕಳೆದುಕೊಂಡು 506 ರನ್​ ಕಲೆಹಾಕಿದೆ. ಕ್ರೀಸ್​ನಲ್ಲಿ ಹ್ಯಾರಿ ಬ್ರೂಕ್ (101) ಹಾಗೂ ನಾಯಕ ಬೆನ್​ ಸ್ಟೋಕ್ಸ್ (34) ಅಜೇಯರಾಗಿ ಉಳಿದಿದ್ದಾರೆ.