ತವರಿನಲ್ಲಿ ಟೆಸ್ಟ್ ಸರಣಿ ಸೋಲು; ಬಾಬರ್ ಟೆಸ್ಟ್ ನಾಯಕತ್ವಕ್ಕೆ ಕುತ್ತು! ಮುಖ್ಯ ಕೋಚ್​ಗೂ ತಂಡದಿಂದ ಕೋಕ್

| Updated By: ಪೃಥ್ವಿಶಂಕರ

Updated on: Dec 22, 2022 | 12:33 PM

Babar Azam: ಟೆಸ್ಟ್ ನಾಯಕತ್ವದಿಂದ ಬಾಬರ್ ಅಜಮ್​ರನ್ನು ಕೆಳಗಿಳಿಸಲು ಕೌಂಟ್‌ಡೌನ್ ಆರಂಭವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಆಪ್ತ ಮೂಲವು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದೆ.

1 / 8
ಆಸ್ಟ್ರೇಲಿಯ ವಿರುದ್ಧ ಸತತ 4 ಟೆಸ್ಟ್ ಪಂದ್ಯಗಳು ಸೇರಿದಂತೆ ಎರಡು ಸರಣಿ ಸೋತಿರುವ ಪಾಕ್ ಕ್ರಿಕೆಟ್ ತಂಡದಲ್ಲಿ ಬದಲಾವಣೆ ಗಾಳಿ ಬೀಸಲಾರಂಭಿಸಿದೆ. ಇದರ ಮೊದಲ ಹೆಜ್ಜೆಯಾಗಿ ತಂಡದ ನಾಯಕ ಬಾಬರ್ ಅಜಂ ಮತ್ತು ಮುಖ್ಯ ಕೋಚ್ ಸಕ್ಲೇನ್ ಮುಷ್ತಾಕ್ ಬಲಿಯಾಗಲಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ನ ಮೂಲಗಳ ಪ್ರಕಾರ, ಕೋಚ್ ಸಕ್ಲೇನ್, ನಂತರ ಬಾಬರ್ ಅಜಮ್ ಮುಂದಿನ ವರ್ಷ ತಮ್ಮ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

2 / 8
ಟೆಸ್ಟ್ ನಾಯಕತ್ವದಿಂದ ಬಾಬರ್ ಅಜಮ್​ರನ್ನು ಕೆಳಗಿಳಿಸಲು ಕೌಂಟ್‌ಡೌನ್ ಆರಂಭವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಆಪ್ತ ಮೂಲವು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದೆ. ಮುಂದಿನ ವರ್ಷ ಜುಲೈನಲ್ಲಿ ಬಾಬರ್ ನಾಯಕತ್ವದಿಂದ ಕೆಳಗಿಳಿಯಬಹುದು ಎಂದು ವರದಿಯಾಗಿದೆ.

3 / 8
ವರದಿಯ ಪ್ರಕಾರ, ಪ್ರಸ್ತುತ ಮುಖ್ಯ ಕೋಚ್ ಮತ್ತು ಪಾಕಿಸ್ತಾನದ ಮಾಜಿ ಆಫ್ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಅವರು ಡಿಸೆಂಬರ್ 26 ರಂದು ಕರಾಚಿಯಲ್ಲಿ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯ ನಂತರ ತಮ್ಮ ಸ್ಥಾನದಿಂದ ಕೆಳಗಿಳಿಯಬಹುದು.

4 / 8
ಕೊನೆಯ ಟೆಸ್ಟ್ ಪಂದ್ಯದ ಬಳಿಕ ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿರುವ PCB ಪ್ರಧಾನ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ರಮೀಜ್ ರಾಜಾ, ಮುಖ್ಯ ಆಯ್ಕೆಗಾರ ಮೊಹಮ್ಮದ್ ವಾಸಿಮ್, ಬಾಬರ್ ಮತ್ತು ಸಕ್ಲೇನ್ ಭಾಗವಹಿಸಿದ್ದರು. ಇದರಲ್ಲಿ ಪಾಕ್ ಸೋಲಿಗೆ ಕಾರಣ ಏನು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. "ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ತಂಡದ ಪ್ರತಿಯೊಂದು ಅಂಶ, ಆಯ್ಕೆ ವಿಷಯಗಳು, ನಾಯಕತ್ವ ಮತ್ತು ಸಕ್ಲೇನ್ ಪಾತ್ರದ ಬಗ್ಗೆ ಚರ್ಚಿಸಲಾಯಿತು" ಎಂದು ಮೂಲಗಳು ತಿಳಿಸಿವೆ.

5 / 8
ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಟೆಸ್ಟ್ ಸರಣಿಗೆ ತಂಡದ ಆಯ್ಕೆ ಕುರಿತು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ಈ ವರದಿಯಲ್ಲಿ ಉಲ್ಲೇಖಿಸಿವೆ. ಅದೇ ಸಮಯದಲ್ಲಿ, ಮೂರು ಪ್ರಮುಖ ವೇಗದ ಬೌಲರ್‌ಗಳಾದ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಗಾಯಗೊಂಡಿದ್ದರಿಂದ ತಂಡಕ್ಕೆ ಈ ಸೋಲು ಎದುರಾಯಿತು ಎಂದು ಬಾಬರ್ ತಮ್ಮ ಸೋಲಿಗೆ ಕಾರಣಗಳನ್ನು ಅಧ್ಯಕ್ಷರ ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ.

6 / 8
ಅದೇ ಸಮಯದಲ್ಲಿ, ಈಗಾಗಲೇ ನಿರ್ಧರಿಸಿರುವಂತೆ ಪ್ರಕಾರ, ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿ ಮುಗಿದ ನಂತರ ಮುಖ್ಯ ಕೋಚ್ ಹುದ್ದೆಯನ್ನು ತೊರೆಯುವುದಾಗಿ ಕೋಚ್ ಸಕ್ಲೈನ್ ರಾಜಾಗೆ ದೃಢಪಡಿಸಿದ್ದು, ಪಿಸಿಬಿ ಹೊಸ ಕೋಚ್ಗಾಗಿ ಹುಡುಕಾಟವನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

7 / 8
ಇಷ್ಟೇ ಅಲ್ಲ, ಸೀಮಿತ ಓವರ್‌ಗಳ ತಂಡಕ್ಕೆ ಮಾತ್ರ ಬಾಬರ್ ನಾಯಕತ್ವ ವಹಿಸಲಿದ್ದು, ಟೆಸ್ಟ್ ಮಾದರಿಯ ನಾಯಕತ್ವವನ್ನು ಬಹುಶಃ ಶಾನ್ ಮಸೂದ್ ಅಥವಾ ಮೊಹಮ್ಮದ್ ರಿಜ್ವಾನ್‌ಗೆ ಹಸ್ತಾಂತರಿಸಲು ಪಿಸಿಬಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

8 / 8
ಅಲ್ಲದೆ ಬಾಬರ್ ಅವರನ್ನು ಮುಂದಿನ ವರ್ಷದ ಜುಲೈವರೆಗೆ ಟೆಸ್ಟ್ ನಾಯಕತ್ವದಲ್ಲಿ ಮುಂದುವರೆಸುವ ಬಗ್ಗೆ ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಒಂದು ವೇಳೆ ಬಾಬರ್​ರನ್ನು ಈಗಲೇ ನಾಯಕತ್ವದಿಂದ ತೆಗೆದರೆ, ಇದು ತಂಡದ ಧೈರ್ಯವನ್ನು ಕುಗ್ಗಿಸುತ್ತದೆ ಮತ್ತು ನಾಯಕನ ಫಾರ್ಮ್ ಮೇಲೆ ಪರಿಣಾಮ ಬೀರುವ ಸಲುವಾಗಿ ನಿರ್ಧಾರವನ್ನು ತಡವಾಗಿ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. "ಆದರೆ ಜುಲೈನಲ್ಲಿ ಬಾಬರ್ ಅವರನ್ನು ಟೆಸ್ಟ್ ನಾಯಕತ್ವದಿಂದ ಕೆಳಗಿಳಿಸುವುದು ಖಚಿತ ಎಂದು ಮೂಲಗಳು ಹೇಳಿವೆ.