ಏಷ್ಯಾಕಪ್​ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1

| Updated By: ಝಾಹಿರ್ ಯೂಸುಫ್

Updated on: Aug 27, 2023 | 5:28 PM

India vs Pakistan: ಈ ಬಾರಿಯ ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ್ ತಂಡಗಳು ಸೆಪ್ಟೆಂಬರ್ 2 ರಂದು ಮುಖಾಮುಖಿಯಾಗಲಿದೆ. ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.

1 / 7
ಅಫ್ಘಾನಿಸ್ತಾನ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ್ ತಂಡ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಗೆಲುವಿನೊಂದಿಗೆ ಬಾಬರ್ ಆಝಂ ಪಡೆ ಏಕದಿನ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದೆ.

2 / 7
ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನ್ ತಂಡವು ಒಟ್ಟು 118 ರೇಟಿಂಗ್​ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 118 ರೇಟಿಂಗ್ ಪಡೆದಿರುವ ಆಸ್ಟ್ರೇಲಿಯಾ ತಂಡವು ದ್ವಿತೀಯ ಸ್ಥಾನದಲ್ಲಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಭಾರತ ತಂಡದ ಹೊಂದಿರುವ ರೇಟಿಂಗ್ 113.

3 / 7
ಅಂದರೆ ಇಲ್ಲಿ ಭಾರತ ಹಾಗೂ ಪಾಕಿಸ್ತಾನ್ ನಡುವಣ ರೇಟಿಂಗ್ ವ್ಯತ್ಯಾಸ ಕೇವಲ 5 ಮಾತ್ರ. ಹೀಗಾಗಿಯೇ ಏಷ್ಯಾಕಪ್​ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಗ್ರಸ್ಥಾನಕ್ಕೇರುವ ಉತ್ತಮ ಅವಕಾಶ ಟೀಮ್ ಇಂಡಿಯಾ ಮುಂದಿದೆ.

4 / 7
ಅಂದರೆ ಭಾರತ ತಂಡವು ಪಾಕಿಸ್ತಾನ್ ವಿರುದ್ಧದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡರೆ ರ‍್ಯಾಂಕಿಂಗ್​ನಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಹಾಗೆಯೇ ಏಷ್ಯಾಕಪ್​ನಲ್ಲಿ ಭಾರತ ಗೆಲುವಿನ ನಾಗಾಲೋಟದೊಂದಿಗೆ ಕಪ್​ ಮುಡಿಗೇರಿಸಿಕೊಂಡರೆ ಅಗ್ರಸ್ಥಾನಕ್ಕೇರುವುದು ಖಚಿತ.

5 / 7
ಹೀಗಾಗಿಯೇ ಈ ಬಾರಿಯ ಏಷ್ಯಾಕಪ್​ನಲ್ಲಿ ಏಕದಿನ ಕ್ರಿಕೆಟ್​ನ ನಂಬರ್ 1 ತಂಡ ಯಾರು ಎಂಬುದು ನಿರ್ಧಾರವಾಗಲಿದೆ. ಪ್ರಸ್ತುತ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನ್ ತಂಡವು ಮೊದಲ ಸ್ಥಾನ ಕಾಯ್ದುಕೊಳ್ಳಲು ಹೋರಾಟ ನಡೆಸಿದರೆ, ಭಾರತ ಅಗ್ರಸ್ಥಾನಕ್ಕೇರಲು ಪೈಪೋಟಿ ನಡೆಸಲಿದೆ.

6 / 7
ಒಂದು ವೇಳೆ ಏಷ್ಯಾಕಪ್ ಮೂಲಕ ಭಾರತ ತಂಡವು ಏಕದಿನ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದರೆ, ಮೂರು ಮಾದರಿಯಲ್ಲೂ ಟೀಮ್ ಇಂಡಿಯಾ ನಂಬರ್ 1 ತಂಡವಾಗಿ ಹೊರಹೊಮ್ಮಲಿದೆ.

7 / 7
ಟಿ20 ತಂಡಗಳ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾ ಈಗಾಗಲೇ ನಂಬರ್ 1 ಸ್ಥಾನದಲ್ಲಿದ್ದರೆ, ಅತ್ತ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತ ತಂಡವು 118 ರೇಟಿಂಗ್​ನೊಂದಿಗೆ ಅಗ್ರಸ್ಥಾನವನ್ನು ಅಲಂಕರಿಸಿದೆ. ಇದೀಗ ಏಷ್ಯಾಕಪ್ ಮೂಲಕ ನಂಬರ್ 1 ಏಕದಿನ ತಂಡವಾಗಿ ಹೊರಹೊಮ್ಮುವ ಅವಕಾಶ ಟೀಮ್ ಇಂಡಿಯಾ ಮುಂದಿದ್ದು, ಈ ಗುರಿಯೊಂದಿಗೆ ಭಾರತ ತಂಡ ಏಷ್ಯಾಕಪ್ ಗೆಲ್ಲಲಿದೆಯಾ ಕಾದು ನೋಡಬೇಕಿದೆ.