
ಏಷ್ಯಾಕಪ್ 2023 ಟೂರ್ನಿ (Asia Cup 2023) ರೋಚಕ ಘಟ್ಟಕ್ಕೆ ತಲುಪಿದೆ. ಇಂದು ಕೊಲಂಕಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ಮತ್ತು ದಸುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡ ಮುಖಾಮುಖಿ ಆಗಲಿದೆ. ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದ್ದು, ಗೆದ್ದ ಟೀಮ್ ಬಹುತೇಕ ಫೈನಲ್‌ಗೆ ಲಗ್ಗೆ ಇಟ್ಟಂತೆ.

ಫೈನಲ್ಗೇರುವ ದೃಷ್ಟಿಯಿಂದ ಪಾಕ್-ಲಂಕಾಕ್ಕೆ ಈ ಪಂದ್ಯ ಗೆಲ್ಲಲೇಬೇಕಿದೆ. ಹೀಗಾಗಿ ಕೊಲಂಬೊದಲ್ಲಿ ಇಂದು ಹೈವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ದಟ್ಟವಾಗಿದೆ. ಕೊಲಂಬೊದಲ್ಲಿ ಇಂದುಕೂಡ ಎಡೆಬಿಡದೆ ಮಳೆ ಸುರಿಯಲಿದೆ.

ಅಕ್ಯುವೆದರ್ ಪ್ರಕಾರ, ಪಾಕ್-ಲಂಕಾ ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಹೆಚ್ಚಿದೆ. ಬೆಳಗ್ಗೆ 9 ಗಂಟೆಗೆ (ಸ್ಥಳೀಯ ಸಮಯ), ಮಧ್ಯಾಹ್ನ 2 ಗಂಟೆಗೆ, ಸಂಜೆ 5 ಗಂಟೆಗೆ ಮತ್ತು ರಾತ್ರಿ 8 ಗಂಟೆಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಶೇ. 96 ರಷ್ಟು ಮೋಡದ ವಾತಾವರಣವಿದ್ದು, ದಿನವಿಡೀ ಮಳೆಯಾಗುವ ಸಾಧ್ಯತೆಗಳಿವೆಯಂತೆ.

ಬೆಳಿಗ್ಗೆ ಮತ್ತು ಮಧ್ಯಾಹ್ನದ ಸಮಯದಲ್ಲಿ ಮಳೆ ಹೆಚ್ಚಿರುವ ಕಾರಣ ಪಂದ್ಯ ಆರಂಭ ವಿಳಂಬವಾಗಲಿದೆ. ಸಂಜೆಯ ವೇಳೆಗೆ ಮಳೆ ಕಡಿಮೆಯಾಗಲಿದೆ. ಆದರೆ, ರಾತ್ರಿ 8 ಗಂಟೆಯ ನಂತರ ಮತ್ತೆ ಮಳೆ ಸುರಿಯಲಿದೆ. ಪ್ರೇಮದಾಸದಲ್ಲಿ ಕಳೆದ ಐದು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.

ಎಲ್ಲಾದರು ಮಳೆ ಬಂದು ಪಂದ್ಯ ರದ್ದಾದರೆ ಈ ಪಂದ್ಯಕ್ಕೆ ಯಾವುದೇ ಮೀಸಲು ದಿನವಿಲ್ಲ. ಹೀಗಾಗಿ ಎರಡೂ ತಂಡಗಳು ತಲಾ ಒಂದೊಂದು ಪಾಯಿಂಟ್‌ಗಳನ್ನು ಹಂಚಿಕೊಳ್ಳುತ್ತವೆ. ಹೀಗಾದಾಗ ಪಾಯಿಂಟ್ ಮತ್ತು ನೆಟ್ರನ್ರೇಟ್ನಲ್ಲಿ ಅಧಿಕ ಇರುವ ಶ್ರೀಲಂಕಾ ಫೈನಲ್‌ಗೆ ಪ್ರವೇಶಿಸುತ್ತದೆ. ಪಾಕಿಸ್ತಾನ ಭಾರತವ ವಿರುದ್ಧ 228 ರನ್‌ಗಳ ಭಾರೀ ಸೋಲುಂಡ ಕಾರಣ ರನ್ ರೇಟ್ ಕುಸಿದಿದೆ.

ಪಾಕಿಸ್ತಾನ ತಂಡ ಭಾರತ ವಿರುದ್ಧ ನೀಡಿದ ಪ್ರದರ್ಶನ ನಾಯಕನಾಗಿ ತಲೆನೋವಾಗಿದೆ. ಬ್ಯಾಟಿಂಗ್ ಕೇವಲ 128 ರನ್ಗಳಿಗೆ ಆಲೌಟ್ ಆಗಿ ಸಂಪೂರ್ಣ ವೈಫಲ್ಯ ಅನುಭವಿಸಿತ್ತು. ಉತ್ತಮ ಆರಂಭ ಪಡೆದುಕೊಳ್ಳುವ ಜೊತೆಗೆ ಮೊಹಮ್ಮದ್ ರಿಜ್ವಾನ್ ಪದೇ ಪದೇ ವೈಫಲ್ಯ ಅನುಭವಿಸಿತ್ತಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗುತ್ತಿದೆ. ನಸೀಂ ಶಾ ಇಂಜುರಿಯಿಂದಾಗಿ ಏಷ್ಯಾಕಪ್ನಿಂದ ಹೊರಬಿದ್ದಿದ್ದಾರೆ.

ಸಿಂಹಳೀಯರು ಭಾರತ ವಿರುದ್ಧ ಸೋತಿದ್ದರೂ ಬಲಿಷ್ಠವಾಗಿದೆ. ದುನಿತ್ ವೆಲ್ಲಲಾಗೆ ಬ್ಯಾಟಿಂಗ್ನಲ್ಲಿ ಕೂಡ ಮೋಡಿ ಮಾಡಿದ್ದಾರೆ. ಲಂಕಾದ ಪ್ರಮುಖ ಅಸ್ತ್ರ ಬೌಲಿಂಗ್. ವೆಲ್ಲಲಾಗೆ ಭಾರತ ವಿರುದ್ಧ 5 ವಿಕೆಟ್ ಕಿತ್ತು ಮಿಂಚಿದ್ದರು. ಅಸಲಂಕ, ಮತೀಶ ಪತಿರಣ, ತೀಕ್ಷಣ ಕೂಡ ಮಾರಕ ಬೌಲಿಂಗ್ ಮಾಡುತ್ತಿದ್ದಾರೆ.