Pakistan World Cup Schedule: 5 ಮೈದಾನ, 9 ಪಂದ್ಯ; ಇಲ್ಲಿದೆ ಪಾಕ್ ತಂಡದ ಸಂಪೂರ್ಣ ವೇಳಾಪಟ್ಟಿ
Pakistan ODI World Cup 2023 Schedule: ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನದ 9 ಲೀಗ್ ಪಂದ್ಯಗಳನ್ನು ಕೇವಲ 5 ಸ್ಥಳಗಳಿಗೆ ಸೀಮಿತಗೊಳಿಸಲಾಗಿದ್ದು, ಬಾಬರ್ ಪಡೆ ತನ್ನ ಪಂದ್ಯಗಳನ್ನು ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಆಡಬೇಕಿದೆ.
1 / 13
2023 ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗುವುದರೊಂದಿಗೆ ಪಂದ್ಯಾವಳಿಯ ಕೌಂಟ್‌ಡೌನ್ ಕೂಡ ಪ್ರಾರಂಭವಾಗಿದೆ. ಸುಮಾರು 100 ದಿನಗಳ ನಂತರ ಅಕ್ಟೋಬರ್ 5 ರಿಂದ ಭಾರತದಲ್ಲಿ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪಂದ್ಯಾವಳಿಗೆ ಪ್ರಮುಖ ಸ್ಪರ್ಧಿಗಳು ಎಂದು ಪರಿಗಣಿಸಲ್ಪಟ್ಟಿದ್ದರೂ, ಪಾಕಿಸ್ತಾನ ಕೂಡ ಚಾಂಪಿಯನ್ ಕಿರೀಟಕ್ಕೆ ಪ್ರಮುಖ ಸ್ಪರ್ಧಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
2 / 13
ಸಾಕಷ್ಟು ವಿವಾದಗಳ ನಡುವೆಯೂ ಪಾಕಿಸ್ತಾನ ವಿಶ್ವಕಪ್ನಲ್ಲಿ ಆಡುವುದು ಬಹುತೇಕ ಖಚಿತವಾಗಿದ್ದು, ಪ್ರಕಟವಾಗಿರುವ ವೇಳಾಪಟ್ಟಿ ಪ್ರಕಾರ ಲೀಗ್ ಹಂತದಲ್ಲಿ ಪಾಕ್ ತಂಡ ಭಾರತದ ನೆಲದಲ್ಲಿ ಒಟ್ಟು 9 ಪಂದ್ಯಗಳನ್ನಾಡಲಿದೆ.
3 / 13
ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನದ 9 ಲೀಗ್ ಪಂದ್ಯಗಳನ್ನು ಕೇವಲ 5 ಸ್ಥಳಗಳಿಗೆ ಸೀಮಿತಗೊಳಿಸಲಾಗಿದ್ದು, ಬಾಬರ್ ಪಡೆ ತನ್ನ ಪಂದ್ಯಗಳನ್ನು ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಆಡಬೇಕಿದೆ. ಆ 9 ಪಂದ್ಯಗಳ ಸಂಪೂರ್ಣ ವಿವರ ಇಲ್ಲಿದೆ.
4 / 13
ಅಹಮದಾಬಾದ್ ಹೊರತುಪಡಿಸಿ ಉಳಿದೆಲ್ಲ ಸ್ಥಳಗಳಲ್ಲಿ ಪಾಕ್ ತಂಡ ತಲಾ ಎರಡು ಪಂದ್ಯಗಳನ್ನು ಆಡಲಿದೆ. ಇದರಲ್ಲೂ ಒಂದು ವಾರಕ್ಕೂ ಹೆಚ್ಚು ಕಾಲ ಉಳಿದು ಹೈದರಾಬಾದ್ ಮತ್ತು ಚೆನ್ನೈನಲ್ಲಿ ನಿರಂತರವಾಗಿ ತಲಾ 2 ಪಂದ್ಯಗಳನ್ನು ಆಡುವ ಅವಕಾಶ ಪಾಕ್ ತಂಡಕ್ಕೆ ಸಿಗಲಿದೆ.
5 / 13
ಬಾಬರ್ ಪಡೆ ಅಕ್ಟೋಬರ್ 6 ರಂದು ಕ್ವಾಲಿಫೈಯರ್ 1 ತಂಡದ ವಿರುದ್ಧ ಹೈದರಾಬಾದ್ನಲ್ಲಿ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
6 / 13
ಬಳಿಕ ಅಕ್ಟೋಬರ್ 12 ರಂದು ತನ್ನ ಎರಡನೇ ಪಂದ್ಯದಲ್ಲಿ ಪಾಕ್ ತಂಡ ಕ್ವಾಲಿಫೈಯರ್ 2 ತಂಡವನ್ನು ಹೈದರಾಬಾದ್ನಲ್ಲಿ ಎದುರಿಸಲಿದೆ.
7 / 13
ತನ್ನ ಮೂರನೇ ಪಂದ್ಯದಲ್ಲಿ ಪಾಕ್ ತಂಡ ಟಿಂ ಇಂಡಿಯಾವನ್ನು ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎದುರಿಸಲಿದೆ.
8 / 13
4ನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಲಿದೆ. ಈ ಪಂದ್ಯ ಅಕ್ಟೋಬರ್ 20 ರಂದು ನಡೆಯಲಿದೆ.
9 / 13
ಅಕ್ಟೋಬರ್ 23 ರಂದು ಚೆನ್ನೈನಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
10 / 13
ಅಕ್ಟೋಬರ್ 27 ರಂದು ಸೌತ್ ಆಫ್ರಿಕಾ ವಿರುದ್ಧ 6ನೇ ಪಂದ್ಯ ಕೂಡ ಚೆನ್ನೈನಲ್ಲೇ ನಡೆಯಲಿದೆ.
11 / 13
7ನೇ ಪಂದ್ಯ ಕೋಲ್ಕತಾದಲ್ಲಿ ನಡೆಯಲ್ಲಿದ್ದು, ಅಕ್ಟೋಬರ್ 31 ರಂದು ನಡೆಯುವ ಈ ಪಂದ್ಯದಲ್ಲಿ ಪಾಕ್ ತಂಡಕ್ಕೆ ಬಾಂಗ್ಲಾ ಎದುರಾಳಿಯಾಗಲಿದೆ.
12 / 13
8ನೇ ಪಂದ್ಯದಲ್ಲಿ ನವೆಂಬರ್ 4 ರಂದು ನ್ಯೂಜಿಲೆಂಡ್ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಲಿದೆ.
13 / 13
ಲೀಗ್ ಹಂತದಲ್ಲಿ ತನ್ನ ಅಂತಿಮ ಹಾಗೂ ಕೊನೆಯ ಪಂದ್ಯದಲ್ಲಿ ಪಾಕ್ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ನವೆಂಬರ್ 12 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.
Published On - 8:03 am, Wed, 28 June 23