ವಾಸ್ತವವಾಗಿ ಈ ಬಾರಿಯ ವಿಶ್ವಕಪ್ ಅಹಮದಾಬಾದ್, ಹೈದರಾಬಾದ್, ಧರ್ಮಶಾಲಾ, ದೆಹಲಿ, ಚೆನ್ನೈ, ಲಕ್ನೋ, ಪುಣೆ, ಬೆಂಗಳೂರು, ಮುಂಬೈ, ಕೋಲ್ಕತ್ತಾ ಸೇರಿದಂತೆ 10 ನಗರಗಳಲ್ಲಿ ನಡೆಯಲ್ಲಿದೆ. ಆದರೆ ಈ ವೇಳಾಪಟ್ಟಿ ಪ್ರಕಟವಾಗುವ ಮುನ್ನ ತಿರುವನಂತಪುರಂ ಸೇರಿದಂತೆ 12 ನಗರಗಳು ಪಟ್ಟಿಯಲ್ಲಿದ್ದವು. ಆದರೆ ಐಸಿಸಿ ತನ್ನ ಅಂತಿಮ ಪಟ್ಟಿಯಲ್ಲಿ ಕೇವಲ 10 ನಗರಗಳ ಹೆಸರನ್ನು ಮಾತ್ರ ಅನುಮೋದಿಸಿದೆ. ಇದರಲ್ಲಿ ಮೊಹಾಲಿ, ಇಂದೋರ್, ರಾಂಚಿ, ನಾಗ್ಪುರ ಸೇರಿದಂತೆ ಭಾರತದ ಹಲವು ದೊಡ್ಡ ಮೈದಾನಗಳು ವಿಶ್ವಕಪ್ ಆತಿಥ್ಯದಿಂದ ವಂಚಿತವಾಗಿವೆ.