MPL 2023: 4,4,4,4,4,4: ಒಂದೇ ಓವರ್ನಲ್ಲಿ 6 ಫೋರ್ ಬಾರಿಸಿ ದಾಖಲೆ ಬರೆದ ಬಾವ್ನೆ
MPL 2023: ರತ್ನಾಗಿರಿ ಜೆಟ್ಸ್ ವಿರುದ್ಧದ ಪಂದ್ಯದಲ್ಲಿ ಅಂಕಿತ್ ಬಾವ್ನೆ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದರು. ಆ ಪಂದ್ಯದಲ್ಲಿ 60 ಎಸೆತಗಳನ್ನು ಎದುರಿಸಿದ್ದ ಬಾವ್ನೆ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 105 ರನ್ ಬಾರಿಸಿದ್ದರು.
Updated on: Jun 27, 2023 | 11:30 PM

ಪುಣೆಯಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಒಂದೇ ಓವರ್ನಲ್ಲಿ ಸತತ 6 ಫೋರ್ ಬಾರಿಸುವ ಮೂಲಕ ಶತಕ ಯುವ ದಾಂಡಿಗ ಅಂಕಿತ್ ಬಾವ್ನೆ ಹೊಸ ದಾಖಲೆ ನಿರ್ಮಿಸಿದ್ದಾರೆ. ಈಗಲ್ ನಾಸಿಕ್ ಟೈಟಾನ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಅದು ಕೊಲ್ಹಾಪುರ ಟಸ್ಕರ್ಸ್ ಪರ ಕಣಕ್ಕಿಳಿದ ಅಂಕಿತ್ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.

ಮಳೆಯ ಕಾರಣ 10 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಈಗಲ್ ನಾಸಿಕ್ ಟೈಟಾನ್ಸ್ 9 ವಿಕೆಟ್ ನಷ್ಟಕ್ಕೆ 89 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಕೊಲ್ಹಾಪುರ ಟಸ್ಕರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಅಂಕಿತ್ ಬಾವ್ನೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.

ಅದರಲ್ಲೂ ಈಗಲ್ ನಾಸಿಕ್ ಟೈಟಾನ್ಸ್ ತಂಡದ ಸ್ಪಿನ್ನರ್ ಪ್ರಶಾಂತ್ ಸೋಲಂಕಿ ಎಸೆದ ಮೂರನೇ ಓವರ್ನಲ್ಲಿ ಅಂಕಿತ್ ಅಕ್ಷರಶಃ ಅಬ್ಬರಿಸಿದರು. ಮೊದಲ ಎಸೆತದಲ್ಲಿ ಫೋರ್ ಬಾರಿಸಿ ಶುಭಾರಂಭ ಮಾಡಿದ ಅಂಕಿತ್ ಆ ಬಳಿಕ ಬ್ಯಾಕ್ ಟು ಬ್ಯಾಕ್ ಬೌಂಡರಿಗಳನ್ನು ಬಾರಿಸಿದರು.

ಈ ಮೂಲಕ ಪ್ರಶಾಂತ್ ಸೋಲಂಕಿಯ ಒಂದೇ ಓವರ್ನಲ್ಲಿ 6 ಫೋರ್ನೊಂದಿಗೆ 24 ರನ್ ಕಲೆಹಾಕಿದರು. ಇದರೊಂದಿಗೆ ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಒಂದೇ ಓವರ್ನಲ್ಲಿ 6 ಫೋರ್ ಬಾರಿಸಿದ ವಿಶೇಷ ದಾಖಲೆ ಬಾವ್ನೆ ಪಾಲಾಯಿತು. ಇನ್ನು ಈ ದಾಖಲೆ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಅಂಕಿತ್ ಕೇವಲ 27 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್ ಹಾಗೂ 11 ಫೋರ್ನೊಂದಿಗೆ 62 ರನ್ ಚಚ್ಚಿದರು.

ಅಂಕಿತ್ ಬಾವ್ನೆ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಕೊಲ್ಹಾಪುರ ಟಸ್ಕರ್ಸ್ ತಂಡವು 9 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 92 ರನ್ಗಳ ಗುರಿ ಮುಟ್ಟುವ ಮೂಲಕ ಭರ್ಜರಿ ಜಯ ದಾಖಲಿಸಿತು.

ಇದಕ್ಕೂ ಮುನ್ನ ರತ್ನಾಗಿರಿ ಜೆಟ್ಸ್ ವಿರುದ್ಧದ ಪಂದ್ಯದಲ್ಲಿ ಅಂಕಿತ್ ಬಾವ್ನೆ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದರು. ಆ ಪಂದ್ಯದಲ್ಲಿ 60 ಎಸೆತಗಳನ್ನು ಎದುರಿಸಿದ್ದ ಬಾವ್ನೆ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 105 ರನ್ ಬಾರಿಸಿದ್ದರು. ಇದೀಗ ಒಂದೇ ಓವರ್ನಲ್ಲಿ 6 ಫೋರ್ಗಳನ್ನು ಸಿಡಿಸಿ ಮತ್ತೆ ಸುದ್ದಿಯಾಗಿದ್ದಾರೆ.
