
ಮಿಸ್ಟರ್ ಕೂಲ್...ಕೂಲ್ ಕ್ಯಾಪ್ಟನ್...ಈ ಎರಡು ಪದಗಳು ಕ್ರಿಕೆಟ್ ಚರ್ಚೆಯಲ್ಲಿ ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇಲ್ಲಿ ಕೂಲ್ ಕ್ಯಾಪ್ಟನ್ ಎಂಬ ಪದವು ಮಹೇಂದ್ರ ಸಿಂಗ್ ಧೋನಿಗೆ ಸೀಮಿತವಾಗಿದೆ ಎಂದರೆ ತಪ್ಪಾಗಲಾರದು. ಹೀಗಾಗಿ ಮಿಸ್ಟರ್ ಕೂಲ್ ಆಟಗಾರ ಯಾರು ಎಂಬ ಚರ್ಚೆಗಳು ನಡೆಯುತ್ತಿರುತ್ತವೆ.

ಈ ಚರ್ಚೆಗಳಿಗೆಲ್ಲಾ ಇತಿಶ್ರೀ ಹಾಡಲು ಮುಂದಾಗಿದ್ದಾರೆ ಟೀಮ್ ಇಂಡಿಯಾದ ಮಾಜಿ ಸ್ಪೋಟಕ ದಾಂಡಿಗ ವೀರೇಂದ್ರ ಸೆಹ್ವಾಗ್. ವೀರು ಪ್ರಕಾರ, ಟೆಸ್ಟ್ ಕ್ರಿಕೆಟ್ನ ಕೂಲ್ ಆಟಗಾರ ಇಂಗ್ಲೆಂಡ್ನ ಜೋ ರೂಟ್, ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಅಥವಾ ಭಾರತದ ಚೇತೇಶ್ವರ ಪೂಜಾರ ಅಲ್ಲ.

ವೀರು ಪ್ರಕಾರ, ಟೆಸ್ಟ್ ಕ್ರಿಕೆಟ್ನ ಕೂಲ್ ಆಟಗಾರ ಇಂಗ್ಲೆಂಡ್ನ ಜೋ ರೂಟ್, ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಅಥವಾ ಭಾರತದ ಚೇತೇಶ್ವರ ಪೂಜಾರ ಅಲ್ಲ.

ಬದಲಾಗಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್. ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಹಾಡಿ ಹೊಗಳಿದ ಸೆಹ್ವಾಗ್, ನಾನು ಇತ್ತೀಚೆಗೆ ನೋಡಿದ ಅದ್ಭುತ ಟೆಸ್ಟ್ ಪಂದ್ಯ ಇದಾಗಿತ್ತು ಎಂದಿದ್ದಾರೆ.

ಅಲ್ಲದೆ ಈ ಪಂದ್ಯದ ಒತ್ತಡದ ಸನ್ನಿವೇಶದಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ನಾಥನ್ ಲಿಯಾನ್ ಅವರ ಜೊತೆಯಾಟ ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯಲಿದೆ.

ಅದರಲ್ಲೂ ಪೂರ್ಣ ಒತ್ತಡವನ್ನು ನಿಭಾಯಿಸುವ ಮೂಲಕ ಪ್ಯಾಟ್ ಕಮಿನ್ಸ್ ಬ್ಯಾಟ್ ಮಾಡಿರುವುದು ಅದ್ಭುತ. ಆತ ಟೆಸ್ಟ್ ಕ್ರಿಕೆಟ್ನ ಹೊಸ ಕೂಲ್ ಪ್ಲೇಯರ್ ಎಂದು ವೀರೇಂದ್ರ ಸೆಹ್ವಾಗ್ ಹೊಗಳಿದ್ದಾರೆ.

ಇತ್ತ ಪ್ಯಾಟ್ ಕಮಿನ್ಸ್ ಅವರನ್ನು ಸೆಹ್ವಾಗ್ ಕೂಲ್ ಪ್ಲೇಯರ್ ಎಂದಿರುವುದೇ ತಡ, ಅನೇಕರು ಆತನ ನಾಯಕತ್ವದಲ್ಲೂ ಶಾಂತ ಸ್ವಭಾವ ಕಾಣಿಸುತ್ತದೆ. ಮುಂದೊಂದು ದಿನ ಕೂಲ್ ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಿದರೂ ಅಚ್ಚರಿಪಡಬೇಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.