ನಿಯಮ ಉಲ್ಲಂಘನೆ; ಪಾಕಿಸ್ತಾನದ 15 ಆಟಗಾರರಿಗೆ ಶೋಕಾಸ್ ನೋಟಿಸ್ ನೀಡಿದ ಪಿಸಿಬಿ

|

Updated on: Aug 16, 2023 | 11:34 AM

PCB: ವರದಿಗಳ ಪ್ರಕಾರ, ಪಾಕಿಸ್ತಾನದ ಈ 15 ಆಟಗಾರರು ಎನ್‌ಒಸಿ ತೆಗೆದುಕೊಳ್ಳದೆ ಅಮೆರಿಕದಲ್ಲಿ ಆಡಲು ಹೋಗಿದ್ದಾರೆ. ಪಿಸಿಬಿ ನಿಯಮಗಳ ಪ್ರಕಾರ, ಯಾವುದೇ ಆಟಗಾರ ವಿದೇಶಿ ಲೀಗ್ ಅಥವಾ ಟೂರ್ನಿಯಲ್ಲಿ ಆಡಲು ಮೊದಲು ತನ್ನ ದೇಶದ ಕ್ರಿಕೆಟ್ ಮಂಡಳಿಯಿಂದ ಅನುಮತಿ ಪಡೆಯಬೇಕು. ಒಂದು ವೇಳೆ ಪಾಕ್ ಕ್ರಿಕೆಟ್ ಮಂಡಳಿಯು ಆಟಗಾರರಿಗೆ ಅನುಮತಿ ನೀಡಲು ನಿರಾಕರಿಸಿದರೆ, ಆ ಆಟಗಾರ ಮಂಡಳಿಯ ನಿಯಮ ಮೀರಿ ವಿದೇಶಿ ಲೀಗ್​ಗಳಲ್ಲಿ ಆಡಲು ಸಾಧ್ಯವಿಲ್ಲ.

1 / 7
ಪ್ರಮುಖ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ 15 ಆಟಗಾರರಿಗೆ ನೋಟಿಸ್ ಕಳುಹಿಸಿದೆ. ವಾಸ್ತವವಾಗಿ ಈ ಪಾಕಿಸ್ತಾನಿ ಆಟಗಾರರು ಪಿಸಿಬಿಯ ಎನ್‌ಒಸಿ ತೆಗೆದುಕೊಳ್ಳದೆ ಅಮೆರಿಕದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.

2 / 7
ವರದಿಗಳ ಪ್ರಕಾರ, ಅನೇಕ ಪಾಕಿಸ್ತಾನಿ ಆಟಗಾರರು ಪ್ರಸ್ತುತ ಅಮೆರಿಕದಲ್ಲಿ ನಡೆಯುತ್ತಿರುವ ಲೀಗ್​ನಲ್ಲಿ ಆಡುತ್ತಿದ್ದು, ಇದರಿಂದ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಣ್ಣು ಕುಕ್ಕಿದೆ. ಹೀಗಾಗಿ ಪಿಸಿ ತನ್ನ 15 ಆಟಗಾರರಿಗೆ ನೋಟಿಸ್ ಕಳುಹಿಸಿದೆ.

3 / 7
ವರದಿಗಳ ಪ್ರಕಾರ, ಪಾಕಿಸ್ತಾನದ ಈ 15 ಆಟಗಾರರು ಎನ್‌ಒಸಿ ತೆಗೆದುಕೊಳ್ಳದೆ ಅಮೆರಿಕದಲ್ಲಿ ಆಡಲು ಹೋಗಿದ್ದಾರೆ.  ಪಿಸಿಬಿ ನಿಯಮಗಳ ಪ್ರಕಾರ, ಯಾವುದೇ ಆಟಗಾರ ವಿದೇಶಿ ಲೀಗ್ ಅಥವಾ ಟೂರ್ನಿಯಲ್ಲಿ ಆಡಲು ಮೊದಲು ತನ್ನ ದೇಶದ ಕ್ರಿಕೆಟ್ ಮಂಡಳಿಯಿಂದ ಅನುಮತಿ ಪಡೆಯಬೇಕು.

4 / 7
ಒಂದು ವೇಳೆ ಪಾಕ್ ಕ್ರಿಕೆಟ್ ಮಂಡಳಿಯು ಆಟಗಾರರಿಗೆ ಅನುಮತಿ ನೀಡಲು ನಿರಾಕರಿಸಿದರೆ, ಆ ಆಟಗಾರ ಮಂಡಳಿಯ ನಿಯಮ ಮೀರಿ ವಿದೇಶಿ ಲೀಗ್​ಗಳಲ್ಲಿ ಆಡಲು ಸಾಧ್ಯವಿಲ್ಲ.  ಆದರೆ ಪಾಕಿಸ್ತಾನದ 15 ಆಟಗಾರರು ಈ ನಿಯಮವನ್ನು ಮುರಿದಿದ್ದಾರೆ.

5 / 7
ಕ್ರಿಕೆಟ್ ಪಾಕಿಸ್ತಾನದ ವರದಿ ಪ್ರಕಾರ, ಪಾಕಿಸ್ತಾನದಿಂದ 15 ಆಟಗಾರರು ಹೂಸ್ಟನ್ ಓಪನ್ ಟೂರ್ನಿಯಲ್ಲಿ ಭಾಗವಹಿಸಲು ತೆರಳಿದ್ದಾರೆ.  ಈ ಆಟಗಾರರಲ್ಲಿ ಸೊಹೈಬ್ ಮಕ್ಸೂದ್, ಅರ್ಷದ್ ಇಕ್ಬಾಲ್, ಆರಿಶ್ ಅಲಿ, ಹುಸೇನ್ ತಲಾತ್, ಅಲಿ ಶಫೀಕ್, ಇಮಾದ್ ಬಟ್, ಉಸ್ಮಾನ್ ಶೆನ್ವಾರಿ, ಉಮೈದ್ ಆಸಿಫ್, ಜೀಶಾನ್ ಅಶ್ರಫ್, ಸೈಫ್ ಬದರ್, ಮುಖ್ತಾರ್ ಅಹ್ಮದ್ ಮತ್ತು ನೌಮನ್ ಅನ್ವರ್ ಸೇರಿದ್ದಾರೆ.

6 / 7
ಇವರಲ್ಲದೆ ಪಾಕಿಸ್ತಾನದ ಕೆಲವು ಆಟಗಾರರು ಇತ್ತೀಚೆಗೆ ಮೈನರ್ ಲೀಗ್‌ನಲ್ಲಿಯೂ ಆಡಿದ್ದರು ಮತ್ತು ಅವರು ಕೂಡ ಪಿಸಿಬಿಯಿಂದ ಅನುಮತಿಯನ್ನು ಪಡೆದಿರಲಿಲ್ಲ. ಸಲ್ಮಾನ್ ಅರ್ಷದ್, ಮುಸ್ಸಾದಿಕ್ ಅಹ್ಮದ್, ಇಮ್ರಾನ್ ಖಾನ್ ಜೂನಿಯರ್, ಅಲಿ ನಾಸಿರ್ ಮತ್ತು ಹುಸೇನ್ ತಲತ್ ಈ ಲೀಗ್‌ನಲ್ಲಿ ಭಾಗವಹಿಸಿದ್ದರು.

7 / 7
ವಾಸ್ತವವಾಗಿ ಪಾಕ್ ಆಟಗಾರರ ವಿದೇಶಿ ಲೀಗ್​ಗಳ ಮೇಲಿನ ವ್ಯಾಮೋಹಕ್ಕೆ ಕಾರಣವೂ ಇದ್ದು, ಪಾಕಿಸ್ತಾನದ ದೇಶೀಯ ಆಟಗಾರರು ಬಹಳ ಕಡಿಮೆ ವೇತನ ಪಡೆಯುತ್ತಾರೆ.  ಪಾಕಿಸ್ತಾನದಲ್ಲಿ, ದೇಶೀಯ ಕ್ರಿಕೆಟ್‌ನ A+ ವರ್ಗದಲ್ಲಿರುವ ಆಟಗಾರರು ತಿಂಗಳಿಗೆ 85,000 ರೂ. ವೇತನ ಪಡೆದರೆ, ಡಿ ವರ್ಗದ ಆಟಗಾರನಿಗೆ 42 ಸಾವಿರ ರೂ. ವೇತನ ಸಿಗುತ್ತಿದೆ. ಈ ಕಾರಣಕ್ಕಾಗಿಯೇ ಆಟಗಾರರು ವಿದೇಶ ಲೀಗ್​ಗಳತ್ತ ಮುಖಮಾಡುತ್ತಿದ್ದಾರೆ.