SA vs IND 1st T20I: ಭಾರತಕ್ಕೆ ತಲೆನೋವಾದ ಪ್ಲೇಯಿಂಗ್ XI: ಯಾರನ್ನು ಆಡಿಸಬೇಕೆಂಬ ಗೊಂದಲದಲ್ಲಿ ದ್ರಾವಿಡ್-ಸೂರ್ಯ

|

Updated on: Dec 10, 2023 | 7:32 AM

India Predicted Playing XI vs South Africa 1st T20I: ಭಾರತ- ದಕ್ಷಿಣ ಆಫ್ರಿಕಾ ಮೊದಲ ಟಿ20I ಗೆ ಮುಂಚಿತವಾಗಿ ರಾಹುಲ್ ದ್ರಾವಿಡ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್​ಗೆ ದೊಡ್ಡ ತಲೆನೋವನ್ನು ಶುರುವಾಗಿದೆ. ಇಂದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಕಟ್ಟುವುದು ದೊಡ್ಡ ಸಮಸ್ಯೆಯಾಗಿದೆ.

1 / 7
ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಇಂದು ಚಾಲನೆ ಸಿಗಲಿದೆ. ಮೂರು ಟಿ20, ಮೂರು ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಆಫ್ರಿಕಾ ಕಾದಾಟ ನಡೆಸಲಿದೆ. ಈ ಪೈಕಿ ಇಂದು ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ.

2 / 7
ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆದ್ದು ವಿಶ್ವಾಸದಲ್ಲಿರುವ ಸೂರ್ಯಕುಮಾರ್ ಪಡೆ ಮತ್ತೊಂದು ಜಯವನ್ನು ಎದುರು ನೋಡುತ್ತಿದ್ದರೆ, ಅತ್ತ ತವರಿನಲ್ಲಿ ಆಫ್ರಿಕಾ ಅಬ್ಬರಿಸಲು ತಯಾರಾಗಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಆದರೆ, ಮೊದಲ ಟಿ20ಯಲ್ಲಿ ಯಾರನ್ನು ಆಡಿಸಬೇಕು ಎಂಬ ತಲೆನೋವು ನಾಯಕ-ಕೋಚ್​ಗೆ ಶುರುವಾಗಿದೆ.

3 / 7
ಶುಭ್​ಮನ್ ಗಿಲ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಸೇರಿದಂತೆ ಕೆಲ ಆಟಗಾರರು ವಿಶ್ವಕಪ್ ಬಳಿಕ ತಂಡಕ್ಕೆ ಮರಳಿದ ಕಾರಣ, ಮೆನ್ ಇನ್ ಬ್ಲೂ ಸಾಕಷ್ಟು ಬಲಿಷ್ಠವಾಗಿದೆ. ಇದರ ಜೊತೆಗೆ ಗೊಂದಲವೂ ಉಂಟಾಗಿದೆ. ಗಿಲ್ ವಾಪಸಾಗಿರುವುದರಿಂದ ಭಾರತ ಯಾವ ಆರಂಭಿಕ ಆಟಗಾರನನ್ನು ಕೈಬಿಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

4 / 7
ರುತುರಾಜ್ ಗಾಯಕ್ವಾಡ್ ನಂ 3 ಬ್ಯಾಟರ್ ಆಗಬಹುದು. ಆದರೆ ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿರುವುದರಿಂದ ಅವರಿಗೆ ಯಾವ ಕ್ರಮಾಂಕ ನೋಡಬೇಕು. ಗಾಯಕ್ವಾಡ್ ಬೆಂಚ್ ಕಾಯುವ ಸಾಧ್ಯತೆ ಕೂಡ ಇದೆ. ಮಧ್ಯಮ ಕ್ರಮಾಂಕ ಕೂಡ ಗೊಂದಲದಲ್ಲಿದೆ. ಭಾರತ ಕ್ರಿಕೆಟ್ ತಂಡವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ನಂಬರ್ 5 ಆಗಿ ಯಾರನ್ನು ಆಯ್ಕೆ ಮಾಡುತ್ತಾರೆ ನೋಡಬೇಕು.

5 / 7
ಶ್ರೇಯಸ್ ಅಯ್ಯರ್ 3ನೇ ಕ್ರಮಾಂಕದಲ್ಲಿ ಮತ್ತು ಸೂರ್ಯಕುಮಾರ್ ಯಾದವ್ 4ನೇ ಸ್ಥಾನದಲ್ಲಿದ್ದರೆ, 5ನೇ ಸ್ಥಾನಕ್ಕಾಗಿ ಇಶಾನ್ ಕಿಶನ್, ತಿಲಕ್ ವರ್ಮಾ ಮತ್ತು ರಿಂಕು ಸಿಂಗ್ ಹೋರಾಡುತ್ತಿದ್ದಾರೆ. ಭಾರತಕ್ಕೆ ಕೀಪರ್ ಬೇಕಾಗಿರುವುದರಿಂದ ಜಿತೇಶ್ ಶರ್ಮಾ ಮತ್ತು ಇಶಾನ್ ಕಿಶನ್ ನಡುವೆ ಕೂಡ ಪೈಪೋಟಿ ಏರ್ಪಟ್ಟಿದೆ.

6 / 7
ಹಾಗೆಯೆ ಕುಲ್ದೀಪ್ ಯಾದವ್ ಮತ್ತು ರವಿ ಬಿಷ್ಣೋಯ್ ವಿಷಯವೂ ಇದೆ. ಬಿಷ್ಣೋಯ್ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ, ಇತ್ತ ಯಾದವ್‌ ವಿಶ್ವಕಪ್​ನಲ್ಲಿ ನೀಡಿದ ಪ್ರದರ್ಶನ ಅದ್ಭುತವಾಗುತ್ತು. ರವೀಂದ್ರ ಜಡೇಜಾ ಕೂಡ ಇದ್ದಾರೆ. ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್ ಮತ್ತು ಅರ್ಶ್​ದೀಪ್ ಸಿಂಗ್ ವೇಗಿಗಳಾಗಿದ್ದಾರೆ.

7 / 7
ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ XI: ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್-ಕೀಪರ್), ರಿಂಕು ಸಿಂಗ್, ರವೀಂದ್ರ ಜಡೇಜಾ, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಅರ್ಶ್​ದೀಪ್ ಸಿಂಗ್.