Prasidh Krishna: ಇಂಜುರಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ; ಮತ್ತೆ ತಂಡಕ್ಕೆ ರೀ ಎಂಟ್ರಿ ಯಾವಾಗ?
TV9 Web | Updated By: ಪೃಥ್ವಿಶಂಕರ
Updated on:
Feb 16, 2023 | 5:45 PM
Prasidh Krishna: ಭಾರತದ ಯುವ ಬೌಲರ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕಳೆದ ಆರು ತಿಂಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಗಾಯದಿಂದಾಗಿ ಚೇತರಿಸಿಕೊಳ್ಳುತ್ತಿರುವ ಪ್ರಸಿದ್ಧ್, ಇದೀಗ ಯಾವಾಗ ಕ್ರಿಕೆಟ್‌ಗೆ ಮರಳಲಿದ್ದಾರೆ ಎಂಬುದರ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ.
1 / 5
ಭಾರತದ ಯುವ ಬೌಲರ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕಳೆದ ಆರು ತಿಂಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಗಾಯದಿಂದಾಗಿ ಚೇತರಿಸಿಕೊಳ್ಳುತ್ತಿರುವ ಪ್ರಸಿದ್ಧ್, ಇದೀಗ ಯಾವಾಗ ಕ್ರಿಕೆಟ್‌ಗೆ ಮರಳಲಿದ್ದಾರೆ ಎಂಬುದರ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ.
2 / 5
ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಸಿದ್ಧ್ ಕೃಷ್ಣ ಫೋಟೋವೊಂದನ್ನು ಹಂಚಿಕೊಂಡಿದ್ದು, ಆಸ್ಪತ್ರೆಯ ಬಟ್ಟೆಯಲ್ಲಿ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದಾಗಿದೆ. ಫೋಟೋ ಶೇರ್ ಮಾಡಿರುವ ಪ್ರಸಿದ್ಧ್, ‘ನಾನು ಕ್ರಿಕೆಟ್‌ನಿಂದ ಪಡೆದಕೊಂಡಿರುವ ವಿರಾಮದಿಂದಾಗಿ ತುಂಬಾ ದುಃಖಿತನಾಗಿದ್ದೇನೆ. ಶೀಘ್ರದಲ್ಲೇ ಆಟಕ್ಕೆ ಹಿಂತಿರುಗಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
3 / 5
ಈ ಹಿಂದೆ ಪ್ರಸಿದ್ಧ್ ಕನಿಷ್ಠ 6 ತಿಂಗಳು ಅಥವಾ 1 ವರ್ಷದವರೆಗೆ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಹೀಗಾಗಿ 2023ರ ಏಕದಿನ ವಿಶ್ವಕಪ್‌ನಲ್ಲಿ ಪ್ರಸಿದ್ಧ್ ಆಡುವುದು ಅನುಮಾನ ಎಂದು ಹೇಳಲಾಗಿತ್ತು. ಆದರೆ, ಇದೀಗ ಕೃಷ್ಣ ಅವರು ಶೀಘ್ರದಲ್ಲೇ ಫಿಟ್ ಕಮ್‌ಬ್ಯಾಕ್ ಮಾಡುವ ಸಾಧ್ಯತೆಗಳಿವೆ ಎಂಬುದು ಅವರ ಫೋಟೋದಲ್ಲಿಯೇ ತಿಳಿದುಬರುತ್ತಿದೆ.
4 / 5
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನ್ಯೂಜಿಲೆಂಡ್ ಎ ತಂಡದ ವಿರುದ್ಧ ಆಡಿದ 3 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಪ್ರಸಿದ್ಧ್ ಕೃಷ್ಣ ಗಾಯಗೊಂಡಿದ್ದರು. ಇದಾದ ಬಳಿಕ ಅವರ ಜಾಗಕ್ಕೆ ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
5 / 5
2021ರಲ್ಲಿ ಏಕದಿನ ಮಾದರಿಯಿಂದ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಪ್ರಸಿದ್ಧ್ ಕೃಷ್ಣ, ಇದುವರೆಗೆ 14 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 23.92 ಸರಾಸರಿಯಲ್ಲಿ 25 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ, ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿರುವ ಪ್ರಸಿದ್ಧ್, ಇದುವರೆಗೆ 51 ಪಂದ್ಯಗಳಲ್ಲಿ 34.76 ಸರಾಸರಿಯಲ್ಲಿ ಒಟ್ಟು 49 ವಿಕೆಟ್ ಪಡೆದಿದ್ದಾರೆ.
Published On - 5:42 pm, Thu, 16 February 23