ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ, ಜುಲೈ 23 ಶನಿವಾರ ಇತಿಹಾಸದಲ್ಲಿ ದಾಖಲಾಗಿದೆ. ಗ್ಲಾಮೊರ್ಗಾನ್ ಕೌಂಟಿ ತಂಡದ ಬ್ಯಾಟ್ಸ್‌ಮನ್ ಸ್ಯಾಮ್ ನಾರ್ತ್‌ಈಸ್ಟ್ ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಎರಡರ ಪಂದ್ಯದಲ್ಲಿ 410 ರನ್‌ಗಳ (ಔಟಾಗದೆ) ಬೆರಗುಗೊಳಿಸುವ ಇನ್ನಿಂಗ್ಸ್ ಆಡಿ, ದಂತಕಥೆಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ಲೀಸೆಸ್ಟರ್‌ಶೈರ್ ಮತ್ತು ಗ್ಲಾಮೊರ್ಗಾನ್ ನಡುವೆ ನಡೆಯುತ್ತಿರುವ ಈ ಪಂದ್ಯದ ನಾಲ್ಕನೇ ದಿನದಂದು ಗ್ಲಾಮೊರ್ಗನ್ ಐದು ವಿಕೆಟ್‌ಗೆ 795 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರಲ್ಲಿ ಕೇವಲ 410 ರನ್‌ಗಳು ಸ್ಯಾಮ್ ನಾರ್ತ್‌ಈಸ್ಟ್ ಅವರ ಬ್ಯಾಟ್ನಿಂದ ಬಂದವು.
Published On - 10:01 pm, Sat, 23 July 22