ಪಾಕ್ ನೆಲದಲ್ಲಿ ಧೋನಿಯ ವಿಶ್ವ ದಾಖಲೆ ಸರಿಗಟ್ಟಿದ ಕ್ವಿಂಟನ್ ಡಿ ಕಾಕ್

Updated on: Nov 09, 2025 | 7:19 PM

Quinton de Kock ODI record: ಕ್ವಿಂಟನ್ ಡಿ ಕಾಕ್ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ 239 ರನ್ ಗಳಿಸಿ ಮಿಂಚಿದರು. ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಡಿ ಕಾಕ್, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಅತಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ಎಂಎಸ್ ಧೋನಿ ವಿಶ್ವ ದಾಖಲೆಯನ್ನು ಸರಿಗಟ್ಟಿದರು. ಕೇವಲ 159 ಪಂದ್ಯಗಳಲ್ಲಿ ಈ ಸಾಧನೆ ಮಾಡುವ ಮೂಲಕ ಡಿ ಕಾಕ್ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

1 / 5
ಪಾಕಿಸ್ತಾನ ಪ್ರವಾಸವನ್ನು ದಕ್ಷಿಣ ಆಫ್ರಿಕಾ ತಂಡ ಸರಣಿ ಸೋಲಿನೊಂದಿಗೆ ಅಂತ್ಯಗೊಳಿಸಿದರೂ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದು ಎರಡು ವರ್ಷಗಳ ಬಳಿಕ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅಮೋಘ ಪ್ರದರ್ಶನ ನೀಡಿದರು. ಏಕದಿನ ಸರಣಿಯಲ್ಲಿ 239 ರನ್ ಬಾರಿಸಿದ ಡಿ ಕಾಕ್, ಇದೇ ಸರಣಿಯಲ್ಲಿ ಧೋನಿಯ ವಿಶ್ವ ದಾಖಲೆಯನ್ನು ಸಹ ಸರಿಗಟ್ಟಿದರು.

2 / 5
ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ದಕ್ಷಿಣ ಆಫ್ರಿಕಾ 1-2 ಅಂತರದಲ್ಲಿ ಸೋತಿತು. ಫಲಿತಾಂಶ ಖಂಡಿತವಾಗಿಯೂ ತಂಡದ ಪರವಾಗಿರಲಿಲ್ಲ. ಆದಾಗ್ಯೂ, ಕ್ವಿಂಟನ್ ಡಿ ಕಾಕ್ ಸರಣಿಯಲ್ಲಿ ತಂಡದ ಪರ ಅಮೋಘ ಪ್ರದರ್ಶನ ನೀಡಿದರು. ಆಡಿದ ಮೂರು ಏಕದಿನ ಪಂದ್ಯಗಳಲ್ಲಿ ಅವರು 119.50 ಸರಾಸರಿಯಲ್ಲಿ 239 ರನ್ ಬಾರಿಸಿದರು.

3 / 5
ಈ 239 ರನ್​ಗಳಲ್ಲಿ ಡಿ ಕಾಕ್ ಒಂದು ಶತಕ ಹಾಗೂ ಎರಡು ಅರ್ಧಶತಕಗಳನ್ನು ಬಾರಿಸಿದರು. ಇದರ ಜೊತೆಗೆ ಅವರು ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ 20 ಬೌಂಡರಿಗಳು ಮತ್ತು 10 ಸಿಕ್ಸರ್‌ಗಳನ್ನು ಬಾರಿಸಿದರು. ಈ ಪ್ರದರ್ಶನಕ್ಕಾಗಿ ಡಿ ಕಾಕ್​ಗೆ ಸರಣಿ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

4 / 5
ಈ ಪ್ರಶಸ್ತಿ ಗೆಲ್ಲುವ ಮೂಲಕ ಡಿ ಕಾಕ್, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ಧೋನಿಯ ವಿಶ್ವ ದಾಖಲೆಯನ್ನು ಸರಿಗಟ್ಟಿದರು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಗಿ ಎಂಎಸ್ ಧೋನಿ ಆಡಿದ 350 ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಅಂದರೆ 7 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

5 / 5
ಕ್ವಿಂಟನ್ ಡಿ ಕಾಕ್ ಇದೀಗ ಧೋನಿ ದಾಖಲೆಯನ್ನು ಸರಿಗಟ್ಟಿದ್ದು, ಪಾಕಿಸ್ತಾನ ವಿರುದ್ಧದ ತಮ್ಮ ಏಕದಿನ ವೃತ್ತಿಜೀವನದಲ್ಲಿ ಏಳನೇ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆದಾಗ್ಯೂ, ಡಿ ಕಾಕ್ ಕೇವಲ 159 ಪಂದ್ಯಗಳಲ್ಲಿ ಏಳು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದು, ಪಂದ್ಯಗಳ ವಿಚಾರದಲ್ಲಿ ಧೋನಿಗಿಂತ ಕಡಿಮೆ ಪಂದ್ಯಗಳನ್ನು ಆಡುವ ಮೂಲಕ ಈ ಸಾಧನೆ ಮಾಡಿದ್ದಾರೆ.