AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಾಣ

Cricket World Record: ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲಿ ತಂದೆ ಮತ್ತು ಮಗ ಒಂದೇ ದೇಶದ ಪರ ಆಡಿದ ಹಲವು ನಿದರ್ಶನಗಳಿವೆ. ಅಷ್ಟೇ ಅಲ್ಲದೆ ವಿವಿಧ ಲೀಗ್​​​ಗಳಲ್ಲಿ ಹಾಗೂ ದೇಶೀಯ ಟೂರ್ನಿಗಳಲ್ಲಿ ತಂದೆ ಮತ್ತು ಮಗ ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿದ ಉದಾಹರಣೆಗಳಿವೆ. ಆದರೆ ಇದೇ ಮೊದಲ ಬಾರಿಗೆ ತಂಡವೊಂದರ ಪರ ತಂದೆ-ಮಗ ಜೊತೆಯಾಗಿ ಕಣಕ್ಕಿಳಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Nov 10, 2025 | 7:09 AM

Share
ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ (New World Record) ನಿರ್ಮಾಣವಾಗಿದೆ. ಅದು ಕೂಡ ಹಿಂದೆಂದೂ ಕಂಡರಿಯದ ಮತ್ತು ಕೇಳರಿಯದ ವರ್ಲ್ಡ್​ ರೆಕಾರ್ಡ್​. ಇಂತಹದೊಂದು ದಾಖಲೆ ನಿರ್ಮಿಸಿರುವುದು ಸುಹೇಲ್ ಸತ್ತಾರ್ ಮತ್ತು ಯಹಿಯಾ ಸುಹೇಲ್.

1 / 5
ಸುಹೇಲ್ ಸತ್ತಾರ್ ಮತ್ತು ಯಹಿಯಾ ಸುಹೇಲ್ ಜೊತೆಯಾಗಿ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದರಲ್ಲೇನು ವಿಶೇಷ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ತಂದೆ ಮತ್ತು ಮಗ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಂದೆ ಮತ್ತು ಮಗ ಜೊತೆಯಾಗಿ ಒಂದೇ ತಂಡದ ಪರ ಕಣಕ್ಕಿಳಿದಿದ್ದಾರೆ.

2 / 5
ಅಂತಾರಾಷ್ಟ್ರೀಯ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. ಈ ನೂರ ನಲ್ವತ್ತೆಂಟು ವರ್ಷಗಳಲ್ಲಿ ಯಾವುದೇ ತಂಡದ ಪರ ತಂದೆ ಮತ್ತು ಮಗ ಜೊತೆಯಾಗಿ ಅಂತಾರಾಷ್ಟ್ರೀಯ ಪಂದ್ಯವಾಡಿರಲಿಲ್ಲ. ಆದರೀಗ ಟಿಮೋರ್-ಲೆಸ್ಟೆ (ಆಗ್ನೇಯ ಏಷ್ಯಾ ರಾಷ್ಟ್ರ) ದೇಶದ ಪರ ಕಣಕ್ಕಿಳಿಯುವ ಮೂಲಕ ಸುಹೇಲ್ ಸತ್ತಾರ್ ಮತ್ತು ಯಹಿಯಾ ಸುಹೇಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

3 / 5
ಇಂಡೋನೇಷ್ಯಾ ವಿರುದ್ಧದ ಪಂದ್ಯದಲ್ಲಿ ಟಿಮೋರ್-ಲೆಸ್ಟೆ ಪರ 50 ವರ್ಷದ ಸುಹೇಲ್ ಸತ್ತಾರ್ ಹಾಗೂ 17 ವರ್ಷದ ಯಹಿಯಾ ಸುಹೇಲ್ ಕಣಕ್ಕಿಳಿದಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ಸಹ ಜೊತೆಯಾಗಿ ಬ್ಯಾಟಿಂಗ್ ಸಹ ಮಾಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಜೊತೆಯಾಗಿ ಆಡಿದ ತಂದೆ-ಮಗ ಎನಿಸಿಕೊಂಡಿದ್ದಾರೆ.

4 / 5
ಇನ್ನು ಬಾಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸುಹೇಲ್ ಸತ್ತಾರ್ 14 ರನ್​​ಗಳಿಸಿದರೆ, ಯಹಿಯಾ ಸುಹೇಲ್ ಕೇವಲ 1 ರನ್​​ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಟಿಮೋರ್-ಲೆಸ್ಟೆ ತಂಡ 19 ಓವರ್​​​ಗಳಲ್ಲಿ 61 ರನ್​​ಗಳಿಸಿ ಆಲೌಟ್ ಆಗಿತ್ತು.ಈ ಗುರಿಯನ್ನು ನಾಲ್ಕು ಓವರ್​​​ಗಳಲ್ಲಿ ಚೇಸ್ ಮಾಡಿ ಇಂಡೋನೇಷ್ಯಾ ತಂಡ 10 ವಿಕೆಟ್​​​ಗಳ ಭರ್ಜರಿ ಜಯ ಸಾಧಿಸಿದೆ.

5 / 5
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು

‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ

ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು

ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?

ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ

ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ

ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್