R Ashwin: ತಂದೆ-ಮಗನ ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದ ಅಶ್ವಿನ್
TV9 Web | Updated By: ಝಾಹಿರ್ ಯೂಸುಫ್
Updated on:
Jul 12, 2023 | 9:22 PM
R Ashwin Records: ಈ ಪಂದ್ಯದಲ್ಲಿ ಅಶ್ವಿನ್ 3 ವಿಕೆಟ್ ಕಬಳಿಸಿದರೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 700 ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.
1 / 6
India vs West Indies: ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ತೇಜ್ನರೈನ್ ಚಂದ್ರಪಾಲ್ ವಿಕೆಟ್ ಕಬಳಿಸಿ ರವಿಚಂದ್ರನ್ ಅಶ್ವಿನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
2 / 6
ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಪರ ತೇಜ್ನರೈನ್ ಚಂದ್ರಪಾಲ್ ಹಾಗೂ ಕ್ರೇಗ್ ಬ್ರಾಥ್ವೈಟ್ ಇನಿಂಗ್ಸ್ ಆರಂಭಿಸಿದ್ದರು. ಈ ಜೋಡಿ ಮೊದಲ ವಿಕೆಟ್ಗೆ 31 ರನ್ ಪೇರಿಸಿದ್ದ ವೇಳೆ ಅಶ್ವಿನ್ ಎಸೆತದಲ್ಲಿ ತೇಜ್ನರೈನ್ (12) ಕ್ಲೀನ್ ಬೌಲ್ಡ್ ಆದರು.
3 / 6
ಇದರೊಂದಿಗೆ ಕ್ರಿಕೆಟ್ ಇತಿಹಾಸದಲ್ಲಿ ತಂದೆ ಹಾಗೂ ಮಗನನ್ನು ಔಟ್ ಮಾಡಿದ ಭಾರತದ ಮೊದಲ ಬೌಲರ್ ಎಂಬ ವಿಶೇಷ ದಾಖಲೆಯೊಂದು ರವಿಚಂದ್ರನ್ ಅಶ್ವಿನ್ ಹೆಸರಿಗೆ ಸೇರ್ಪಡೆಯಾಯಿತು.
4 / 6
ಇದಕ್ಕೂ ಮುನ್ನ, ಅಂದರೆ 2011 ರಲ್ಲಿ ಶಿವನರೈನ್ ಚಂದ್ರಪಾಲ್ ಅವರನ್ನು ಅಶ್ವಿನ್ ಎಲ್ಬಿಡಬ್ಲ್ಯೂ ಮಾಡಿ ಔಟ್ ಮಾಡಿದ್ದರು. ಇದೀಗ ಶಿವನರೈನ್ ಚಂದ್ರಪಾಲ್ ಅವರ ಮಗ ತೇಜ್ನರೈನ್ ಅಶ್ವಿನ್ ಅವರ ಗೂಗ್ಲಿಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ.
5 / 6
ಈ ಮೂಲಕ ಶಿವನರೈನ್ ಚಂದ್ರಪಾಲ್ ಹಾಗೂ ತೇಜ್ನರೈನ್ ಚಂದ್ರಪಾಲ್ (ತಂದೆ-ಮಗ) ರನ್ನು ಔಟ್ ಮಾಡಿದ ವಿಶೇಷ ದಾಖಲೆಯೊಂದು ರವಿಚಂದ್ರನ್ ಅಶ್ವಿನ್ ಪಾಲಾಗಿದೆ.
6 / 6
ಇನ್ನು ಈ ಪಂದ್ಯದಲ್ಲಿ ಅಶ್ವಿನ್ 3 ವಿಕೆಟ್ ಕಬಳಿಸಿದರೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 700 ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.