18ನೇ ವಯಸ್ಸಿಗೆ ಆರಂಭ, 26 ವರ್ಷಕ್ಕೆ ಅಂತ್ಯ; ವೃತ್ತಿ ಬದುಕಿಗೆ ವಿದಾಯ ಹೇಳಿದ ಟೀಂ ಇಂಡಿಯಾ ಕ್ರಿಕೆಟರ್

| Updated By: ಪೃಥ್ವಿಶಂಕರ

Updated on: Sep 01, 2022 | 9:54 PM

ಭಾರತ ಪರ ಆಡಿದ 7 ಪಂದ್ಯಗಳ 3 ಇನ್ನಿಂಗ್ಸ್‌ಗಳಲ್ಲಿ ರವಿ ಕಲ್ಪನಾ ಅವರ ಸಾಧನೆ ವಿಶೇಷವೇನಲ್ಲ. ಆ 3 ಇನ್ನಿಂಗ್ಸ್‌ಗಳಲ್ಲಿ ಅವರು ಗಳಿಸಿದ್ದು ಕೇವಲ 4 ರನ್.

1 / 5
ಭಾರತದ 26 ವರ್ಷದ ಮಹಿಳಾ ಕ್ರಿಕೆಟರ್ ರವಿ ಕಲ್ಪನಾ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತೀಯ ವಿಕೆಟ್‌ಕೀಪರ್ ತಕ್ಷಣವೇ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ.

2 / 5
ದೇಶೀಯ ಕ್ರಿಕೆಟ್‌ನಲ್ಲಿ ಆಂಧ್ರವನ್ನು ಪ್ರತಿನಿಧಿಸಿದ್ದ ರವಿ ಕಲ್ಪನಾ ಅವರು ಕೇವಲ 18 ನೇ ವಯಸ್ಸಿನಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದರು. ಅವರು ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

3 / 5
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರವಿ ಕಲ್ಪನಾ ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಕೇವಲ 8 ವರ್ಷಗಳಿಂದ ಕೂಡಿತ್ತು. ಈ ಅವಧಿಯಲ್ಲಿ ಅವರು ಭಾರತ ಪರ ಕೇವಲ 7 ಏಕದಿನ ಪಂದ್ಯಗಳನ್ನು ಆಡಿದ್ದರು.

4 / 5
ಭಾರತ ಪರ ಆಡಿದ 7 ಪಂದ್ಯಗಳ 3 ಇನ್ನಿಂಗ್ಸ್‌ಗಳಲ್ಲಿ ರವಿ ಕಲ್ಪನಾ ಅವರ ಸಾಧನೆ ವಿಶೇಷವೇನಲ್ಲ. ಆ 3 ಇನ್ನಿಂಗ್ಸ್‌ಗಳಲ್ಲಿ ಅವರು ಗಳಿಸಿದ್ದು ಕೇವಲ 4 ರನ್.

ಭಾರತ ಪರ ಆಡಿದ 7 ಪಂದ್ಯಗಳ 3 ಇನ್ನಿಂಗ್ಸ್‌ಗಳಲ್ಲಿ ರವಿ ಕಲ್ಪನಾ ಅವರ ಸಾಧನೆ ವಿಶೇಷವೇನಲ್ಲ. ಆ 3 ಇನ್ನಿಂಗ್ಸ್‌ಗಳಲ್ಲಿ ಅವರು ಗಳಿಸಿದ್ದು ಕೇವಲ 4 ರನ್.

5 / 5
ಜೂನ್ 2015 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರವಿ ಕಲ್ಪನಾ ಫೆಬ್ರವರಿ 2016 ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು. ಅಂದರೆ, ಅವರು ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿ 8 ವರ್ಷಗಳ ನಂತರ ನಿವೃತ್ತಿ ಘೋಷಿಸಿದ್ದರೂ ಸಹ ಅವರು ಕೇವಲ 8 ತಿಂಗಳ ಕಾಲ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸಕ್ರಿಯ ಸದಸ್ಯರಾಗಿ ಉಳಿಯಲು ಸಾಧ್ಯವಾಯಿತು.

Published On - 9:54 pm, Thu, 1 September 22