Ranji Trophy: 12 ಸಿಕ್ಸ್, 21 ಬೌಂಡರಿ ಸಹಿತ 283 ರನ್ ಚಚ್ಚಿದ ಕೇದಾರ್ ಜಾಧವ್..!

Updated By: ಪೃಥ್ವಿಶಂಕರ

Updated on: Jan 05, 2023 | 4:17 PM

Ranji Trophy: ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 283 ಎಸೆತಗಳನ್ನು ಎದುರಿಸಿದ ಜಾಧವ್, 100 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್​ ಬೀಸಿ 12 ಸಿಕ್ಸರ್‌ ಮತ್ತು 21 ಬೌಂಡರಿ ಸಹಿತ 283 ರನ್ ಚಚ್ಚಿದ್ದಾರೆ.

1 / 6
ಕೇದಾರ್ ಜಾಧವ್.. ಈ ಹೆಸರು ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಎಲ್ಲೋ ಕಳೆದುಹೋಗಿದೆ. ಜನರು ಈ ಆಟಗಾರನನ್ನು ಮರೆತಿದ್ದಾರೆ. ಟೀಂ ಇಂಡಿಯಾ ಹಾಗೂ ಐಪಿಎಲ್ ತಂಡಗಳು ಕೂಡ ಜಾದವ್ ಮೇಲೆ ನಂಬಿಕೆ ಕಳೆದುಕೊಂಡಿವೆ. ಆದರೆ ಕೇದಾರ್ ಜಾಧವ್ ಮತೊಮ್ಮೆ ತನ್ನ ಆಟದ ಮೂಲಕ ಸುದ್ದಿಯಾಗುತ್ತಿದ್ದಾರೆ.

2 / 6
ಪ್ರಸ್ತುತ ರಣಜಿ ಟ್ರೋಫಿ ಆಡುತ್ತಿರುವ ಕೇದಾರ್ ಜಾಧವ್ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಅಬ್ಬರದ 283 ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ.

3 / 6
ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 283 ಎಸೆತಗಳನ್ನು ಎದುರಿಸಿದ ಜಾಧವ್, 100 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್​ ಬೀಸಿ 12 ಸಿಕ್ಸರ್‌ ಮತ್ತು 21 ಬೌಂಡರಿ ಸಹಿತ 283 ರನ್ ಚಚ್ಚಿದ್ದಾರೆ.

4 / 6
ಮೂರು ವರ್ಷಗಳ ವಿರಾಮದ ನಂತರ ಪ್ರಥಮ ದರ್ಜೆ ಪಂದ್ಯವನ್ನು ಆಡುತ್ತಿರುವ ಕೇದಾರ್ ಜಾಧವ್ ಈ ಹಿಂದೆಯೂ ದೇಶೀ ಟೂರ್ಣಿಯಲ್ಲಿ ಟ್ರಿಪಲ್ ಶತಕ ಬಾರಿಸಿದ್ದ ದಾಖಲೆ ಮಾಡಿದ್ದರು ಮಾಡಿದರು.

5 / 6
ಈ ಪಂದ್ಯದಲ್ಲಿ  207 ಎಸೆತಗಳಲ್ಲಿ ದ್ವಿಶತಕ ಪೂರೈಸಿದ ಕೇದಾರ್ ನಂತರ 258 ಎಸೆತಗಳಲ್ಲಿ 250 ರನ್ ಪೂರೈಸಿದರು. ಈ ಪಂದ್ಯದಲ್ಲಿ ಕೇದಾರ್ ಟ್ರಿಪಲ್ ಸೆಂಚುರಿ ಬಾರಿಸಿದ್ದರೆ, ಇದು ಅವರ ಪ್ರಥಮ ದರ್ಜೆ ವೃತ್ತಿಜೀವನದ ಎರಡನೇ ಟ್ರಿಪಲ್ ಸೆಂಚುರಿ ಆಗುತ್ತಿತ್ತು .

6 / 6
ಕಳೆದ 3 ವರ್ಷಗಳಿಂದ ಟೀಮ್ ಇಂಡಿಯಾದಿಂದ ಹೊರಗಿದಿರುವ ಜಾಧವ್ ಫೆಬ್ರವರಿ 2020 ರಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ರು. ಕಳಪೆ ಫಾರ್ಮ್ ಕಾರಣ, ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಯಿತು.  ನಂತರ ಐಪಿಎಲ್‌ನಲ್ಲೂ ಈ ಆಟಗಾರನ ಬ್ಯಾಟ್ ಕೆಲಸ ಮಾಡಲಿಲ್ಲ. ಅಲ್ಲದೆ 2022 ರಲ್ಲಿ ಜಾಧವ್‌ಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. 2023ರ ಐಪಿಎಲ್ ಹರಾಜಿನಲ್ಲಿಯೂ ಯಾವುದೇ ತಂಡ ಜಾಧವ್ ಅವರನ್ನು ಖರೀದಿಸಿರಲಿಲ್ಲ.

Published On - 4:15 pm, Thu, 5 January 23