IPL 2022: 16 ಕೋಟಿ ನೀಡಿ, ಇಲ್ಲ ಬಿಟ್ಬಿಡಿ: ಸಂಕಷ್ಟದಲ್ಲಿ SRH ಫ್ರಾಂಚೈಸಿ
TV9 Web | Updated By: ಝಾಹಿರ್ ಯೂಸುಫ್
Updated on:
Nov 27, 2021 | 6:04 PM
IPL 2022 SRH: ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ಡೇವಿಡ್ ವಾರ್ನರ್ ಕೂಡ ಹೊರಗುಳಿಯಲಿದ್ದು, ಹೀಗಾಗಿ ಮೆಗಾ ಹರಾಜಿನಲ್ಲಿ ವಾರ್ನರ್ ಕಾಣಿಸಿಕೊಳ್ಳಲಿದ್ದಾರೆ. ಇದೀಗ ರಶೀದ್ ಖಾನ್ ಕೂಡ ಹೊರಬಂದರೆ, ಎಸ್ಆರ್ಹೆಚ್ ಫ್ರಾಂಚೈಸಿ ಇಬ್ಬರು ಸ್ಟಾರ್ ಆಟಗಾರರನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
1 / 6
ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಹೊಸ ಸಮಸ್ಯೆ ಶುರುವಾಗಿದೆ. ಅದು ಕೂಡ ಇಬ್ಬರು ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವುದರಲ್ಲಿ ಎಂಬುದು ವಿಶೇಷ. ಹೌದು, ಎಸ್ಆರ್ಹೆಚ್ ತಂಡ ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯಲ್ಲಿ ಇಬ್ಬರು ಸ್ಟಾರ್ ಆಟಗಾರರ ಹೆಸರು ಮುಂಚೂಣಿಯಲ್ಲಿದೆ.
2 / 6
ಅವರೆಂದರೆ ಕೇನ್ ವಿಲಿಯಮ್ಸನ್ ಹಾಗೂ ರಶೀದ್ ಖಾನ್. ಈ ಇಬ್ಬರೂ ಕೂಡ ಎಸ್ಆರ್ಹೆಚ್ ತಂಡದ ಸ್ಟಾರ್ ಆಟಗಾರರು. ಹೀಗಾಗಿ ಇಬ್ಬರನ್ನೂ ಉಳಿಸಿಕೊಳ್ಳಲು ಎಸ್ಆರ್ಹೆಚ್ ಫ್ರಾಂಚೈಸಿ ಬಯಸಿದೆ. ಆದರೆ ಐಪಿಎಲ್ನ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿರುವ ರಶೀದ್ ಖಾನ್ ದೊಡ್ಡ ಮೊತ್ತವನ್ನು ಡಿಮ್ಯಾಂಡ್ ಮಾಡಿದ್ದಾರೆ.
3 / 6
ಏಕೆಂದರೆ ಎಸ್ಆರ್ಹೆಚ್ ತಂಡವು ಮೊದಲ ಆಯ್ಕೆಯಾಗಿ ಕೇನ್ ವಿಲಿಯಮ್ಸನ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದೆ. ಹಾಗೆಯೇ ರಶೀದ್ ಖಾನ್ ಅವರನ್ನು 2ನೇ ಆಯ್ಕೆಯನ್ನಾಗಿಸಲು ಬಯಸಿದೆ. ಇಲ್ಲಿ ಮೊದಲ ಆಯ್ಕೆಯಲ್ಲಿ 16 ಕೋಟಿ ನೀಡಲಾದರೆ, 2ನೇ ಆಯ್ಕೆಯಲ್ಲಿ 12 ಕೋಟಿ ರೂ. ನೀಡಬೇಕಾಗುತ್ತದೆ.
4 / 6
ಆದರೆ ಕಳೆದ ಕೆಲ ವರ್ಷಗಳಿಂದ ಎಸ್ಆರ್ಹೆಚ್ ತಂಡವು ರಶೀದ್ ಖಾನ್ಗೆ ನೀಡಿದ್ದು 9 ಕೋಟಿ. ಇದೀಗ ರಿಟೈನ್ ಆಗಬೇಕಿದ್ದರೆ ಹೆಚ್ಚಿನ ಮೊತ್ತವನ್ನು ರಶೀದ್ ಖಾನ್ ಡಿಮ್ಯಾಂಡ್ ಮಾಡಿದ್ದಾರೆ. ಅಂದರೆ ಇಲ್ಲಿ ರಶೀದ್ ಖಾನ್ ಮೊದಲ ಆಯ್ಕೆಯಾಗಲು ಬಯಸಿದ್ದಾರೆ. ಈ ಮೂಲಕ 16 ಕೋಟಿಗೆ ಬೇಡಿಕೆಯಿಟ್ಟಿದ್ದಾರೆ ಎಂದು ವರದಿಯಾಗಿದೆ.
5 / 6
ಅತ್ತ ಕೇನ್ ವಿಲಿಯಮ್ಸನ್ ಕೂಡ ದೊಡ್ಡ ಮೊತ್ತಕ್ಕೆ ಬೇಡಿಕೆಯಿಟ್ಟಿದ್ದಾರೆ. ಹೀಗಾಗಿ ಇಬ್ಬರನ್ನು ಒಪ್ಪಿಸುವುದು ಇದೀಗ ಎಸ್ಆರ್ಹೆಚ್ ತಂಡಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ. ಒಂದು ವೇಳೆ ರಶೀದ್ ಖಾನ್ಗೆ ದೊಡ್ಡ ಮೊತ್ತ ದೊರೆಯದಿದ್ದರೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
6 / 6
ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ಡೇವಿಡ್ ವಾರ್ನರ್ ಕೂಡ ಹೊರಗುಳಿಯಲಿದ್ದು, ಹೀಗಾಗಿ ಮೆಗಾ ಹರಾಜಿನಲ್ಲಿ ವಾರ್ನರ್ ಕಾಣಿಸಿಕೊಳ್ಳಲಿದ್ದಾರೆ. ಇದೀಗ ರಶೀದ್ ಖಾನ್ ಕೂಡ ಹೊರಬಂದರೆ, ಎಸ್ಆರ್ಹೆಚ್ ಫ್ರಾಂಚೈಸಿ ಇಬ್ಬರು ಸ್ಟಾರ್ ಆಟಗಾರರನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಐಪಿಎಲ್ನಲ್ಲಿ ಅತೀ ಕಡಿಮೆ ರನ್ ನೀಡಿದ ಬೌಲರ್ ಎನಿಸಿಕೊಂಡಿರುವ ರಶೀದ್ ಖಾನ್ ಖರೀದಿಗೆ ಪ್ರಮುಖ ಫ್ರಾಂಚೈಸಿಗಳು ಭರ್ಜರಿ ಪೈಪೋಟಿ ನಡೆಸಲಿದೆ. ಇದರಿಂದ ಮತ್ತೆ ಅಫ್ಘಾನ್ ಸ್ಪಿನ್ನರ್ ಹೈದರಾಬಾದ್ ತಂಡಕ್ಕೆ ಸಿಗಲಿದ್ದಾರೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಎಸ್ಆರ್ಹೆಚ್ ತಂಡವು ರಶೀದ್ ಖಾನ್ ಅವರನ್ನು ರಿಟೈನ್ ಮಾಡಿಕೊಳ್ಳಲು ಬಯಸಿದ್ದು, ಆದರೆ ಐಪಿಎಲ್ನ ಯಶಸ್ವಿ ಸ್ಪಿನ್ನರ್ನ ಡಿಮ್ಯಾಂಡ್ ಸನ್ರೈಸರ್ಸ್ ಫ್ರಾಂಚೈಸಿಗೆ ಹೊಸ ಸವಾಲಾಗಿ ಪರಿಣಮಿಸಿದೆ.