Asia Cup 2022: ತೆಗೆದಿದ್ದು ಒಂದೇ ಒಂದು ವಿಕೆಟ್; ಆದರೂ ಏಷ್ಯಾಕಪ್​ನಲ್ಲಿ ಭಾರತದ ಪರ ದಾಖಲೆ ಬರೆದ ಜಡೇಜಾ..!

Updated By: ಪೃಥ್ವಿಶಂಕರ

Updated on: Sep 01, 2022 | 9:06 PM

Ravindra Jadeja: ಜಡೇಜಾ ಈಗ ಏಷ್ಯಾಕಪ್‌ನಲ್ಲಿ ಒಟ್ಟು 23 ವಿಕೆಟ್‌ಗಳನ್ನು ಪಡೆದಿದ್ದು, ಇದು ಭಾರತದ ಪರ ಒಬ್ಬ ಬೌಲರ್ ಪಡೆದಿರುವ ಗರಿಷ್ಠ ವಿಕೆಟ್​ಗಳಾಗಿವೆ.

1 / 5
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಕಳೆದ ಕೆಲ ಸಮಯದಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಬ್ಯಾಟಿಂಗ್‌ನಲ್ಲಿ ಜಡೇಜಾ ಅವರ ಪ್ರದರ್ಶನ ಹಾಗೇ ಉಳಿದಿದೆ. ಬೌಲಿಂಗ್‌ನಲ್ಲಿ ಅವರನ್ನು ಕೆಲವೊಮ್ಮೆ ಪ್ರಶ್ನಿಸಲಾಗಿದ್ದರೂ, ಏಷ್ಯಾಕಪ್ 2022 ರ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ, ಜಡೇಜಾ ಅತ್ಯುತ್ತಮ ಬೌಲಿಂಗ್‌ನೊಂದಿಗೆ ಲಯಕ್ಕೆ ಮರಳುವುದನ್ನು ಸೂಚಿಸಿದರು. ಇದರೊಂದಿಗೆ ಅವರ ಹೆಸರಲ್ಲಿ ದಾಖಲೆ ಕೂಡ ಮಾಡಿದ್ದಾರೆ.

2 / 5
ಹಾಂಕಾಂಗ್ ವಿರುದ್ಧದ ಎರಡನೇ ಪಂದ್ಯದಲ್ಲಿ ರವೀಂದ್ರ ಜಡೇಜಾ 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 1 ವಿಕೆಟ್ ಪಡೆದರು. ಜಡ್ಡು 35 ಎಸೆತಗಳಲ್ಲಿ 41 ರನ್ ಗಳಿಸಿದ ಬಾಬರ್ ಹಯಾತ್ ವಿಕೆಟ್ ಪಡೆದರು.

3 / 5
ಈ ವಿಕೆಟ್‌ನೊಂದಿಗೆ ಜಡೇಜಾ ಏಷ್ಯಾಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದರು. ಜಡೇಜಾ ಈಗ ಏಷ್ಯಾಕಪ್‌ನಲ್ಲಿ ಒಟ್ಟು 23 ವಿಕೆಟ್‌ಗಳನ್ನು ಪಡೆದಿದ್ದು, ಇದು ಭಾರತದ ಪರ ಒಬ್ಬ ಬೌಲರ್ ಪಡೆದಿರುವ ಗರಿಷ್ಠ ವಿಕೆಟ್​ಗಳಾಗಿವೆ.

4 / 5
ಜೊತೆಗೆ ಎಡಗೈ ಸ್ಪಿನ್ನರ್ ಜಡೇಜಾ ಭಾರತದ ಮಾಜಿ ಆಲ್‌ರೌಂಡರ್ ಮತ್ತು ಎಡಗೈ ವೇಗಿ ಇರ್ಫಾನ್ ಪಠಾಣ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಪಠಾಣ್ 22 ವಿಕೆಟ್‌ ಪಡೆದು ಭಾರತದ ಪರ ಏಷ್ಯಾಕಪ್​ನಲ್ಲಿ ಹೆಚ್ಚು ವಿಕೆಟ್​ ಪಡೆದ ಬೌಲರ್​ ಆಗಿದ್ದರು.

5 / 5
ಅಂದಹಾಗೆ, ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಶ್ರೀಲಂಕಾದ ಶ್ರೇಷ್ಠ ವೇಗದ ಬೌಲರ್ ಲಸಿತ್ ಮಾಲಿಂಗ ಹೆಸರಿನಲ್ಲಿದೆ. ಮಾಲಿಂಗ 15 ಇನ್ನಿಂಗ್ಸ್‌ಗಳಲ್ಲಿ 33 ವಿಕೆಟ್‌ಗಳನ್ನು ಕಬಳಿಸಿದ್ದಾರೆ.