Ravindra Jadeja: ಚೆನ್ನೈ ನಾಯಕತ್ವದಿಂದ ಕೆಳಗಿಳಿದಿದ್ದ ರವೀಂದ್ರ ಜಡೇಜಾ ಈಗ ಐಪಿಎಲ್​ನಿಂದಲೇ ಔಟ್..!

| Updated By: ಪೃಥ್ವಿಶಂಕರ

Updated on: May 11, 2022 | 3:38 PM

IPL 2022: ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ರವೀಂದ್ರ ಜಡೇಜಾ ಅವರ ಇಂಜುರಿಯ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುವ ಸಾಧ್ಯತೆಗಳಿಲ್ಲ.

1 / 5
ವರದಿಯ ಪ್ರಕಾರ, ರವೀಂದ್ರ ಜಡೇಜಾ ಐಪಿಎಲ್ 2022 ಅನ್ನು ಮಾತ್ರ ತೊರೆದಿಲ್ಲ. ಬದಲಿಗೆ, ಅವರು ಮುಂದಿನ ಸೀಸನ್​ನಲ್ಲಿ ಈ ತಂಡಕ್ಕಾಗಿ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ಕೂಡ ಸ್ಪಷ್ಟವಾಗಿಲ್ಲ. ಜಡೇಜಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 16 ಕೋಟಿ ರೂ.ಗೆ ಉಳಿಸಿಕೊಂಡಿತ್ತು.

2 / 5
ನಾಯಕತ್ವದ ಒತ್ತಡವನ್ನು ನಿಭಾಯಿಸಲು ಜಡೇಜಾಗೆ ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ. ಇದು ಜಡೇಜಾ ಅವರ ವೈಯಕ್ತಿಕ ಪ್ರದರ್ಶನದ ಮೇಲೂ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ವರದಿಯ ಪ್ರಕಾರ ಜಡೇಜಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ರೀತಿ ಜಡೇಜಾಗೆ ತೀವ್ರ ನೋವುಂಟು ಮಾಡಿದೆ ಎಂದು ವರದಿಯಾಗಿದೆ.

3 / 5
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ರವೀಂದ್ರ ಜಡೇಜಾ ಅವರ ಇಂಜುರಿಯ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಇದರಲ್ಲಿ ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುವ ಸಾಧ್ಯತೆಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಉಳಿದ ಪಂದ್ಯಗಳಲ್ಲಿ ಚೆನ್ನೈನ ಪ್ಲೇಯಿಂಗ್ ಇಲೆವೆನ್‌ನ ಭಾಗವಾಗದಿರುವ ಸಾಧ್ಯತೆಯಿದೆ.

4 / 5
ಐಪಿಎಲ್ 2022 ರವೀಂದ್ರ ಜಡೇಜಾಗೆ ಅಷ್ಟೊಂದು ಉತ್ತಮವಾಗಿಲ್ಲ. ಈ ಎಡಗೈ ಆಲ್​ರೌಂಡರ್​ಗೆ ಸೀಸನ್​ ಆರಂಭದಲ್ಲಿ ತಂಡದ ನಾಯಕತ್ವವಹಿಸಲಾಯಿತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಜಡೇಜಾ ನಾಯಕತ್ವದಲ್ಲಿ ತಮ್ಮ ಮೊದಲ ನಾಲ್ಕು ಪಂದ್ಯಗಳಲ್ಲಿ ಸೋಲಬೇಕಾಯಿತು. 8 ಪಂದ್ಯಗಳಲ್ಲಿ ನಾಯಕತ್ವದ ನಂತರ, ಜಡೇಜಾ ಋತುವಿನ ಮಧ್ಯದಲ್ಲಿ ನಾಯಕತ್ವವನ್ನು ತೊರೆದರು. ಅವರ ಸ್ಥಾನಕ್ಕೆ ಧೋನಿ ಮತ್ತೊಮ್ಮೆ ಚೆನ್ನೈ ತಂಡದ ನಾಯಕತ್ವ ವಹಿಸಿಕೊಂಡರು.

5 / 5
ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಪ್ರಕಾರ, ರವೀಂದ್ರ ಜಡೇಜಾ ನಾಯಕತ್ವವನ್ನು ಕಿತ್ತುಕೊಂಡಿದ್ದರಿಂದ ಕೋಪಗೊಂಡಿದ್ದಾರೆ ಎಂದು ತಿಳಿದುಬಂದಿದೆ. ವಾಸ್ತವವಾಗಿ ಜಡೇಜಾ ನಾಯಕತ್ವ ಮುಂದುವರೆಸಲು ಬಯಸಿದ್ದರು ಆದರೆ ಫ್ರಾಂಚೈಸಿಯ ಆಡಳಿತ ಮಂಡಳಿ ಅವರನ್ನು ನಾಯಕತ್ವದಿಂದ ತೆಗೆದುಹಾಕಿತು. ರವೀಂದ್ರ ಜಡೇಜಾ ಅವರು 8 ಪಂದ್ಯಗಳಿಗೆ ತಂಡದ ನಾಯಕರಾಗಿದ್ದರು. ಆದರೆ ತಂಡದ ಕಳಪೆ ಪ್ರದರ್ಶನದ ನಂತರ ಧೋನಿಗೆ ಮತ್ತೊಮ್ಮೆ ನಾಯಕತ್ವವಹಿಸಲಾಯಿತು.

Published On - 3:37 pm, Wed, 11 May 22