T20 World Cup 2021: ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದ್ದಾರೆ RCB ತಂಡದ 9 ಆಟಗಾರರು
TV9 Web | Updated By: ಝಾಹಿರ್ ಯೂಸುಫ್
Updated on:
Oct 16, 2021 | 10:31 PM
RCB 2021 Players in T20 World Cup 2021: ಈ ಬಾರಿಯ ಐಪಿಎಲ್ನಲ್ಲಿ (IPL 2021) ಆರ್ಸಿಬಿ ತಂಡದಲ್ಲಿದ್ದ 9 ಆಟಗಾರರು ಕೂಡ ತಮ್ಮ ತಂಡಗಳನ್ನು ಸೇರಿದ್ದಾರೆ. ಅಷ್ಟೇ ಅಲ್ಲದೆ ಈ ಆಟಗಾರರು ಆರ್ಸಿಬಿ ನಾಯಕರಾಗಿದ್ದ ವಿರಾಟ್ ಕೊಹ್ಲಿ ವಿರುದ್ದವೇ ಆಡಲಿದ್ದಾರೆ.
1 / 11
ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಟಿ20 ವಿಶ್ವಕಪ್ಗಾಗಿ ವೇದಿಕೆ ಸಿದ್ದವಾಗಿದೆ. ಅಕ್ಟೋಬರ್ 17 ರಿಂದ ಚುಟುಕು ಕದನ ಆರಂಭವಾಗಲಿದ್ದು, ಮೊದಲ ಸುತ್ತಿನಲ್ಲಿ 8 ತಂಡಗಳು ಸೂಪರ್ 12 ಅರ್ಹಗಾಗಿ ಕಾದಾಡಲಿದೆ. ಆ ಬಳಿಕ ಅಕ್ಟೋಬರ್ 23 ರಿಂದ ಸೂಪರ್ 12 ಪಂದ್ಯಗಳು ಶುರುವಾಗಲಿದೆ. ಈಗಾಗಲೇ ಎಲ್ಲಾ ತಂಡಗಳು ಯುಎಇಗೆ ಬಂದಿಳಿದಿದ್ದು, ಅದರಂತೆ ಅಭ್ಯಾಸವನ್ನು ಶುರು ಮಾಡಿದೆ.
2 / 11
ಇತ್ತ ಈ ಬಾರಿಯ ಐಪಿಎಲ್ನಲ್ಲಿ (IPL 2021) ಆರ್ಸಿಬಿ ತಂಡದಲ್ಲಿದ್ದ 9 ಆಟಗಾರರು ಕೂಡ ತಮ್ಮ ತಂಡಗಳನ್ನು ಸೇರಿದ್ದಾರೆ. ಅಷ್ಟೇ ಅಲ್ಲದೆ ಈ ಆಟಗಾರರು ಆರ್ಸಿಬಿ ನಾಯಕರಾಗಿದ್ದ ವಿರಾಟ್ ಕೊಹ್ಲಿ ವಿರುದ್ದವೇ ಆಡಲಿದ್ದಾರೆ. ಅಂದರೆ ಒಂದೆರೆಡು ದಿನಗಳಲ್ಲೇ ಒಂದೇ ತಂಡದಲ್ಲಿದ್ದ ಆಟಗಾರರು ಪರಸ್ಪರ ಎದುರಾಳಿಗಳಾಗುತ್ತಿರುವುದು ವಿಶೇಷ. ಹಾಗಿದ್ರೆ ಆರ್ಸಿಬಿ ತಂಡದಲ್ಲಿದ್ದ ಯಾರೆಲ್ಲಾ ಈ ಸಲ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ನೋಡೋಣ.
3 / 11
ವಿರಾಟ್ ಕೊಹ್ಲಿ: ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇದು ಕೊಹ್ಲಿ ಸಾರಥ್ಯದಲ್ಲಿ ನಡೆಯಲಿರುವ ಕೊನೆಯ ಟಿ20 ವಿಶ್ವಕಪ್ ಎಂಬುದು ವಿಶೇಷ. ಅಂದರೆ ಈ ಬಾರಿಯ ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಟೀಮ್ ಇಂಡಿಯಾ ಟಿ20 ತಂಡಕ್ಕೆ ರಾಜೀನಾಮೆ ನೀಡಲಿದ್ದಾರೆ.
4 / 11
ಕೈಲ್ ಜೇಮಿಸನ್: ಆರ್ಸಿಬಿ ತಂಡದಲ್ಲಿದ್ದ ವೇಗಿ ಕೈಲ್ ಜೇಮಿಸನ್ ನ್ಯೂಜಿಲೆಂಡ್ ಪರ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದ್ದಾರೆ.
5 / 11
ಗ್ಲೆನ್ ಮ್ಯಾಕ್ಸ್ವೆಲ್: ಆರ್ಸಿಬಿ ಪರ ಅಬ್ಬರಿಸಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಆಗಿ ಟಿ20 ವಿಶ್ವಕಪ್ ಆಡಲಿದ್ದಾರೆ.
6 / 11
ದುಷ್ಮಂತ ಚಮೀರಾ: ಶ್ರೀಲಂಕಾ ತಂಡವು ಅರ್ಹತಾ ಸುತ್ತಿನಲ್ಲಿದ್ದು, ಈ ತಂಡದಲ್ಲಿ ಲಂಕಾ ಪರ ವೇಗದ ಬೌಲರ್ ಆಗಿ ದುಷ್ಮಂತ ಚಮೀರಾ ಕಾಣಿಸಿಕೊಳ್ಳಲಿದ್ದಾರೆ.
7 / 11
ವನಿಂದು ಹಸರಂಗ: ಶ್ರೀಲಂಕಾ ಸ್ಪಿನ್ನರ್ ವನಿಂದು ಹಸರಂಗ ಕೂಡ ಶ್ರೀಲಂಕಾ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
8 / 11
ಡೇನಿಯಲ್ ಕ್ರಿಶ್ಚಿಯನ್: ಆಸ್ಟ್ರೇಲಿಯಾ ಟಿ20 ತಂಡದಲ್ಲಿ ಹಿರಿಯ ಆಲ್ರೌಂಡರ್ ಡೇನಿಯಲ್ ಕ್ರಿಶ್ಚಿಯನ್ ಸ್ಥಾನ ಪಡೆದಿದ್ದಾರೆ. ಇವರಲ್ಲದೆ ಈ ಬಾರಿಯ ಐಪಿಎಲ್ನಲ್ಲಿ (IPL 2021) ಆರ್ಸಿಬಿ ಪರ ಆಡಿದ ಕೆಲ ಆಟಗಾರರು ಕೂಡ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
9 / 11
ಡೇನಿಯಲ್ ಸ್ಯಾಮ್ಸ್: ಐಪಿಎಲ್ನ ಮೊದಲಾರ್ಧದಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಡೇನಿಯಲ್ ಸ್ಯಾಮ್ಸ್ ಕೂಡ ಆಸ್ಟ್ರೇಲಿಯಾ ಟಿ20 ತಂಡದಲ್ಲಿದ್ದಾರೆ.
10 / 11
ಕೇನ್ ರಿಚರ್ಡ್ಸನ್: ಮೊದಲಾರ್ಧದ ಐಪಿಎಲ್ ವೇಳೆ ಆರ್ಸಿಬಿ ತಂಡದಲ್ಲಿದ್ದ ಕೇನ್ ರಿಚರ್ಡ್ಸನ್ ಸಹ ಈ ಬಾರಿ ಟಿ20 ವಿಶ್ವಕಪ್ ಆಡಲಿದ್ದಾರೆ.
11 / 11
ಆ್ಯಡಂ ಝಂಪಾ: ಐಪಿಎಲ್ನ ಮೊದಲಾರ್ಧದಲ್ಲಿ ಆರ್ಸಿಬಿ ಒಂದು ಪಂದ್ಯವಾಡಿದ್ದ ಆಡ್ಯಂ ಝಂಪಾ ಆಸ್ಟ್ರೇಲಿಯಾ ತಂಡದಲ್ಲಿದ್ದು, ಪ್ಲೇಯಿಂಗ್ 11ನಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.