ಸೋಮವಾರ (ಮಾರ್ಚ್ 25) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024 ರ ಆರನೇ ಪಂದ್ಯದಲ್ಲಿ ಆರ್ಸಿಬಿ ಪಂಜಾಬ್ ವಿರುದ್ಧ 4 ವಿಕೆಟ್‌ಗಳಿಂದ ಜಯಗಳಿಸಿತು. ವಿರಾಟ್ ಕೊಹ್ಲಿ 77 ರನ್ ಮತ್ತು ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ 28 ರನ್ ಸಿಡಿಸಿ ಆರ್ಸಿಬಿ 19.2 ಓವರ್‌ಗಳಲ್ಲಿ ಜಯ ಸಾಧಿಸುವಂತೆ ಮಾಡಿದರು.
ರೋಚಕ ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್, ಆಟಗಾರರ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ. ಮುಖ್ಯವಾಗಿ ತಂಡದ ಗೆಲುವಿಗೆ ಕಾರಣರಾದ ದಿನೇಶ್ ಕಾರ್ತಿಕ್ ಮತ್ತು ವಿರಾಟ್ ಕೊಹ್ಲಿ ಆಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ನೀವು ಶಾಂತವಾಗಿದ್ದೀರಾ? ಎಂದು ಕೇಳಿದ ಪ್ರಶ್ನೆಗೆ ಮೊದಲಿಗೆ ಉತ್ತರಿಸಿದ ಫಾಫ್ ಡುಪ್ಲೆಸಿಸ್, ಹೊರಗಿನಿಂದ ಶಾಂತವಾಗಿದ್ದೇನೆ.. ಆದರೆ, ಒಳಗಿನಿಂದ ಅಲ್ಲ ಎಂದು ಹೇಳಿದರು. ಈ ಪಿಚ್ ಕಠಿಣವಾಗಿತ್ತು. ಆದರೆ, ನಮ್ಮ ಆಟಗಾರರು ಅದ್ಭುತ ಪ್ರದರ್ಶನ ತೋರಿದರು. ಮುಖ್ಯವಾಗಿ ಹಳೆಯ ಕುದುರೆ ಡಿಕೆ. ಈ ಪಂದ್ಯವನ್ನು ನಾವು ಕಳೆದುಕೊಂಡೆವು ಎಂದು ಎಲ್ಲೂ ನನಗೆ ಅನಿಸಲಿಲ್ಲ ಎಂದು ಹೇಳಿದ್ದಾರೆ.
ಈಗ ಹೊಸ ನಿಯಮದೊಂದಿಗೆ, ಹೆಚ್ಚುವರಿ ಬ್ಯಾಟರ್ ಆಯ್ಕೆ ಇದೆ. ಅದರ ಪ್ರಕಾರ ಇಂಪ್ಯಾಲ್ಟ್ ಪ್ಲೇಯರ್ ಆಗಿ ಮಹಿಪಾಲ್ ಆಡುತ್ತಾರೆ ಎಂದು ನಮಗೆ ತಿಳಿದಿತ್ತು. ಅವರಲ್ಲಿ ಸಾಕಷ್ಟು ಶಕ್ತಿ ಇದೆ. 2 ಓವರ್‌ಗಳಲ್ಲಿ 30 ಕೂಡ ಬಾರಿಸುತ್ತಾರೆ ಎಂಬ ನಂಬಿಕೆ ಇತ್ತು. ದಿನೇಶ್ ಕಾರ್ತಿಕ್ಗೆ ನಿಜವಾಗಿಯೂ ಸಂತೋಷವಾಗಿದೆ ಎಂದು ಫಾಫ್ ಹೇಳಿದ್ದಾರೆ.
ದಿನೇಶ್ ಕಾರ್ತಿಕ್ ಅವರ ಅನುಭವ ನಮಗೆ ಬೇಕು. ಹರಾಜಿನ ವೇಳೆ ಕೂಡ ಎಲ್ಲ ಯೋಚಿಸಿ ನಿರ್ಧಾರ ತೆಗೆದುಕೊಂಡಿದ್ದೇವೆ. ಇದೊಂದು ವಿಶಿಷ್ಟ ಮೈದಾನ. ಪಿಚ್ ಸ್ವಲ್ಪ ವಿಭಿನ್ನವಾಗಿತ್ತು. ವೇಗದ ಮತ್ತು ಬೌನ್ಸಿ ಪಿಚ್ ಆಗಿರಲ್ಲ ಮತ್ತು ಫ್ಲಾಟ್ ಪಿಚ್ ಕೂಡ ಆಗಿರಲಿಲ್ಲ. ಹೀಗಿದ್ದರೂ ವಿರಾಟ್ ಅವರು ತಮ್ಮ ಇನ್ನಿಂಗ್ಸ್ ಅನ್ನು ಟೆಂಪೋ ಮಾಡಿದ ರೀತಿ ಅದ್ಭುತವಾಗಿತ್ತು - ಫಾಫ್ ಡುಪ್ಲೆಸಿಸ್.
ಇಲ್ಲಿ ನೀವು ಲೈನ್ ಮೂಲಕ ಹೊಡೆಯಬಹುದಾದ ಪಿಚ್ ಆಗಿರಲಿಲ್ಲ. ಆದರೆ, ವಿರಾಟ್ ಆಟವನ್ನು ನೋಡಲು ಸಂತೋಷವಾಗುತ್ತಿತ್ತು. ಕೊಹ್ಲಿ ಯಾವಾಗಲೂ ನಗುತ್ತಾ ಆಟವನ್ನು ಆನಂದಿಸುತ್ತಾನೆ. ಈಗಲೂ ಕ್ರಿಕೆಟ್ ಆಡುವ ಉತ್ಸಾಹ ಅವರಲ್ಲಿದೆ. ಅವರು ಕೊಂಚ ವಿರಾಮದ ಬಳಿಕ ಕ್ರಿಕೆಟ್ ಮರಳಿದ್ದಾರೆ. ಇದು ಬಹಳ ಮುಖ್ಯವಾಗಿದೆ ಎಂಬುದು ಫಾಫ್ ಮಾತು.