IPL 2022: ತಂಡದ ನಾಯಕ ಯಾರೆಂದು ಸುಳಿವು ನೀಡಿದ RCB

| Updated By: ಝಾಹಿರ್ ಯೂಸುಫ್

Updated on: Jan 27, 2022 | 4:46 PM

IPL 2022 RCB Captain: 2008 ರಿಂದ ಆರ್​ಸಿಬಿ ತಂಡದಲ್ಲಿರುವ ವಿರಾಟ್ ಕೊಹ್ಲಿ, 2013 ರಲ್ಲಿ ನಾಯಕರಾಗಿ ಆಯ್ಕೆಯಾಗಿದ್ದರು. ಆ ಬಳಿಕ ಒಟ್ಟು 140 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ ತಂಡಕ್ಕೆ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದರು.

1 / 7
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 15ನ ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ದತೆಯಲ್ಲಿದೆ. ಅದರಲ್ಲೂ 3 ಫ್ರಾಂಚೈಸಿಗಳು  ಹೊಸ ನಾಯಕನ ಹುಡುಕಾಟದಲ್ಲಿದೆ. ಅದರಂತೆ ಕೆಕೆಆರ್​, ಪಂಜಾಬ್ ಕಿಂಗ್ಸ್​, ಆರ್​ಸಿಬಿ ಫ್ರಾಂಚೈಸಿಗಳು ಹೊಸ ಕ್ಯಾಪ್ಟನ್​ ಅನ್ನು ಆಯ್ಕೆ ಮಾಡಬೇಕಿದೆ.

2 / 7
ಈ ಬಾರಿಯ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಆರ್​ಸಿಬಿ ತಂಡದ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ ನೀಡಿದ್ದರು. ಕೆಲಸದ ಒತ್ತಡ ಹೆಚ್ಚಾಗಿರುವ ಕಾರಣ ನಾಯಕನಾಗಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಹೀಗಾಗಿಯೇ ಆರ್​ಸಿಬಿ ತಂಡದ ಹೊಸ ನಾಯಕನ ವಿಚಾರ ಚರ್ಚೆಯಲ್ಲಿದೆ.

3 / 7
 ಆದರೆ ಇದೀಗ ಆರ್​ಸಿಬಿ ತಂಡದ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗುವ ಸಾಧ್ಯತೆಯಿದೆ. ಏಕೆಂದರೆ ಆರ್​ಸಿಬಿ ಇದೀಗ ವಿರಾಟ್ ಕೊಹ್ಲಿ ಅವರನ್ನೇ ಮತ್ತೊಮ್ಮೆ ನಾಯಕನಾಗಿ ಘೋಷಿಸುವ ಸಾಧ್ಯತೆಯಿದೆ.

4 / 7
ಈ ಬಗ್ಗೆ ಮಾತನಾಡಿರುವ  ಆರ್​ಸಿಬಿ ಅಧ್ಯಕ್ಷ ಪ್ರಥಮೇಶ್ ಮಿಶ್ರಾ, ಕೊಹ್ಲಿ ಒಪ್ಪಿದರೆ ಅವರಿಗೆ ಮತ್ತೊಮ್ಮೆ ನಾಯಕತ್ವ ನೀಡಲು ಸಿದ್ದರಿದ್ದೇವೆ. ಅವರು ಒಪ್ಪದಿದ್ದರೆ ನಾವು ಮೆಗಾ ಹರಾಜಿನಲ್ಲಿ ಸೂಕ್ತ ನಾಯಕನ ಖರೀದಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ವಿರಾಟ್ ಕೊಹ್ಲಿ ಆರ್​ಸಿಬಿ ತಂಡದ ನಾಯಕರಾಗಿ ಕಾಣಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ.

5 / 7
ಏಕೆಂದೆರೆ ಈ ಹಿಂದೆ ಕೆಲಸದ ಹೊರೆಯಿಂದಾಗಿ ವಿರಾಟ್ ಕೊಹ್ಲಿ ಆರ್​ಸಿಬಿ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಆದರೆ ಇದೀಗ ಕೊಹ್ಲಿ ಟೀಮ್ ಇಂಡಿಯಾ ನಾಯಕನ ಜವಾಬ್ದಾರಿಯಿಂದ ಸಂಪೂರ್ಣವಾಗಿ ಕೆಳಗಿಳಿದಿದ್ದಾರೆ. ಹೀಗಾಗಿ ಆರ್​ಸಿಬಿ ಫ್ರಾಂಚೈಸಿ ಮತ್ತೊಮ್ಮೆ ಕೊಹ್ಲಿಗೆ ನಾಯಕನ ಪಟ್ಟ ನೀಡುವ ಸಾಧ್ಯತೆ ಹೆಚ್ಚಿದೆ.

6 / 7
2008 ರಿಂದ ಆರ್​ಸಿಬಿ ತಂಡದಲ್ಲಿರುವ ವಿರಾಟ್ ಕೊಹ್ಲಿ, 2013 ರಲ್ಲಿ ನಾಯಕರಾಗಿ ಆಯ್ಕೆಯಾಗಿದ್ದರು. ಆ ಬಳಿಕ ಒಟ್ಟು 140 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ ತಂಡಕ್ಕೆ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದರು. ಇನ್ನು 70 ಪಂದ್ಯಗಳಲ್ಲಿ ಸೋಲುಗಳನ್ನ ಕಾಣಬೇಕಾಯಿತು. ಅಷ್ಟೇ ಅಲ್ಲದೆ 2016 ರಲ್ಲಿ ತಂಡವನ್ನು ಫೈನಲ್​ಗೆ ತಲುಪಿಸಿದರೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ.

7 / 7
ಕಳೆದ ಸೀಸನ್ ಐಪಿಎಲ್​ ಮುಕ್ತಾಯದ ಬೆನ್ನಲ್ಲೇ ಕೊಹ್ಲಿ ಆರ್​ಸಿಬಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮತ್ತೊಮ್ಮೆ ಕೊಹ್ಲಿಗೆ ಕ್ಯಾಪ್ಟನ್ಸಿ ಆಫರ್ ನೀಡಲಾಗಿದೆ. ಈ ಆಫರ್​ ಅನ್ನು ಕಿಂಗ್ ಕೊಹ್ಲಿ ಒಪ್ಪಿಕೊಳ್ಳಲಿದ್ದಾರಾ ಎಂಬುದೇ ಈಗ ಕುತೂಹಲ.