IPL 2025: ಆರ್​ಸಿಬಿಯ ಹೊಸ ಆಪತ್ಭಾಂಧವ ಜೋಶ್ ಹೇಜಲ್​ವುಡ್ ಎಷ್ಟು ಕೋಟಿಯ ಒಡೆಯ ಗೊತ್ತಾ?

Updated on: May 30, 2025 | 7:51 PM

Josh Hazelwood Net Worth: ಆರ್‌ಸಿಬಿ ತಂಡ ಸೇರಿದ ಬಳಿಕ ಜೋಶ್ ಹೇಜಲ್‌ವುಡ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ತಂಡದ ಚಿತ್ರಣವೇ ಬದಲಾಗಿದೆ. 11 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಪಡೆದ ಅವರು 12.5 ಕೋಟಿ ರೂ.ಗಳಿಗೆ ಆರ್​ಸಿಬಿ ಸೇರಿಕೊಂಡಿದ್ದರು. ಐಪಿಎಲ್‌ನಿಂದ 32.5 ಕೋಟಿ ರೂ. ಗಳಿಸಿರುವ ಹೇಜಲ್‌ವುಡ್ ಅವರ ನಿವ್ವಳ ಮೌಲ್ಯ 80 ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

1 / 6
ಆಸ್ಟ್ರೇಲಿಯಾ ವೇಗಿ ಜೋಶ್ ಹೇಜಲ್​ವುಡ್ ಆರ್​ಸಿಬಿ ತಂಡವನ್ನು ಸೇರಿಕೊಂಡ ಬಳಿಕ ತಂಡದ ಚಿತ್ರಣವೇ ಬದಲಾಗಿದೆ. ಹೇಜಲ್​ವುಡ್ ಇಲ್ಲದೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ದುಬಾರಿಯಾಗಿದ್ದ ಆರ್​ಸಿಬಿ ಬೌಲಿಂಗ್ ವಿಭಾಗ, ಹೇಜಲ್​ವುಡ್ ತಂಡವನ್ನು ಸೇರಿಕೊಂಡ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಮಾರಕ ಪ್ರದರ್ಶನ ನೀಡಿ ಬಲಿಷ್ಠ ತಂಡವನ್ನು 101 ರನ್​ಗಳಿಗೆ ಆಲೌಟ್ ಮಾಡಿತ್ತು.

ಆಸ್ಟ್ರೇಲಿಯಾ ವೇಗಿ ಜೋಶ್ ಹೇಜಲ್​ವುಡ್ ಆರ್​ಸಿಬಿ ತಂಡವನ್ನು ಸೇರಿಕೊಂಡ ಬಳಿಕ ತಂಡದ ಚಿತ್ರಣವೇ ಬದಲಾಗಿದೆ. ಹೇಜಲ್​ವುಡ್ ಇಲ್ಲದೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ದುಬಾರಿಯಾಗಿದ್ದ ಆರ್​ಸಿಬಿ ಬೌಲಿಂಗ್ ವಿಭಾಗ, ಹೇಜಲ್​ವುಡ್ ತಂಡವನ್ನು ಸೇರಿಕೊಂಡ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಮಾರಕ ಪ್ರದರ್ಶನ ನೀಡಿ ಬಲಿಷ್ಠ ತಂಡವನ್ನು 101 ರನ್​ಗಳಿಗೆ ಆಲೌಟ್ ಮಾಡಿತ್ತು.

2 / 6

ಹೀಗಾಗಿಯೇ ಆರ್‌ಸಿಬಿ ವೇಗಿ ಜೋಶ್ ಹೇಜಲ್‌ವುಡ್ ಅವರನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತಿದೆ. ಈ ವೇಗದ ಬೌಲರ್ ಆರ್‌ಸಿಬಿ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೇಜಲ್‌ವುಡ್ ಇದುವರೆಗೆ 11 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

3 / 6

ಈ ಬಾರಿಯ ಮೆಗಾ ಹರಾಜಿನಲ್ಲಿ ಹೇಜಲ್‌ವುಡ್‌ ಅವರನ್ನು ಖರೀದಿಸಲು ಸಾಕಷ್ಟು ತಂಡಗಳ ನಡುವೆ ಪೈಪೋಟಿ ಇತ್ತು. ಹೀಗಾಗಿ ಹೇಜಲ್‌ವುಡ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಯಿತು. ಅಂತಿಮವಾಗಿ ಈ ಬಲಗೈ ವೇಗದ ಬೌಲರ್‌ನನ್ನು ಆರ್​ಸಿಬಿ 12.5 ಕೋಟಿ ರೂ.ಗೆ ಖರೀದಿಸಿತು.

4 / 6

ಐಪಿಎಲ್‌ನಲ್ಲಿ ವರ್ಷಗಳಿಂದ ಆಡುತ್ತಿರುವ ಹೇಜಲ್‌ವುಡ್​ಗೆ ಈ ಬಾರಿಯ ಮೆಗಾ ಹರಾಜಿನಲ್ಲಿ ಭಾರಿ ಮೊತ್ತವನ್ನೇ ನೀಡಲಾಯಿತು. ಹಾಗಿದ್ದರೆ, ಐಪಿಎಲ್‌ನಿಂದ ಹೇಜಲ್‌ವುಡ್ ಎಷ್ಟು ಸಂಪಾಧನೆ ಮಾಡಿದ್ದಾರೆ ಎಂಬುದನ್ನು ನೋಡುವುದಾದರೆ.. ಈ ಆಸೀಸ್ ವೇಗಿ ಒಟ್ಟು 32 ಕೋಟಿ 50 ಲಕ್ಷ ರೂ.ಗಳನ್ನು ಗಳಿಸಿದ್ದಾರೆ.

5 / 6

ವಾಸ್ತವವಾಗಿ ಹೇಜಲ್‌ವುಡ್ ಐಪಿಎಲ್​ನಿಂದ ಇದಕ್ಕೂ ಅಧಿಕ ಮೊತ್ತವನ್ನು ಸಂಪಾಧಿಸಬಹುದಾಗಿತ್ತು. ಆದರೆ ಅವರು ಕಳೆದ ಬಾರಿಯ ಐಪಿಎಲ್ ಆಡಲು ಸಾಧ್ಯವಾಗಲಿಲ್ಲ. ಇನ್ನು ಹೇಜಲ್‌ವುಡ್ ಎಷ್ಟು ಕೋಟಿಗಳ ಒಡೆಯ ಎಂಬುದನ್ನು ನೋಡುವುದಾದರೆ. ಮಾಧ್ಯಮ ವರದಿಗಳ ಪ್ರಕಾರ, ಹೇಜಲ್‌ವುಡ್ ಅವರ ನಿವ್ವಳ ಮೌಲ್ಯ 80 ಕೋಟಿ ರೂ.ಗಳಿಗಿಂತ ಹೆಚ್ಚು.

6 / 6

ಹೇಜಲ್‌ವುಡ್ ಅಪಾರ ಪ್ರಮಾಣದ ಆಸ್ತಿಯನ್ನು ಹೊಂದಿದ್ದಾರೆ. ಅವರ ಮನೆ ಸಿಡ್ನಿಯ ಹಂಟರ್ಸ್ ಹಿಲ್‌ನಲ್ಲಿದ್ದು, ಅಲ್ಲಿ ಅವರು ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಹೇಜಲ್‌ವುಡ್ ಈ ಮನೆಯನ್ನು 2016 ರಲ್ಲಿ 29 ಕೋಟಿ ರೂ.ಗಳಿಗೆ ಖರೀದಿಸಿದ್ದರು.

Loading...
Unable to load recommendations.
Follow Us