6 ಭರ್ಜರಿ ಸಿಕ್ಸ್, 14 ಫೋರ್​: ಸ್ಪೋಟಕ ಸೆಂಚುರಿ ಸಿಡಿಸಿದ RCB ಆಟಗಾರ

| Updated By: ಝಾಹಿರ್ ಯೂಸುಫ್

Updated on: Feb 29, 2024 | 10:57 AM

IPL 2024: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇದಕ್ಕೂ ಮುನ್ನ ಆರ್​ಸಿಬಿ ತಂಡದ ಆಟಗಾರರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವುದು ಶುಭ ಸೂಚನೆ ಎನ್ನಬಹುದು.

1 / 5
ಮುಂಬೈನಲ್ಲಿ ನಡೆಯುತ್ತಿರುವ ಡಿವೈ ಪಾಟೀಲ್ ಟಿ20 ಕಪ್ ಟೂರ್ನಿಯಲ್ಲಿ ಯುವ ಎಡಗೈ ದಾಂಡಿಗ ಅನೂಜ್ ರಾವತ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಬ್ಯಾಂಕ್ ಆಫ್ ಬರೋಡಾ ವಿರುದ್ಧದ ಈ ಪಂದ್ಯದಲ್ಲಿ ಇನ್ಕಮ್​ ಟ್ಯಾಕ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು.

2 / 5
ಅದರಂತೆ ಆರಂಭಿಕನಾಗಿ ಕಣಕ್ಕಿಳಿದ ಅನೂಜ್ ರಾವತ್ ಹಾಗೂ ಅಭಿಷೇಕ್ ದಾಸ್ (31) ಇನ್ಕಮ್​ ಟ್ಯಾಕ್ಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಅದರಲ್ಲೂ ಸ್ಪೋಟಕ ಬ್ಯಾಟಿಂಗ್​ನೊಂದಿಗೆ ಅಬ್ಬರಿಸಿದ ರಾವತ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು.

3 / 5
ಈ ಮೂಲಕ 57 ಎಸೆತಗಳನ್ನು ಎದುರಿಸಿದ ಅನೂಜ್ ರಾವತ್ 6 ಭರ್ಜರಿ ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ ಅಜೇಯ 116 ರನ್ ಸಿಡಿಸಿದರು. ಅನೂಜ್ ಅವರ ಈ ಭರ್ಜರಿ ಶತಕದ ನೆರವಿನಿಂದ ಇನ್ಕಮ್ ಟ್ಯಾಕ್ಸ್ 20 ಓವರ್​ಗಳಲ್ಲಿ​ 4 ವಿಕೆಟ್ ನಷ್ಟಕ್ಕೆ 238 ರನ್​ ಕಲೆಹಾಕಿತು.

4 / 5
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಬ್ಯಾಂಕ್ ಆಫ್ ಬರೋಡಾ ತಂಡದ ಪರ ಕನ್ನಡಿಗ ರೋಹನ್ ಕದಮ್ 45 ರನ್ ಬಾರಿಸಿದರು. ಇದಾಗ್ಯೂ ಇತರೆ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಂತಿಮವಾಗಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್​ಗಳಿಸುವ ಮೂಲಕ 40 ರನ್​ಗಳಿಂದ ಸೋಲೊಪ್ಪಿಕೊಂಡಿತು.

5 / 5
ಅಂದಹಾಗೆ ಅನೂಜ್ ರಾವತ್ ಕಳೆದ ಎರಡು ಸೀಸನ್​ಗಳಿಂದ ಆರ್​ಸಿಬಿ ಪರ ಕಣಕ್ಕಿಳಿಯುತ್ತಿದ್ದಾರೆ. RCB ಪರ 17 ಪಂದ್ಯಗಳನ್ನಾಡಿರುವ ರಾವತ್ ಒಟ್ಟು 220 ರನ್ ಕಲೆಹಾಕಿದ್ದಾರೆ. ಇದೀಗ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಯುವ ಎಡಗೈ ದಾಂಡಿಗ ಈ ಬಾರಿ ಕೂಡ ಆರ್​ಸಿಬಿ ಪರ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ.