CSK ಹೆಸರಿಗೆ ವಿಶ್ವ ದಾಖಲೆ… RCB ಪಾಲಿಗೆ ಹೀನಾಯ ದಾಖಲೆ

Updated on: Apr 06, 2026 | 2:09 PM

Royal Challengers Bengaluru vs Chennai Super Kings: ಐಪಿಎಲ್​ನ 11ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 250 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 207 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಆರ್​​ಸಿಬಿ 43 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಸೋಲಿನ ಹೊರತಾಗಿಯೂ ಸಿಎಸ್​ಕೆ ಭರ್ಜರಿ ವಿಶ್ವ ದಾಖಲೆ ನಿರ್ಮಿಸಿದೆ.

1 / 5
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 11ನೇ ಪಂದ್ಯದಲ್ಲಿ ಬರೋಬ್ಬರಿ 30 ಸಿಕ್ಸರ್​ಗಳು ಮೂಡಿಬಂದಿವೆ. ಈ ಮೂವತ್ತು ಸಿಕ್ಸರ್​ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 19 ಸಿಕ್ಸ್ ಬಾರಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ (CSK) ಕೇವಲ 11 ಸಿಕ್ಸ್ ಸಿಡಿಸಿದ್ದರು. ಇದಾಗ್ಯೂ ಸಿಎಸ್​ಕೆ ತಂಡದ ಹೆಸರಿಗೆ ವಿಶೇಷ ವಿಶ್ವ ದಾಖಲೆ ಸೇರ್ಪಡೆಯಾಗಿದೆ.

2 / 5
ಹೌದು, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್​ವೊಂದರಲ್ಲಿ 9 ಬ್ಯಾಟರ್​ಗಳು ಸಿಕ್ಸ್​ ಸಿಡಿಸಿದ ವಿಶ್ವ ದಾಖಲೆಯೊಂದನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನದಾಗಿಸಿಕೊಂಡಿದೆ. ಅಂದರೆ ಆರ್​ಸಿಬಿ ವಿರುದ್ಧ ಸಿಎಸ್​ಕೆ ತಂಡದ 9 ಬ್ಯಾಟರ್​ಗಳು ಸಿಕ್ಸ್ ಬಾರಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಯಾವುದೇ ತಂಡಕ್ಕೂ ಸಾಧ್ಯವಾಗದ ಅಪರೂಪದ ದಾಖಲೆಯೊಂದನ್ನು ಚೆನ್ನೈ ಸೂಪರ್ ಕಿಂಗ್ಸ್ ನಿರ್ಮಿಸಿದೆ.

3 / 5
ಚೆನ್ನೈ ಸೂಪರ್ ಕಿಂಗ್ಸ್​ ಪರ ಸಿಕ್ಸರ್ ಬಾರಿಸಿದವರು: ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸರ್ಫರಾಝ್ ಖಾನ್, ಕಾರ್ತಿಕ್ ಶರ್ಮಾ, ಶಿವಂ ದುಬೆ, ಜೇಮೀ ಓವರ್ಟನ್, ಪ್ರಶಾಂತ್ ವೀರ್, ನೂರ್ ಅಹ್ಮದ್ ಮತ್ತು ಅಂಶುಲ್ ಕಾಂಬೋಜ್. ಇನ್ನು ಸಿಕ್ಸ್ ಬಾರಿಸದೇ ಇದ್ದ ಇಬ್ಬರೆಂದರೆ ಆಯುಷ್ ಮ್ಹಾತ್ರೆ ಹಾಗೂ ಮ್ಯಾಟ್ ಹೆನ್ರಿ.

4 / 5
ಇತ್ತ ಟಿ20 ಕ್ರಿಕೆಟ್​ನಲ್ಲಿ ಪಂದ್ಯವೊಂದರಲ್ಲಿ 9 ಬ್ಯಾಟರ್​ಗಳಿಂದ ಸಿಕ್ಸ್ ಹೊಡೆಸಿಕೊಂಡ ಮೊದಲ ತಂಡವೆಂಬ ಹೀನಾಯ ದಾಖಲೆಯೊಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದೆ. ಅಂದರೆ ಆರ್​ಸಿಬಿಯನ್ನು ಹೊರತುಪಡಿಸಿ ಯಾವುದೇ ತಂಡವು ಇನಿಂಗ್ಸ್​ವೊಂದರಲ್ಲಿ 9 ಬ್ಯಾಟರ್​ಗಳಿಂದ ಸಿಕ್ಸ್ ಹೊಡೆಸಿಕೊಂಡಿರಲಿಲ್ಲ.

5 / 5
ಈ ಸಿಕ್ಸರ್​ಗಳ ದಾಖಲೆಯ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಪಂದ್ಯದಲ್ಲಿ ಸೋಲನುಭವಿಸಿದೆ. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್​ಗಳಲ್ಲಿ 250 ರನ್ ಕಲೆಹಾಕಿದರೆ, ಸಿಎಸ್​ಕೆ ತಂಡವು 19.4 ಓವರ್​ಗಳಲ್ಲಿ 207 ರನ್​ಗಳಿ ಆಲೌಟ್ ಆಯಿತು. ಈ ಮೂಲಕ ಆರ್​ಸಿಬಿ ತಂಡವು 43 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Follow Us