- Kannada News Photo gallery Cricket photos RCB vs DC IPL 2023 High voltage battle at Chinnaswamy stadium RCB master plan to escape hat trick defeat
RCB vs DC: ಚಿನ್ನಸ್ವಾಮಿಯಲ್ಲಿ ಹೈವೋಲ್ಟೇಜ್ ಕದನ: ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ಆರ್ಸಿಬಿ ಮಾಸ್ಟರ್ ಪ್ಲಾನ್
Bangalore vs Delhi, IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಆಡಿದ ಮೂರು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿ ಉಳಿದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದೀಗ ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ಆರ್ಸಿಬಿ ರಣತಂತ್ರ ರೂಪಿಸುತ್ತಿದೆ.
Updated on:Apr 15, 2023 | 8:56 AM

ಐಪಿಎಲ್ 2023 ರಲ್ಲಿಂದು ಎರಡು ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುರುವಾಗಲಿರುವ ಮೊದಲ ಮ್ಯಾಚ್ನಲ್ಲಿ ಫಾಫ್ ಡುಪ್ಲೆಸಿಸ್ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ.

ಈಗಾಗಲೇ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಆರ್ಸಿಬಿ ಆಟಗಾರರು ಚಿನ್ನಸ್ವಾಮಿಯಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ನೆಟ್ನಲ್ಲಿ ಬ್ಯಾಟಿಂಗ್ - ಬೌಲಿಂಗ್ ಪ್ರ್ಯಾಕ್ಸೀಟ್ ಮಾಡುತ್ತಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಆಡಿದ ಮೂರು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿ ಉಳಿದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದೀಗ ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ಆರ್ಸಿಬಿ ರಣತಂತ್ರ ರೂಪಿಸುತ್ತಿದೆ.

ಕಳೆದ ಮ್ಯಾಚ್ನಲ್ಲಿ 200+ ರನ್ ಕಲೆಹಾಕಿದ್ದರೂ ಆರ್ಸಿಬಿಗೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಬೌಲರ್ಗಳು ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಹರ್ಷಲ್ ಪಟೇಲ್ ಹಾಗೂ ಕರ್ಣ್ ಶರ್ಮಾ ದುಬಾರಿ ಆಗುತ್ತಿರುವುದು ತಂಡದ ಚಿಂತೆ ಹೆಚ್ಚಿಸಿದೆ. ವೇಯ್ನ್ ಪಾರ್ನೆಲ್ ಚೊಚ್ಚಲ ಪಂದ್ಯದಲ್ಲಿ 3 ವಿಕೆಟ್ ಪಡೆದುಕೊಂಡಿದ್ದರು. ಆದರೆ, 41 ರನ್ ನೀಡಿದ್ದರು.

ಬೆಂಗಳೂರು ತಂಡದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಆಗುವುದು ಖಚಿತ. ಶ್ರೀಲಂಕಾದ ಸ್ಟಾರ್ ಸ್ಪಿನ್ನರ್ ವನಿಂದು ಹಸರಂಗ ಮರಳಿರುವುದರಿಂದ ಓರ್ವ ವಿದೇಶಿ ಪ್ಲೇಯರ್ ಹಿಂದೆ ಸರಿಯಬೇಕಿದೆ. ಹರ್ಷಲ್ ಪಟೇಲ್ ಸ್ಥಾನ ಕೂಡ ತೂಗುಯ್ಯಾಲೆಯಲ್ಲಿದೆ.

ಡೇವಿಡ್ ವಿಲ್ಲೆ ಹಾಗೂ ಮೊಹಮ್ಮದ್ ಸಿರಾಜ್ ಮಾತ್ರ ಆರ್ಸಿಬಿ ಪರ ಪರಿಣಾಮಕಾರಿ ಆಗಿ ಗೋಚರಿಸಿದ್ದಾರೆ. ಉಳಿದಂತೆ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್, ಮಹಿಪಾಲ್ ಲುಮ್ರೂರ್, ಅನುಜ್ ರಾವತ್ ಇದ್ದಾರೆ.

ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿರಾಟ್ ಕೊಹ್ಲಿ.

ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ಮಧ್ಯಾಹ್ನ 3:30ಕ್ಕೆ ಶುರುವಾಗಲಿದೆ. ಇದಾದ ಬಳಿಕ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಲಖನೌ ಸೂಪರ್ ಜೇಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡ ಮುಖಾಮುಖಿ ಆಗಲಿದೆ.
Published On - 8:56 am, Sat, 15 April 23
