KL Rahul: RCB ಗೆ ಕನ್ನಡಿಗನೇ ಕಂಟಕ

Updated on: Apr 10, 2025 | 10:55 AM

IPL 2025 RCB vs DC: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಏಪ್ರಿಲ್ 10) ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಎದುರಾಳಿಯಾಗಿ ಕನ್ನಡಿಗ ಕೆಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ.

1 / 6
IPL 2025: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಅದು ಕೂಡ ಕರ್ನಾಟಕದ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕನ್ನಡಿಗ ಕೆಎಲ್ ರಾಹುಲ್ (KL Rahul) ಕಣಕ್ಕಿಳಿಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಎಂಬುದು ವಿಶೇಷ. ಹೀಗಾಗಿ ಇಂದಿನ ಪಂದ್ಯದಲ್ಲಿ ತವರು ಮೈದಾನದಲ್ಲಿ ಕೆಎಲ್ ರಾಹುಲ್​ಗೂ ಸಂಪೂರ್ಣ ಬೆಂಬಲ ದೊರೆಯಲಿದೆ.

2 / 6
ಇದುವೇ ಈಗ ಆರ್​ಸಿಬಿ ತಂಡದ ಚಿಂತೆಗೂ ಕಾರಣವಾಗಿದೆ. ಏಕೆಂದರೆ ಕೆಎಲ್ ರಾಹುಲ್ ಯಾವ ತಂಡದ ವಿರುದ್ಧ ಆಡುತ್ತರೋ ಗೊತ್ತಿಲ್ಲ. ಆದರೆ ಆರ್​ಸಿಬಿ ವಿರುದ್ಧ ಮಾತ್ರ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇದಕ್ಕೆ ಸಾಕ್ಷಿ  ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಅವರ ಅಂಕಿ ಅಂಶಗಳು.

3 / 6
ಏಕೆಂದರೆ ಕೆಎಲ್ ರಾಹುಲ್ ಇದುವರೆಗೆ ಆರ್​ಸಿಬಿ ವಿರುದ್ಧ ಒಟ್ಟು 15 ಇನಿಂಗ್ಸ್​ ಆಡಿದ್ದಾರೆ. ಈ ವೇಳೆ ಬರೋಬ್ಬರಿ 648 ರನ್​ ಕಲೆಹಾಕಿದ್ದಾರೆ. ಹಾಗೆಯೇ 5 ಬಾರಿ ಅಜೇಯರಾಗಿ ಕೂಡ ಉಳಿದಿದ್ದರು. ಅಂದರೆ ಆರ್​ಸಿಬಿ ವಿರುದ್ಧ ಕೆಎಲ್ ರಾಹುಲ್ 64.80 ಸರಾಸರಿಯಲ್ಲಿ ರನ್​ ಕಲೆಹಾಕಿದ್ದಾರೆ.

4 / 6
ಇನ್ನು ಆರ್​ಸಿಬಿ ವಿರುದ್ಧ 144 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವ ಕೆಎಲ್ ರಾಹುಲ್ 1 ಭರ್ಜರಿ ಶತಕ ಹಾಗೂ 3 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ. ಇದೇ ವೇಳೆ ಅವರ ಬ್ಯಾಟ್​ನಿಂದ ಮೂಡಿಬಂದಿರುವುದು 46 ಫೋರ್​ಗಳು ಹಾಗೂ 37 ಸಿಕ್ಸ್​ಗಳು.

5 / 6
ಅಂದರೆ ಆರ್​ಸಿಬಿ ವಿರುದ್ಧದ 15 ಇನಿಂಗ್ಸ್​ಗಳಲ್ಲಿ ಕೆಎಲ್ ರಾಹುಲ್ ಸಿಕ್ಸ್​ ಹಾಗೂ ಫೋರ್​ಗಳ ಮೂಲಕವೇ ಒಟ್ಟು 406 ರನ್​ ಬಾರಿಸಿದ್ದಾರೆ. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಹುಲ್ ಸ್ಪೋಟಕ ಬ್ಯಾಟಿಂಗ್​ ಮೂಲಕವೇ ಅಬ್ಬರಿಸಿದ್ದಾರೆ. ಇದೀಗ ತವರು ಮೈದಾನದಲ್ಲಿ ಆರ್​ಸಿಬಿ ತಂಡವನ್ನು ಎದುರಿಸಲು ಕೆಎಲ್​ಆರ್​  ಸಜ್ಜಾಗಿದ್ದಾರೆ.

6 / 6
ಇತ್ತ ಆರ್​ಸಿಬಿ ಅಭಿಮಾನಿಗಳು ಕೂಡ ಕೆಎಲ್ ರಾಹುಲ್ ಕಡೆಯಿಂದ ಭರ್ಜರಿ ಇನಿಂಗ್ಸ್​ನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೆಎಲ್​​ಆರ್ ಅಬ್ಬರಿಸಲಾರಂಭಿಸಿದರೆ ಪ್ರೇಕ್ಷಕರ ಗ್ಯಾಲರಿಯಿಂದ ಭರಪೂರ ಬೆಂಬಲ ವ್ಯಕ್ತವಾಗುವುದರಲ್ಲಿ ಅನುಮಾನವೇ ಇಲ್ಲ. ಇದುವೇ ಈಗ ಆರ್​ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿದೆ.