RCB vs GT Pitch Report: ಆರ್​ಸಿಬಿ-ಜಿಟಿ ರಣರೋಚಕ ಕದನಕ್ಕೆ ಚಿನ್ನಸ್ವಾಮಿ ರೆಡಿ: ಪಿಚ್ ಹೇಗಿದೆ ನೋಡಿ

|

Updated on: May 21, 2023 | 9:28 AM

RCB vs GT, IPL 2023: ಸಾಕಷ್ಟು ಕುತೂಹಲ ಕೆರಳಿಸಿರುವ ಆರ್​ಸಿಬಿ-ಜಿಟಿ ಪಂದ್ಯಕ್ಕೆ ಅಭಿಮಾನಿಗಳು ಕಾದುಕುಳಿತಿದ್ದಾರೆ. ಆರ್​ಸಿಬಿ-ಜಿಟಿ ಪಂದ್ಯದ ಟಿಕೆಟ್ ಸಂಪೂರ್ಣ ಸೋಲ್ಡ್ ಔಟ್ ಆಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬಗ್ಗೆ ನೋಡುವುದಾದರೆ ಇದು ಸಂಪೂರ್ಣ ಬ್ಯಾಟಿಂಗ್ ಪಿಚ್ ಎನ್ನಬಹುದು.

1 / 7
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಇಂದು ಎರಡು ರಣರೋಚಕ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮುಂಬೈ-ಹೈದರಾಬಾದ್ ಮುಖಾಮುಖಿ ಆದರೆ, ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ.

2 / 7
ಮಧ್ಯಾಹ್ನ ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಹೈದರಾಬಾದ್ ಪಂದ್ಯದಲ್ಲಿ ಮುಂಬೈ ಗೆದ್ದರೆ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಬಹುದು. ಅಂತೆಯೆ 2ನೇ ಪಂದ್ಯದಲ್ಲಿ ಆರ್​ಸಿಬಿ ಜಯ ಸಾಧಿಸಿದರೆ ಮುಂಬೈ ತಂಡವನ್ನು ಹಿಂದಿಕ್ಕಿ ಆರ್​ಸಿಬಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಬಹುದು. ಹೀಗಾದರೆ ಆರ್​ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ.

3 / 7
ಹೀಗೆ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಪಂದ್ಯಕ್ಕೆ ಅಭಿಮಾನಿಗಳು ಕಾದುಕುಳಿತಿದ್ದಾರೆ. ಆರ್​ಸಿಬಿ-ಜಿಟಿ ಪಂದ್ಯದ ಟಿಕೆಟ್ ಸಂಪೂರ್ಣ ಸೋಲ್ಡ್ ಔಟ್ ಆಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬಗ್ಗೆ ನೋಡುವುದಾದರೆ ಇದು ಸಂಪೂರ್ಣ ಬ್ಯಾಟಿಂಗ್ ಪಿಚ್ ಎನ್ನಬಹುದು.

4 / 7
ಚಿನ್ನಸ್ವಾಮಿ ಪಿಚ್ ಟ್ರ್ಯಾಕ್‌ ಅತ್ಯುತ್ತಮವಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವುದರಿಂದ ಬ್ಯಾಟಿಂಗ್​ಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಇಂದು ಹೈ ಸ್ಕೋರ್​ ಪಂದ್ಯ ಆಗುವುದು ಖಚಿತ. ಅಲ್ಲದೆ ಇಲ್ಲಿ ಬೌಂಡರಿ ಗೆರೆ ಕೂಡ ಅಂತ್ಯಂತ ಸಮೀಪವಿರುವ ಕಾರಣ ಫೋರ್-ಸಿಕ್ಸರ್​ಗಳ ಮಳೆ ಸುರಿಯಲಿದೆ.

5 / 7
ಬೌಲರ್​ಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶಕ್ತಿ ಮೀರಿ ಪ್ರಯತ್ನ ತೋರಬೇಕು. ಎಷ್ಟೇ ದೊಡ್ಡ ಮೊತ್ತವನ್ನು ಬಾರಿಸಿದರೂ ಇಲ್ಲಿ ಚೇಸ್​ ಮಾಡಿ ಗೆಲುವು ಸಾಧಿಸಿಬಹುದು. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡುವುದು ಉತ್ತಮ.

6 / 7
ಇನ್ನು ಈ ಪಂದ್ಯಕ್ಕೆ ವರುಣ ಅಡಚಣೆಯನ್ನುಂಟು ಮಾಡಲಿದೆ. ಸಂಜೆಯಿಂದ ಮಧ್ಯರಾತ್ರಿಯವರೆಗೂ ಮೋಡ ಕವಿದ ವಾತವರಣ ಇರಲಿದ್ದು, ಸಂಜೆ 5 ಗಂಟೆ, 7 ಗಂಟೆ ಹಾಗೂ 9 ಗಂಟೆಯ ವೇಳೆ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಹೀಗಾಗಿಯೇ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ ನಡೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

7 / 7
ಆರ್​ಸಿಬಿ ಮತ್ತು ಜಿಟಿ ನಡುವಿನ ಪಂದ್ಯವು ಸಂಜೆ 7.30 ಕ್ಕೆ ಪ್ರಾರಂಭವಾಗುತ್ತದೆ. ಟಾಸ್ 7 ಗಂಟೆಗೆ ನಡೆಯಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ನೋಡಬಹುದು. ವೀಕ್ಷಕರು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.